/newsfirstlive-kannada/media/post_attachments/wp-content/uploads/2024/08/zika.jpg)
ಬೆಂಗಳೂರು: ಪಕ್ಕದ ಕೇರಳದಲ್ಲಿ ಮರಣ ತಾಂಡವ ಶುರು ಮಾಡಿದ್ದ ಝೀಕಾ ವೈರಸ್ ಕರುನಾಡಲ್ಲೂ ಭೀತಿ ಹುಟ್ಟಲು ಕಾರಣವಾಗಿದೆ. ರಾಜ್ಯದಲ್ಲಿ ಈ ಝೀಕಾಗೆ ಮೊದಲ ಬಲಿಯಾಗಿದೆ. ರಾಜ್ಯ ಸರ್ಕಾರದಿಂದ ಅಲರ್ಟ್ ಘೋಷಣೆ ಮಾಡಲಾಗಿದೆ.
ಇದನ್ನೂ ಓದಿ:ಝೀಕಾ ಬೆನ್ನಲ್ಲೇ ರಾಜ್ಯದ ಜನತೆಗೆ ಮಂಕಿಪಾಕ್ಸ್ ಭೀತಿ.. ಇದರ ರೋಗ ಲಕ್ಷಣಗಳು ಹೇಗಿರುತ್ತವೆ?
/newsfirstlive-kannada/media/post_attachments/wp-content/uploads/2024/07/zika.jpg)
ಹೌದು, ರಾಜ್ಯದ ಜನತೆಗೆ ದಿನ ಕಳೆದಂತೆ ಝೀಕಾ ಸೋಂಕಿನ ಬಗ್ಗೆ ಢವ ಢವ ಶುರುವಾಗಿದೆ. ಈಗಾಗಲೇ ಶಿವಮೊಗ್ಗದಲ್ಲಿ ಝೀಕಾ ವೈರಸ್​ಗೆ ಓರ್ವ ವೃದ್ಧ ಸಾವನ್ನಪ್ಪಿದ್ದಾನೆ. ರಾಜ್ಯದಲ್ಲಿ ಇದುವರೆಗೂ ಒಂಬತ್ತು ಝೀಕಾ ವೈರಸ್ ಪತ್ತೆಯಾಗಿದೆ. ಅದರಲ್ಲೂ ಶಿವಮೊಗ್ಗದಲ್ಲಿ ಮೂರು ಝೀಕಾ ಕೇಸ್ ಪತ್ತೆಯಾಗಿದ್ದು, ಒಬ್ಬರು ಸಾವನ್ನಪ್ಪಿದ್ದು, ಇಬ್ಬರು ಚೇತರಿಸಿಕೊಂಡಿದ್ದಾರೆ. ಬೆಂಗಳೂರಿನಲ್ಲಿ ಗರ್ಭಿಣಿ ಸೇರಿದಂತೆ 6 ಮಂದಿಗೆ ಝೀಕಾ ಪತ್ತೆಯಾಗಿದೆ. ಅದರಲ್ಲೂ ಮೂವರು ಗರ್ಭಿಣಿಯರಲ್ಲಿ ಝೀಕಾ ಪತ್ತೆಯಾಗಿದೆ. ಹೀಗಾಗಿ ಹೈ ಅಲರ್ಟ್ ಆಗಿರಲು ಆರೋಗ್ಯ ಇಲಾಖೆ ಕೂಡ ಸೂಚನೆ ನೀಡಿದೆ.
ಗರ್ಭಿಣಿಯರೇ ಎಚ್ಚರ!
ಝೀಕಾ ವೈರಸ್ ಮಗುವಿನ ಬ್ರೈನ್ ಬೆಳವಣಿಗೆಗೆ ಸಮಸ್ಯೆಗೆ ಕಾರಣ ಆಗುತ್ತಂತೆ. ಹೀಗಾಗಿ ಇಲಾಖೆ ಗರ್ಭಿಣಿಯರ ಪ್ರತ್ಯೇಕ ಸ್ಕ್ರೀನಿಂಗ್ ವ್ಯವಸ್ಥೆ ಯನ್ನು ಕೂಡ ಮಾಡಲು ತಯಾರಿ ನಡೆಸಲಾಗುತ್ತಿದೆ. ಝೀಕಾ ವೈರಸ್​ಗೆ ನಿಗದಿತ ಚಿಕಿತ್ಸೆ ಆಗಲಿ, ಲಸಿಕೆಯಾಗಲಿ ಇನ್ನೂ ಏನು ಇಲ್ಲ. ಈ ವೈರಸ್ ಗರ್ಭಿಣಿಯರಿಗೆ ಹೆಚ್ಚು ಅಪಾಯವೆಂದು ಅಧ್ಯಯನದಿಂದ ಬಯಲು ಮಾಡಿದೆ. ಹಗಲಿನಲ್ಲಿ ಹಾಗೂ ರಾತ್ರಿಯ ವೇಳೆ ಈ ವೈರಸ್​ ಸೊಳ್ಳೆಗಳು ಕಡಿತದಿಂದ ಬರುತ್ತದೆ. ಆದಷ್ಟು ಮನೆಯ ಸುತ್ತಮುತ್ತ ನೀರು ನಿಲ್ಲದಂತೆ ನೋಡಿಕೊಳ್ಳುವುದು ಉತ್ತಮ. ಸೊಳ್ಳೆ ನಿವಾರಕ ಕ್ರೀಮ್ ಬಳಕೆ ಮಾಡುವುದು, ಇಲ್ಲವಾದರೆ ಸೊಳ್ಳೆ ಪರದೆ ಬಳಸುವುದರಿಂದ ಸೋಂಕಿನಿಂದ ತಪ್ಪಿಸಿಕೊಳ್ಳಬಹುದಾಗಿದೆ. ಇದಕ್ಕೆ ಜನರು ಸೂಕ್ತ ಮುನ್ನೆಚ್ಚರಿಕೆ ತಗೆದುಕೋಳ್ಳಬೇಕಿದೆ. ಇನ್ನು, ಈ ಝೀಕಾ ವೈರಸ್​ ಗರ್ಭಾವಸ್ಥೆಯಲ್ಲಿ ಅಥವಾ ಹೆರಿಗೆಯ ಸಮಯದಲ್ಲಿ ಸೋಂಕಿತ ತಾಯಿಯಿಂದ ಮಗುವಿಗೆ ವರ್ಗಾವಣೆ ಆಗುತ್ತದೆ. ರೋಗದಲ್ಲಿ, ಶಿಶುಗಳಿಗೆ ಸಣ್ಣ ತಲೆ ಮತ್ತು ಮೆದುಳಿನ ಸಮಸ್ಯೆ ಕಾಣಿಸಬಹುದು.
/newsfirstlive-kannada/media/post_attachments/wp-content/uploads/2023/11/zika-1.jpg)
ಗರ್ಭಿಣಿಯರು ಹೇಗೆ ಎಚ್ಚರಿಕೆ ವಹಿಸಬೇಕು?
- ಸೊಳ್ಳೆ ನಿವಾರಕಗಳನ್ನು ಬಳಸುವುದು
- ಉದ್ದನೆಯ ತೋಳಿನ ಬಟ್ಟೆಗಳನ್ನು ಧರಿಸುವುದು,
- ಮನೆಯ ಅಕ್ಕ ಪಕ್ಕ ನಿಂತ ನೀರನ್ನು ಕ್ಲೀನ್ ಮಾಡ್ತಾ ಇರುವುದು
- ಗರ್ಭವತಿ ಮಹಿಳೆ ಇರುವ ಕಡೆ ಸೊಳ್ಳೆ ಉತ್ಪತ್ತಿ ತಾಣ ಆಗದಂತೆ ನೋಡಿ ಕೊಳ್ಳುವುದು
- ರಕ್ತ ತಪಾಸಣೆ ಮಾಡಬೇಕು
- 2 ದಿನಕ್ಕಿಂತ ಹೆಚ್ಚು ಜ್ವರ ಕಂಡು ಬಂದ್ರೆ ವೈದ್ಯರ ಬಳಿ ತಪಾಸಣೆ ಮಾಡಿ ಕೊಳ್ಳಬೇಕು
ಜಿಕಾ ವೈರಸ್ ಗುಣಲಕ್ಷಣಗಳು?
- ಜ್ವರ, ತಲೆನೋವು, ಕಣ್ಣು ಕೆಂಪಾಗುವಿಕೆ, ಗಂಧೆಗಳು(ದದ್ದುಗಳು),
- ಕೀಲು ಮತ್ತು ಸ್ನಾಯುಗಳಲ್ಲಿ ನೋವು ಹಾಗೂ ಇತರೆ ಲಕ್ಷಣಗಳು
- ಬಹುತೇಕರಲ್ಲಿ ಜಿಕಾ ರೋಗ ಲಕ್ಷಣಗಳು ಕಂಡುಬರುವುದಿಲ್ಲ
- ಸಾಮಾನ್ಯವಾಗಿ ರೋಗದ ಲಕ್ಷಣಗಳು 2-7 ದಿನಗಳವರೆಗೆ ಇರುತ್ತದೆ
- ಈಡಿಸ್ ಸೊಳ್ಳೆಗಳು ಕಚ್ಚುವಿಕೆಯಿಂದ ಪಾರಾಗಲು ಸೊಳ್ಳೆ ಉತ್ಪತ್ತಿ ತಾಣಗಳನ್ನು ನಾಶಪಡಿಸುವುದು
- ಮನೆಯ ಒಳಾಂಗಣ ಹಾಗೂ ಹೊರಾಂಗಣವನ್ನು ಸ್ವಚ್ಛವಾಗಿಡುವುದು
- ನೀರು ಸಂಗ್ರಹಣಾ ಪರಿಕರಗಳನ್ನು ವಾರಕ್ಕೊಮ್ಮೆ ಸ್ವಚ್ಛಗೊಳಿಸುವುದು ಹಾಗೂ ಮುಚ್ಚಳದಿಂದ ಮುಚ್ಚುವುದು
- ನಮ್ಮ ಸುತ್ತ-ಮುತ್ತಲಿನ ಪರಿಸರವನ್ನು ಸ್ವಚ್ಛವಾಗಿಟ್ಟುಕೊಳ್ಳುವುದು ಹಾಗೂ ನೀರು ನಿಲ್ಲದಂತೆ ಎಚ್ಚರವಹಿಸುವುದು
- ಸ್ವಯಂ ರಕ್ಷಣಾ ವಿಧಾನಗಳನ್ನು ಅನುಸರಿಸುವುದು.
- ಸೊಳ್ಳೆ ಪರದೆ, ಸೊಳ್ಳೆ ನಿರೋಧಕಗಳನ್ನು ಉಪಯೋಗಿಸುವುದು
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us