newsfirstkannada.com

ಬೆಂಗಳೂರಲ್ಲಿ ಜನನಿ ಸಾವಿನ ಬೆನ್ನಲ್ಲೇ ಮತ್ತೊಂದು ದುರಂತ.. ಖಾಸಗಿ ಆಸ್ಪತ್ರೆ ನಿರ್ಲಕ್ಷ್ಯಕ್ಕೆ ಬಾಣಂತಿ ಬಲಿ?

Share :

Published May 24, 2024 at 3:37pm

    ಸಿಲಿಕಾನ್ ಸಿಟಿಯಲ್ಲಿ ವೈದ್ಯರ ನಿರ್ಲಕ್ಷ್ಯಕ್ಕೆ ಇನ್ನೆಷ್ಟು ಬಾಣಂತಿಯರ ಬಲಿ ಬೇಕು?

    ಎಲಿಜಬೆತ್ ಸಾವಿಗೆ ವೈದ್ಯರ ನಿರ್ಲಕ್ಷ್ಯವೇ ಮುಖ್ಯ ಕಾರಣ ಅಂತ ಗಂಭೀರ ಆರೋಪ

    ಡಿಸ್ಚಾರ್ಜ್ ಸಮ್ಮರಿಯಲ್ಲಿ ಅನೆಸ್ತೇಶಿಯಾ ಬಗ್ಗೆ ಸುಳ್ಳು ಮಾಹಿತಿ ನೀಡಿದ್ರಾ ವೈದ್ಯರು!​

ಬೆಂಗಳೂರು: ಇತ್ತೀಚೆಗೆ ಸಿಲಿಕಾನ್​ ಸಿಟಿಯಲ್ಲಿ ವೈದ್ಯರ ನಿರ್ಲಕ್ಷ್ಯದಿಂದ ಬಾಣಂತಿಯರು ಸಾವನ್ನಪ್ಪುತ್ತಿದ್ದಾರೆ ಎಂಬ ಆರೋಪಗಳು ಕೇಳಿ ಬರುತ್ತಿವೆ. ನಿನ್ನೆಯಷ್ಟೇ ವೈದ್ಯರ ನಿರ್ಲಕ್ಷ್ಯಕ್ಕೆ ಜನನಿ ಎಂಬ ಬಾಣಂತಿ ಮೃತಪಟ್ಟಿದ್ದಳು. ಜನನಿ ಸಾವಿನ ಬೆನ್ನಲ್ಲೇ ಅಂತಹದೇ ಮತ್ತೊಂದು ಘಟನೆ ಸಿಲಿಕಾನ್ ಸಿಟಿಯಲ್ಲಿ ಬೆಳಕಿಗೆ ಬಂದಿದೆ. ಡೆಲಿವರಿ ಬಳಿಕ ಎಲಿಜಬೆತ್ ಎಂಬ ಮಹಿಳೆ ಕೊನೆಯುಸಿರೆಳೆದಿದ್ದಾಳೆ. ಆದರೆ ನಮ್ಮ ಮಗಳ ಸಾವಿಗೆ ರೈನ್ ಬೋ ಚಿಲ್ಡ್ರನ್ ಆಸ್ಪತ್ರೆಯ ವೈದ್ಯರೇ ಕಾರಣ ಅಂತ ಕುಟುಂಬಸ್ಥರು ಆರೋಪಿಸಿ ಆಕ್ರೋಶ ಹೊರ ಹಾಕುತ್ತಿದ್ದಾರೆ.

ಇದನ್ನೂ ಓದಿ: ‘ಬೇರೆ ಆಸ್ಪತ್ರೆಗೆ ಹೋಗ್ತೀವಿ ಮಕ್ಕಳನ್ನು ಕೊಡಿ ಅಂದ್ರು ಕೊಡಲಿಲ್ಲ’- ಬಾಣಂತಿ ಸಾವಿನ ಕೇಸ್‌ಗೆ ಹೊಸ ಟ್ವಿಸ್ಟ್!

ಏನಿದು ಘಟನೆ?

ಮೇ 10ರ ರಾತ್ರಿ ರೈನ್ ಬೋ ಆಸ್ಪತ್ರೆಗೆ ಎಲಿಜಬೆತ್​ನನ್ನು ಸೇರಿಸಲಾಗಿತ್ತು. ಮೇ 11ರ ಮಧ್ಯರಾತ್ರಿ 2.45ರ ಸುಮಾರಿಗೆ ಎಲಿಜಬೆತ್ ಹೆಣ್ಣು ಮಗುವಿಗೆ ಜನ್ಮ ನೀಡುತ್ತಾಳೆ. 4.45ಕ್ಕೆ ವೈದ್ಯರೇ ತಾಯಿ-ಮಗು ಆರೋಗ್ಯವಾಗಿದ್ದಾರೆಂದು ಹೇಳಿದ್ದಾರಂತೆ. ಆದರೆ ಏಕಾಏಕಿ ಬೆಳಗ್ಗೆ 7.15ಕ್ಕೆ ಬಂದು ನಿಮ್ಮ ಹೆಂಡ್ತಿ ಆರೋಗ್ಯದಲ್ಲಿ ತೊಂದರೆಯಾಗಿದೆ. ವೆಂಟಿಲೇಟರ್ ವ್ಯವಸ್ಥೆ ಇಲ್ಲ, ಬೇರೆ ಆಸ್ಪತ್ರೆಗೆ ಶಿಫ್ಟ್ ಮಾಡಿ ಎಂದಿದ್ದರಂತೆ. ಹೀಗಾಗಿ ಕೂಡಲೇ ಎಲಿಜಬೆತ್​ಗೆ ಅರಿವಳಿಕೆ ನೀಡಿದ್ದಾರೆ. ಆದರೆ ಅರಿವಳಿಕೆ ನೀಡದ ಮೇಲೆ ಎಲಿಜಬೆತ್ ಆರೋಗ್ಯದಲ್ಲಿ ಮತ್ತಷ್ಟು ಏರುಪೇರು ಉಂಟಾಗಿದೆ. ಕೂಡಲೇ ಬೇರೆ ಆಸ್ಪತ್ರೆಗೆ ಶಿಫ್ಟ್ ಮಾಡಿದ್ರು ಚಿಕಿತ್ಸೆ ಫಲಕಾರಿ ಆಗಲಿಲ್ಲ. ಮೇ.13ಕ್ಕೆ ಬ್ಯಾಪ್ಟಿಸ್ಟ್ ಆಸ್ಪತ್ರೆಯಲ್ಲಿ ಎಲಿಜಬೆತ್ ಉಸಿರಾಟ ನಿಲ್ಲಿಸಿದ್ದಾಳೆ.

ಕುಟುಂಬಸ್ಥರ ಆರೋಪವೇನು?

ಆರೋಗ್ಯವಾಗಿದ್ದ ಎಲಿಜಬೆತ್ ಸಾವಿಗೆ ವೈದ್ಯರ ನಿರ್ಲಕ್ಷ್ಯವೇ ಕಾರಣ ಅಂತ ಕುಟುಂಬಸ್ಥರು ಗಂಭೀರವಾಗಿ ಆರೋಪಿಸಿದ್ದಾರೆ. ಹೆರಿಗೆ ವೇಳೆ ರಕ್ತದ ಪ್ರಮಾಣದಲ್ಲಿ 32,000 ಪ್ಲೇಟ್ಲೇಟ್ಸ್ ಕಡಿಮೆಯಾಗಿತ್ತು. ಜನರಲ್ ಅನಸ್ತೇಶಿಯಾ ಬದಲು ಸ್ಪೈನಲ್ ಅನಸ್ತೇಶಿಯಾ ನೀಡಿದ್ದಾರೆ. ಎಲಿಜಬೆತ್​ಗೆ ಮಗುವಿನ ಮುಖ ಆಸ್ಪತ್ರೆಯವರು ತೋರಿಸಲೇ ಇಲ್ಲ. ಡಿಸ್ಚಾರ್ಜ್ ಸಮ್ಮರಿಯಲ್ಲಿ ಅನೆಸ್ತೇಶಿಯಾ ಬಗ್ಗೆ ಸುಳ್ಳು ಮಾಹಿತಿ ನೀಡಿದ್ದಾರೆ. ಎಲಿಜಬೆತ್​ಗೆ ಒಂದು ಡಿಸ್ಚಾರ್ಜ್ ಸಮ್ಮರಿಯಲ್ಲಿ ಇರೋದೇ ಒಂದು. ಇನ್ನೊಂದು ಡಿಸ್ಚಾರ್ಜ್ ಸಮ್ಮರಿಯಲ್ಲಿ ಇರೋದೇ ಬೇರೆ. ಹೆಲ್ಪ್ ಸಿಂಡ್ರೋಮ್​ಯಿಂದ ಬಳಲುತ್ತಿದ್ರು ಡೋಲೋ ತೆಗೆದು ಕೊಳ್ಳಲು ಹೇಳಿದ್ರು. ಎಲಿಜಬೆತ್ ಉಸಿರಾಟದ ಸಮಸ್ಯೆ ಆದಾಗ ವೆಂಟಿಲೇಟರ್ ವ್ಯವಸ್ಥೆ ಇರಲಿಲ್ಲ. ಸೌಲಭ್ಯ ಇಲ್ಲದೆ ನನ್ನ ಪತ್ನಿ ಅಡ್ಮಿಟ್ ಯಾಕೆ ಮಾಡಿಕೊಂಡರು. ಬ್ಯಾಪ್ಟಿಸ್ಟ್ ಶಿಫ್ಟ್ ಮಾಡುವಾಗ ಕೊಟ್ಟ ಚಿಕಿತ್ಸಾ ವಿವರ ಹೇಳಿಲ್ಲ. ಡಿಸ್ಚಾರ್ಜ್ ಸಮ್ಮರಿಯಲ್ಲಿ ಅದರ ಉಲ್ಲೇಖ ಮಾಡದೇ ಆಸ್ಪತ್ರೆ ಕಳ್ಳಾಟವಾಡಿದೆ. ಅಮಾನವೀಯವಾಗಿ ನಡೆದುಕೊಂಡಿದ್ದಾರೆಂದು ಎಂದು ಮೃತ ಎಲಿಜಬೆತ್​ ಕುಟುಂಬಸ್ಥರು ಗಂಭೀರವಾಗಿ ಆರೋಪಿಸುತ್ತಿದ್ದಾರೆ.

ಆಸ್ಪತ್ರೆ ವಾದವೇನು!

ಪೇಷಂಟ್ ಉಳಿಸಲು ಎಲ್ಲಾ ರೀತಿಯಲ್ಲೂ ಪ್ರಯತ್ನ ಮಾಡಿದ್ದೇವೆ. ಆಸ್ಪತ್ರೆ ಮತ್ತು ಸಿಬ್ಬಂದಿಯಿಂದ ಎಲ್ಲಾ ರೀತಿಯಲ್ಲೂ ಪ್ರಯತ್ನ ಆಗಿದೆ. ಆದರೆ ಗರ್ಭಿಣಿ ಎಲಿಜಬೆತ್ ಆರೋಗ್ಯದಲ್ಲಿ ಚೇತರಿಕೆ ಕಂಡಿಲ್ಲ ಎಂದು ಹೇಳಿದ್ದಾರೆ. ಸದ್ಯ ಮಗುವಿಗೆ ಜನನ ನೀಡಿದ ಪತ್ನಿಯನ್ನು ಹಾಗೂ ಮುದ್ದಾದ ಮಗಳನ್ನು ಕಳೆದುಕೊಂಡ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಬೆಂಗಳೂರಲ್ಲಿ ಜನನಿ ಸಾವಿನ ಬೆನ್ನಲ್ಲೇ ಮತ್ತೊಂದು ದುರಂತ.. ಖಾಸಗಿ ಆಸ್ಪತ್ರೆ ನಿರ್ಲಕ್ಷ್ಯಕ್ಕೆ ಬಾಣಂತಿ ಬಲಿ?

https://newsfirstlive.com/wp-content/uploads/2024/05/elizabeth-death.jpg

Load More