/newsfirstlive-kannada/media/post_attachments/wp-content/uploads/2025/02/Preity-Zinta.jpg)
ಬಾಲಿವುಡ್ ಬ್ಯೂಟಿ ಪ್ರೀತಿ ಜಿಂಟಾ (Preity Zinta) ಕೇರಳ ಕಾಂಗ್ರೆಸ್ ವಿರುದ್ಧ ಗರಂ ಆಗಿದ್ದಾರೆ. ಸಾಲದ ವಿಚಾರವಾಗಿ ಕೇರಳ ಕಾಂಗ್ರೆಸ್ ನನ್ನ ವಿರುದ್ಧ ಸುಳ್ಳು ಸುದ್ದಿ ಹಬ್ಬಿಸುತ್ತಿದ್ದು, ನಾಚಿಕೆ ಆಗಬೇಕು ಎಂದು ಕಿಡಿಕಾರಿದ್ದಾರೆ.
ಏನಿದು ಪ್ರಕರಣ..?
ಆರ್ಥಿಕ ಸಂಕಷ್ಟದಲ್ಲಿರುವ ನ್ಯೂ ಇಂಡಿಯಾ ಕೋ ಅಪರೇಟೀವ್ ಬ್ಯಾಂಕ್ನಲ್ಲಿ ನಟಿ ಸಾಲ ಪಡೆದಿದ್ದರು. ತುಂಬಾ ವರ್ಷಗಳ ಹಿಂದೆ ಪ್ರೀತಿ ಜಿಂಟಾ ಪಡೆದಿದ್ದ ಸಾಲದ ಬಗ್ಗೆ ಕೇರಳ ಕಾಂಗ್ರೆಸ್ ಟ್ವೀಟ್ ಮಾಡಿತ್ತು. ನಟಿ ಪ್ರೀತಿ ಜಿಂಟಾ, ಮುಂಬೈನ ನ್ಯೂ ಇಂಡಿಯಾ ಕೋ ಅಪರೇಟೀವ್ ಬ್ಯಾಂಕ್ನಲ್ಲಿ ಪ್ರೀತಿ ಜಿಂಟಾ ಸಾಲ ಮಾಡಿದ್ದರು. ಅದು ಮನ್ನಾ ಆಗಿದೆ. ಪ್ರತಿಯಾಗಿ ಪ್ರೀತಿ ಜಿಂಟಾರ ಸೋಷಿಯಲ್ ಮೀಡಿಯಾ ಅಕೌಂಟ್ಗಳನ್ನು ಬಿಜೆಪಿ ಹ್ಯಾಂಡಲ್ ಮಾಡ್ತಿದೆ. ಕಳೆದ ವಾರ ಬ್ಯಾಂಕ್, ಭಾರೀ ಹಿನ್ನಡೆ ಅನುಭವಿಸಿದೆ ಎಂದು ಕೇರಳ ಕಾಂಗ್ರೆಸ್ ಆರೋಪಿಸಿತ್ತು.
ಕಾಂಗ್ರೆಸ್ ಆರೋಪಕ್ಕೆ ಸಿಟ್ಟಿಗೆದ್ದಿರುವ ಪ್ರೀತಿ ಜಿಂಟಾ, ನಾನು ನನ್ನ ಸೋಷಿಯಲ್ ಮೀಡಿಯಾ ಅಕೌಂಟ್ ಗಳನ್ನು ಅಪರೇಟ್ ಮಾಡುತ್ತಿದ್ದೇನೆ. ಫೇಕ್ ನ್ಯೂಸ್ ಪ್ರಮೋಟ್ ಮಾಡುತ್ತಿರುವುದಕ್ಕೆ ನಿಮಗೆ ನಾಚಿಕೆಯಾಗಬೇಕು. ನನ್ನ ಯಾವುದೇ ಸಾಲವನ್ನು ಯಾರೂ ಕೂಡ ರೈಟ್ ಆಫ್ ಮಾಡಿಲ್ಲ. ರಾಜಕೀಯ ಪಕ್ಷ, ಅವರ ಪ್ರತಿನಿಧಿಗಳು ಫೇಕ್ ನ್ಯೂಸ್ ಪ್ರಮೋಟ್ ಮಾಡುತ್ತಿರುವುದಕ್ಕೆ ಶಾಕ್ ಆಗಿದೆ. ರಾಜಕೀಯ ಪಕ್ಷ ನನ್ನ ಹೆಸರು, ಫೋಟೋ ಬಳಸಿಕೊಂಡು ಗಾಸಿಪ್, ಆರೋಪ, ಪ್ರತ್ಯಾರೋಪದಲ್ಲಿ ತೊಡಗಿದೆ. ನಾನು ಸಾಲ ಪಡೆದಿದ್ದೆ, 10 ವರ್ಷದ ಹಿಂದೆಯೇ ಅದನ್ನು ಮರುಪಾವತಿ ಮಾಡಿದ್ದೇನೆ. ಭವಿಷ್ಯದಲ್ಲಿ ಈ ಬಗ್ಗೆ ಯಾವುದೇ ತಪ್ಪು ಕಲ್ಪನೆ ಬೇಡ ಎಂದು ತಿರುಗೇಟು ನೀಡಿದ್ದಾರೆ.
She gave her social media accounts to BJP and got 18 Cr written off and the bank collapsed last week.
Depositors are on the streets for their money. pic.twitter.com/UnEMMUgslY— Congress Kerala (@INCKerala) February 24, 2025
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ