ಸಿಜೇರಿಯನ್ ಮಾಡುವಾಗ ವೈದ್ಯರು ಮಹಾ ಯಡವಟ್ಟು ಆರೋಪ.. ಹುಟ್ಟುತ್ತಲೇ ಅನಾಥವಾದ ಕಂದಮ್ಮ..

author-image
Veena Gangani
Updated On
ಸಿಜೇರಿಯನ್ ಮಾಡುವಾಗ ವೈದ್ಯರು ಮಹಾ ಯಡವಟ್ಟು ಆರೋಪ.. ಹುಟ್ಟುತ್ತಲೇ ಅನಾಥವಾದ ಕಂದಮ್ಮ..
Advertisment
  • ಬೆಂಗಳೂರಿನ ವಾಣಿ ವಿಲಾಸ್ ಆಸ್ಪತ್ರೆ ವೈದ್ಯರ ನಿರ್ಲಕ್ಷ್ಯ
  • ಕಳೆದ ಸೋಮವಾರ ಆಸ್ಪತ್ರೆಗೆ ಅಡ್ಮಿಟ್ ಆಗಿದ್ದ ಸ್ವಾತಿ
  • ನಾರ್ಮಲ್ ಡೆಲಿವರಿ ಆಗುತ್ತೆ ಎಂದಿದ್ದ ಆಸ್ಪತ್ರೆ ವೈದ್ಯರು

ಬೆಂಗಳೂರು: ವಾಣಿ ವಿಲಾಸ ಆಸ್ಪತ್ರೆಯಲ್ಲಿ ವೈದ್ಯರ ನಿರ್ಲಕ್ಷ್ಯಕ್ಕೆ ಬಾಣಂತಿ ಜೀವ ಕಳೆದುಕೊಂಡಿರುವ ಆರೋಪ ಕೇಳಿಬಂದಿದೆ. 25 ವರ್ಷದ ಬಾಣಂತಿ ಸ್ವಾತಿ ಮೃತ ಬಾಣಂತಿ. ಹೆರಿಗೆ ನಂತರ ನಿರ್ಲಕ್ಷ್ಯ ವೈದ್ಯರು ನಿರ್ಲಕ್ಷ್ಯ ಮಾಡಿದ್ದಾರೆ ಎಂದು ಕುಟುಂಬಸ್ಥರು ಆರೋಪಿಸಿದ್ದಾರೆ.

ಇದನ್ನೂ ಓದಿ: ಪಾದರಕ್ಷೆ ಕೊಳ್ಳಲು ದುಡ್ಡಿಲ್ಲ.. ಇಡೀ ಗ್ರಾಮಕ್ಕೆ ಪವನ್ ಕಲ್ಯಾಣ್‌ ಭರ್ಜರಿ ಗಿಫ್ಟ್‌; ಮನ ಮಿಡಿಯುವ ಸ್ಟೋರಿ!

publive-image

25 ವರ್ಷದ ಸ್ವಾತಿಗೆ ಹೆರಿಗೆ ನೋವು ಕಾಣಿಸಿತ್ತು. ಹೀಗಾಗಿ ಕಳೆದ ಸೋಮವಾರ ಬೆಂಗಳೂರಿನ ವಾಣಿ ವಿಲಾಸ್ ಆಸ್ಪತ್ರೆಗೆ ಅಡ್ಮಿಟ್ ಮಾಡಲಾಗಿತ್ತು. ಈ ನಾರ್ಮಲ್ ಡೆಲಿವರಿ ಆಗುತ್ತೆ ಎಂದಿದ್ದ ಆಸ್ಪತ್ರೆ ವೈದ್ಯರು ಬಳಿಕ ಸಿಜೇರಿಯನ್ ಮೂಲಕ ಹೆರಿಗೆ ಮಾಡಿಸಿದ್ರು. ಗಂಡು ಮಗುವಿಗೆ ಸ್ವಾತಿ ಜನ್ಮ ನೀಡಿದ್ಲು. ಸಿಜೇರಿಯನ್ ವೇಳೆ ವೈದ್ಯರು ಯಡವಟ್ಟು ಮಾಡಿದ ಆರೋಪ ಕೇಳಿ ಬಂದಿದೆ. ದೊಡ್ಡ ಕರುಳಿಗೆ ಡ್ಯಾಮೇಜ್ ಮಾಡ್ಲಾಗಿದೆ ಅಂತ ಪೋಷಕರು, ಸಂಬಂಧಿಗಳು ಹೇಳ್ತಿದ್ದಾರೆ.

publive-image

ಸುರಕ್ಷಿತ ಮಾತೃತ್ವ ಶ್ವಾಸನೆ ಎಂಬ ಹೆಸರು ಇಟ್ಕೊಂಡಿರುವ ವಾಣಿ ವಿಲಾಸ ದೊಡ್ಡ ಅಕ್ಷರದಲ್ಲಿ ಅಚ್ಚೆ ಹಾಕಿಸಿಕೊಂಡಿದೆ. ಆದ್ರೆ, ಅಸುರಕ್ಷಿತ ಹೆರಿಗೆ ಕ್ರಮಕ್ಕೆ ಸ್ವಾತಿ ಜೀವಕಳೆದುಕೊಂಡಿದ್ದಾಳೆ. ನಮಗೆ ನ್ಯಾಯ ಕೊಡಿ ಅಂತ ಸ್ವಾತಿ ತಾಯಿ ಕಣ್ಣೀರು ಇಡುತ್ತಿದ್ದಾರೆ. ಆ ಪುಟ್ಟ ಕಂದ ಅಮ್ಮನಿಲ್ಲದೇ ಬದುಕು ಸವೇಸುವ ಸ್ಥಿತಿ. ವಿಧಿ ಬರಹ ಘೋರ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment