ಬೆಂಗಳೂರಿನಲ್ಲಿ ಗರ್ಭಿಣಿ ಸೇರಿದ ಹಾಗೇ 6 ಮಂದಿಗೆ ಝೀಕಾ ಪತ್ತೆ
ಝೀಕಾ ವೈರಸ್ ಜರಾಯುವಿನ ಮೂಲಕ ಹೇಗೆ ಹಾದು ಹೋಗುತ್ತೆ?
ಗರ್ಭಿಣಿಯರಿಗೆ ಹೈ ಅಲರ್ಟ್ ಆಗಿರಲು ಆರೋಗ್ಯ ಇಲಾಖೆ ಸೂಚನೆ
ಬೆಂಗಳೂರು: ಪಕ್ಕದ ಕೇರಳದಲ್ಲಿ ಮರಣ ತಾಂಡವ ಶುರು ಮಾಡಿದ್ದ ಝೀಕಾ ವೈರಸ್ ಕರುನಾಡಲ್ಲೂ ಭೀತಿ ಹುಟ್ಟಲು ಕಾರಣವಾಗಿದೆ. ರಾಜ್ಯದಲ್ಲಿ ಈ ಝೀಕಾಗೆ ಮೊದಲ ಬಲಿಯಾಗಿದೆ. ರಾಜ್ಯ ಸರ್ಕಾರದಿಂದ ಅಲರ್ಟ್ ಘೋಷಣೆ ಮಾಡಲಾಗಿದೆ.
ಇದನ್ನೂ ಓದಿ: ಝೀಕಾ ಬೆನ್ನಲ್ಲೇ ರಾಜ್ಯದ ಜನತೆಗೆ ಮಂಕಿಪಾಕ್ಸ್ ಭೀತಿ.. ಇದರ ರೋಗ ಲಕ್ಷಣಗಳು ಹೇಗಿರುತ್ತವೆ?
ಹೌದು, ರಾಜ್ಯದ ಜನತೆಗೆ ದಿನ ಕಳೆದಂತೆ ಝೀಕಾ ಸೋಂಕಿನ ಬಗ್ಗೆ ಢವ ಢವ ಶುರುವಾಗಿದೆ. ಈಗಾಗಲೇ ಶಿವಮೊಗ್ಗದಲ್ಲಿ ಝೀಕಾ ವೈರಸ್ಗೆ ಓರ್ವ ವೃದ್ಧ ಸಾವನ್ನಪ್ಪಿದ್ದಾನೆ. ರಾಜ್ಯದಲ್ಲಿ ಇದುವರೆಗೂ ಒಂಬತ್ತು ಝೀಕಾ ವೈರಸ್ ಪತ್ತೆಯಾಗಿದೆ. ಅದರಲ್ಲೂ ಶಿವಮೊಗ್ಗದಲ್ಲಿ ಮೂರು ಝೀಕಾ ಕೇಸ್ ಪತ್ತೆಯಾಗಿದ್ದು, ಒಬ್ಬರು ಸಾವನ್ನಪ್ಪಿದ್ದು, ಇಬ್ಬರು ಚೇತರಿಸಿಕೊಂಡಿದ್ದಾರೆ. ಬೆಂಗಳೂರಿನಲ್ಲಿ ಗರ್ಭಿಣಿ ಸೇರಿದಂತೆ 6 ಮಂದಿಗೆ ಝೀಕಾ ಪತ್ತೆಯಾಗಿದೆ. ಅದರಲ್ಲೂ ಮೂವರು ಗರ್ಭಿಣಿಯರಲ್ಲಿ ಝೀಕಾ ಪತ್ತೆಯಾಗಿದೆ. ಹೀಗಾಗಿ ಹೈ ಅಲರ್ಟ್ ಆಗಿರಲು ಆರೋಗ್ಯ ಇಲಾಖೆ ಕೂಡ ಸೂಚನೆ ನೀಡಿದೆ.
ಗರ್ಭಿಣಿಯರೇ ಎಚ್ಚರ!
ಝೀಕಾ ವೈರಸ್ ಮಗುವಿನ ಬ್ರೈನ್ ಬೆಳವಣಿಗೆಗೆ ಸಮಸ್ಯೆಗೆ ಕಾರಣ ಆಗುತ್ತಂತೆ. ಹೀಗಾಗಿ ಇಲಾಖೆ ಗರ್ಭಿಣಿಯರ ಪ್ರತ್ಯೇಕ ಸ್ಕ್ರೀನಿಂಗ್ ವ್ಯವಸ್ಥೆ ಯನ್ನು ಕೂಡ ಮಾಡಲು ತಯಾರಿ ನಡೆಸಲಾಗುತ್ತಿದೆ. ಝೀಕಾ ವೈರಸ್ಗೆ ನಿಗದಿತ ಚಿಕಿತ್ಸೆ ಆಗಲಿ, ಲಸಿಕೆಯಾಗಲಿ ಇನ್ನೂ ಏನು ಇಲ್ಲ. ಈ ವೈರಸ್ ಗರ್ಭಿಣಿಯರಿಗೆ ಹೆಚ್ಚು ಅಪಾಯವೆಂದು ಅಧ್ಯಯನದಿಂದ ಬಯಲು ಮಾಡಿದೆ. ಹಗಲಿನಲ್ಲಿ ಹಾಗೂ ರಾತ್ರಿಯ ವೇಳೆ ಈ ವೈರಸ್ ಸೊಳ್ಳೆಗಳು ಕಡಿತದಿಂದ ಬರುತ್ತದೆ. ಆದಷ್ಟು ಮನೆಯ ಸುತ್ತಮುತ್ತ ನೀರು ನಿಲ್ಲದಂತೆ ನೋಡಿಕೊಳ್ಳುವುದು ಉತ್ತಮ. ಸೊಳ್ಳೆ ನಿವಾರಕ ಕ್ರೀಮ್ ಬಳಕೆ ಮಾಡುವುದು, ಇಲ್ಲವಾದರೆ ಸೊಳ್ಳೆ ಪರದೆ ಬಳಸುವುದರಿಂದ ಸೋಂಕಿನಿಂದ ತಪ್ಪಿಸಿಕೊಳ್ಳಬಹುದಾಗಿದೆ. ಇದಕ್ಕೆ ಜನರು ಸೂಕ್ತ ಮುನ್ನೆಚ್ಚರಿಕೆ ತಗೆದುಕೋಳ್ಳಬೇಕಿದೆ. ಇನ್ನು, ಈ ಝೀಕಾ ವೈರಸ್ ಗರ್ಭಾವಸ್ಥೆಯಲ್ಲಿ ಅಥವಾ ಹೆರಿಗೆಯ ಸಮಯದಲ್ಲಿ ಸೋಂಕಿತ ತಾಯಿಯಿಂದ ಮಗುವಿಗೆ ವರ್ಗಾವಣೆ ಆಗುತ್ತದೆ. ರೋಗದಲ್ಲಿ, ಶಿಶುಗಳಿಗೆ ಸಣ್ಣ ತಲೆ ಮತ್ತು ಮೆದುಳಿನ ಸಮಸ್ಯೆ ಕಾಣಿಸಬಹುದು.
ಗರ್ಭಿಣಿಯರು ಹೇಗೆ ಎಚ್ಚರಿಕೆ ವಹಿಸಬೇಕು?
ಜಿಕಾ ವೈರಸ್ ಗುಣಲಕ್ಷಣಗಳು?
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ