/newsfirstlive-kannada/media/post_attachments/wp-content/uploads/2024/08/jio.jpg)
ರಿಲಯನ್ಸ್ ಜಿಯೋ ಬಳಕೆದಾರರಿಗೆ ಹೊಸ ರೀತಿಯ ವಂಚನೆ ಬಗ್ಗೆ ಎಚ್ಚರಿಕೆ ನೀಡಿದೆ. ಇತ್ತೀಚೆಗೆ ಅಂತಾರಾಷ್ಟ್ರೀಯ ನಂಬರ್ಗಳಿಂದ ಮಿಸ್ಡ್ ಕಾಲ್ ಕೊಟ್ಟು ವಂಚಿಸಿದ ಘಟನೆಗಳು ಹೆಚ್ಚಿವೆ. ಕೆಲವು ನಂಬರ್ಗಳಿಂದ ಬರುವ ಕರೆಗಳನ್ನು ಸ್ವೀಕರಿಸಬೇಡಿ ಎಂದು ಸೂಚನೆ ನೀಡಿದೆ.
ಏನು ಮಾಡ್ತಿದ್ದಾರೆ ವಂಚಕರು..?
ವಂಚಕರು ಅಪರಿಚಿತ ಅಂತಾರಾಷ್ಟ್ರೀಯ ಸಂಖ್ಯೆಗಳಿಂದ ಮಿಸ್ಡ್ ಕಾಲ್ ಮಾಡ್ತಾರೆ. ಬಳಕೆದಾರರು ಈ ಸಂಖ್ಯೆಗಳಿಗೆ ವಾಪಸ್ ಕರೆ ಮಾಡಿದಾಗ ವಂಚಕರು ‘ಪ್ರೀಮಿಯಂ ದರ ಸೇವೆ’ಗೆ (Premium Rate Service) ಕನೆಕ್ಟ್ ಮಾಡುತ್ತಾರೆ. ಇದೊಂದು ಸ್ಕ್ಯಾಮ್ ಆಗಿದ್ದು, ಈ ಸೇವೆಗಳಿಗೆ ಕರೆ ಮಾಡಲು ಪ್ರತಿ ನಿಮಿಷಕ್ಕೆ ಭಾರೀ ಶುಲ್ಕ ವಿಧಿಸಲಾಗುತ್ತದೆ. ಇಂತಹ ಕರೆಗಳು ಬಳಕೆದಾರರಿಗೆ ಭಾರೀ ಆರ್ಥಿಕ ನಷ್ಟವನ್ನು ಉಂಟು ಮಾಡುತ್ತದೆ.
ಇದನ್ನೂ ಓದಿ: Whatsapp ನಲ್ಲಿ ಅಪ್ಪಿ ತಪ್ಪಿಯೂ ಹೀಗೆ ಮಾಡಿಬಿಟ್ರೆ ಜೈಲು ಶಿಕ್ಷೆ ಆಗುತ್ತೆ; ಇರಲಿ ಎಚ್ಚರ!
ವಂಚಕರು ಅಪರಿಚಿತ ಮತ್ತು ವಿಚಿತ್ರ ಕೋಡ್ಗಳನ್ನು ಬಳಸಿ ಮಿಸ್ಡ್ಕಾಲ್ ನೀಡುತ್ತಾರೆ. ಅವು ವಾಪಸ್ ಕರೆ ಮಾಡುವಂತೆ ನಿಮ್ಮನ್ನು ಪ್ರಚೋದಿಸುತ್ತವೆ. ಅದಕ್ಕೆ ‘+91’ ಹೊರತುಪಡಿಸಿ ಯಾವುದೇ ಕೋಡ್‌ನಿಂದ ಕರೆ ಬಂದರೂ ತೆಗೆಯದಿರೋದು ಒಳ್ಳೆಯದು. ಒಮ್ಮೆ ಕರೆ ಸ್ವೀಕರಿಸುವಾಗ ಮತ್ತು ವಾಪಸ್ ಮಾಡುವಾಗ ಜಾಗರೂಕರಾಗಿರಿ. ಅಂತಹ ನಂಬರ್ಗಳನ್ನು ಬ್ಲಾಕ್ ಮಾಡಿ ಎಂದು ಜಿಯೋ ಮನವಿ ಮಾಡಿಕೊಂಡಿದೆ.
ಅಪರಿಚಿತ ಅಥವಾ ಅನುಮಾನಾಸ್ಪದ ಕರೆಗಳನ್ನು ನಿರ್ಲಕ್ಷಿಸಿ. ಅಂತಹ ವಂಚನೆಯಿಂದ ದೂರ ಇರಲು ನಿಮ್ಮ ಹತ್ತಿರದವರನ್ನೂ ಎಚ್ಚರಿಸಿ. ಅಪರಿಚಿತ ಸಂಖ್ಯೆಗಳಿಂದ ಬರುವ ಕರೆಗಳನ್ನು ಗಂಭೀರವಾಗಿ ಪರಿಗಣಿಸಿ ಮತ್ತು ಎಚ್ಚರದಿಂದಿರಿ.
ಇದನ್ನೂ ಓದಿ:ಫೋನ್ ಪದೇ ಪದೆ ಬಿಸಿ ಆಗಲು ಕಾರಣ ನೀವೇ.. ಈ ತಪ್ಪುಗಳನ್ನು ಮಾಡಲೇಬೇಡಿ..!
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ