Advertisment

ದರ್ಶನ್‌ ಕೈಗೆ ಸಿಗರೇಟ್ ಕೊಟ್ಟವರು ಯಾರು? ಜೈಲಿನ ಫೋಟೋ & ರಾಜಾತಿಥ್ಯದ ಸ್ಫೋಟಕ ಸತ್ಯ ಬಹಿರಂಗ

author-image
Bheemappa
Updated On
ದರ್ಶನ್‌ ಕೈಗೆ ಸಿಗರೇಟ್ ಕೊಟ್ಟವರು ಯಾರು? ಜೈಲಿನ ಫೋಟೋ & ರಾಜಾತಿಥ್ಯದ ಸ್ಫೋಟಕ ಸತ್ಯ ಬಹಿರಂಗ
Advertisment
  • ಪರಪ್ಪನ ಅಗ್ರಹಾರಕ್ಕೆ ಸಿಗರೇಟ್, ಮದ್ಯ ತಂದು ಡೆಲಿವರಿ ಮಾಡಿದ್ದು ಯಾರು?
  • ಫೋಟೋ ಬಗ್ಗೆ ಜೈಲಿನ ಹಿರಿಯ ಅಧಿಕಾರಿಗಳ ವರದಿ ಏನು ಹೇಳುತ್ತದೆ?
  • ಸಿಗರೇಟ್‌ ತಂದುಕೊಟ್ಟ ಡೆಲಿವರಿ ಬಾಯ್ಸ್, ಜೈಲಾಧಿಕಾರಿಗಳ ಲಿಸ್ಟ್ ರೆಡಿ

ಬೆಂಗಳೂರು: ಪರಪ್ಪನ ಅಗ್ರಹಾರ ಜೈಲಿನಲ್ಲಿ ನಟ ದರ್ಶನ್​ಗೆ ರಾಜಾತಿಥ್ಯ ಪ್ರಕರಣಕ್ಕೆ ಸಂಬಂಧಿಸಿದಂತೆ ಫೋಟೋ ಹಾಗೂ ವಿಡಿಯೋ ಕಾಲ್​ಗಳ ತನಿಖಾ ವರದಿ ಬಂದಿದೆ. ನಗರ ಪೊಲೀಸ್ ಆಯುಕ್ತ ಬಿ.ದಯಾನಂದ್ ಅವರ ಕೈಗೆ ಪ್ರಾಥಮಿಕ ವರದಿ ತಲುಪಿದ್ದು ರೌಡಿಶೀಟರ್ ವೇಲು ಫೋಟೋ ವೈರಲ್ ಮಾಡಿರುವುದು ಕನ್ಫರ್ಮ್‌ ಆಗಿದೆ ಎನ್ನಲಾಗಿದೆ.

Advertisment

ಇದನ್ನೂ ಓದಿ: ಜೈಲಲ್ಲಿ ದರ್ಶನ್ ಭೇಟಿ ಮಾಡಿದ್ದೇಕೆ? ಪೊಲೀಸರಿಗೆ ಸಿನಿಮಾ ಡೈಲಾಗ್ ಹೊಡೆದ ಚಿಕ್ಕಣ್ಣ; ಆಮೇಲೇನಾಯ್ತು? 

ದರ್ಶನ್ ಅವರ ಸಿಗರೇಟ್ ಪಾರ್ಟಿ ಫೋಟೋವನ್ನು ತೆಗೆದು ಜೈಲಿನಲ್ಲಿರುವ ರೌಡಿಶೀಟರ್ ವೇಲು ಬೇರೆಯವರಿಗೆ ಕಳುಹಿಸಿದ್ದಾರೆ ಎಂದು ಹಿರಿಯ ಅಧಿಕಾರಿಗಳ ವರದಿ ಹೇಳುತ್ತಿದೆ. ಇದರ ಜೊತೆಗೆ ಸ್ವಿಗ್ಗಿ ಹಾಗೂ ಝೊಮ್ಯಾಟೊ ಮೂಲಕ ತಮಗೆ ಬೇಕಾದ ಸಿಗರೇಟ್, ಮದ್ಯ ತರಿಸಿಕೊಳ್ಳುತ್ತಿರುವ ಮಾಹಿತಿಯು ಹೊರ ಬಿದ್ದಿದೆ. ಹೀಗಾಗಿ ಸ್ವಿಗ್ಗಿ, ಝೊಮ್ಯಾಟೊ ಮೂಲಕ ವಸ್ತುಗಳನ್ನು ತಂದು ಕೊಟ್ಟ ಡೆಲಿವರಿ ಬಾಯ್ಸ್​ ಲಿಸ್ಟ್ ಅನ್ನು ಪೊಲೀಸರು ಸಿದ್ಧ ಮಾಡಿಕೊಂಡಿದ್ದು ಅವರನ್ನು ವಿಚಾರಣೆ ಮಾಡಲಿದ್ದಾರೆ. ಜೊತೆಗೆ ನಿರ್ಲಕ್ಷ್ಯ ವಹಿಸಿದ ಅಧಿಕಾರಿಗಳ ಹೆಸರುಗಳ ಪಟ್ಟಿ ಮಾಡಿದ್ದು ಪೊಲೀಸ್ ಆಯುಕ್ತರು ಪಟ್ಟಿಯನ್ನು ತರಿಸಿಕೊಂಡಿದ್ದಾರೆ.

publive-image

ಪರಪ್ಪನ ಅಗ್ರಹಾರ ಜೈಲಿನಲ್ಲಿ ದರ್ಶನ್ ಅವರ ಸಿಗರೇಟ್ ಪಾರ್ಟಿ ಫೋಟೋ ವೈರಲ್ ಆದ ಮೇಲೆ ಒಂದೊಂದೆ ವಿಷಯಗಳು ಬಯಲಿಗೆ ಬರುತ್ತಿವೆ. ಕೈದಿಗಳು ಜೈಲಿನಲ್ಲಿದ್ದರೂ ರಾಜಾರೋಷವಾಗಿ ತಮಗೆ ಬೇಕಾದ್ದನ್ನು ಸ್ವಿಗ್ಗಿ ಹಾಗೂ ಝೊಮ್ಯಾಟೊ ಮೂಲಕ ತರಿಸಿಕೊಳ್ಳುತ್ತಿದ್ದರು. ಜೈಲಾಧಿಕಾರಿಗಳ ಸಹಾಯದಿಂದ ಈ ಕೃತ್ಯ ಎಸಗಿರುವುದು ಬೆಳಕಿಗೆ ಬಂದಿದೆ. ಸದ್ಯ ಜೈಲಿನಲ್ಲಿನ ರಾಜಾತಿಥ್ಯದ ವರದಿ ಕಂಡು ಕಮಿಷನರ್ ಫುಲ್ ಶಾಕ್ ಆಗಿದ್ದಾರೆ.

Advertisment

ಇದನ್ನೂ ಓದಿ:ದರ್ಶನ್ ಇರೋ ಜೈಲಿಗೆ ₹100 ಕೋಟಿ ಖರ್ಚು ಮಾಡ್ತಾರಾ.. ಜೈಲು ಸುಧಾರಣೆ ಬಗ್ಗೆ DIG ಹೇಳಿದ್ದೇನು?

ಜೈಲಿನಲ್ಲಿ ಕೈದಿಗಳ ಪ್ರತಿಭಟನೆಗೆ ಸಂಬಂಧಿಸಿದಂತೆ ಜೈಲಿನ ನಿಯಮಾವಳಿ ಕುರಿತು ಸಾಕಷ್ಟು ಅನುಮಾನ ವ್ಯಕ್ತವಾಗುತ್ತಿದೆ. ಪ್ರತಿಯೊಬ್ಬ ಕೈದಿಗೂ ಬೀಡಿ, ಸಿಗರೇಟ್ ಸಿಗುತ್ತಿತ್ತು ಎಂದು ಹೇಳಲಾಗುತ್ತಿದೆ. ಸ್ವಿಗ್ಗಿ ಹಾಗೂ ಝೊಮ್ಯಾಟೊ ಮೂಲಕ ಜೈಲು ಅಧಿಕಾರಿಗಳು ತೆಗೆದುಕೊಂಡು ಅವುಗಳನ್ನು ಕೈದಿಗಳಿಗೆ ನೀಡುತ್ತಿದ್ದರು ಎಂದು ಅನುಮಾನ ವ್ಯಕ್ತವಾಗುತ್ತಿದೆ. ಸದ್ಯ ಈ ಬಗ್ಗೆ ವರದಿಯಲ್ಲಿ ಉಲ್ಲೇಖ ಮಾಡಲಾಗಿದ್ದು ಕುತೂಹಲ ಕೆರಳಿಸಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment
Advertisment
Advertisment