ನಟ ದುನಿಯಾ ವಿಜಯ್​​, ಡಾಲಿ ನೇತೃತ್ವದಲ್ಲಿ ಗುರುಪ್ರಸಾದ್​​ ಅಂತ್ಯಸಂಸ್ಕಾರಕ್ಕೆ ಸಿದ್ಧತೆ

author-image
Ganesh Nachikethu
Updated On
ನಿರ್ದೇಶಕ ಗುರುಪ್ರಸಾದ್ ಪ್ರಕರಣದ ತನಿಖೆ ಚುರುಕು.. ಮಹತ್ವದ ಹೇಳಿಕೆ ಪಡೆದ ಪೊಲೀಸರು
Advertisment
  • ಮಠ ಖ್ಯಾತಿಯ ಡೈರೆಕ್ಟರ್​ ಗುರುಪ್ರಸಾದ್‌ ಸಾವು
  • ನೇಣು ಬಿಗಿದ ಸ್ಥಿತಿಯಲ್ಲಿ ಇವರ ಮೃತದೇಹ ಪತ್ತೆ!
  • ಸಾಲದ ಹೊರೆಯಿಂದ ಆತ್ಮಹತ್ಯೆ ಮಾಡಿಕೊಂಡ ಶಂಕೆ

ಬೆಂಗಳೂರು: ಮಠ ಖ್ಯಾತಿಯ ಗುರುಪ್ರಸಾದ್‌ ಸಾವು ಹಲವು ಅನುಮಾನಗಳಿಗೆ ಎಡೆಮಾಡಿಕೊಟ್ಟಿದೆ. ಗುರುಪ್ರಸಾದ್​​​ ತಮ್ಮ ಮಾದನಾಯಕಹಳ್ಳಿ ಇರೋ ಅಪಾರ್ಟ್‌ಮೆಂಟ್‌ನಲ್ಲಿ ನೇಣಿಗೆ ಶರಣಾಗಿದ್ದಾರೆ. ಸೀಲಿಂಗ್​ ಫ್ಯಾನ್​​ಗೆ ನೇಣು ಬಿಗಿದ ಸ್ಥಿತಿಯಲ್ಲಿ ಮೃತದೇಹ ಪತ್ತೆಯಾಗಿದೆ.

ಸಾಲದ ಹೊರೆಯಿಂದ ಆತ್ಮಹತ್ಯೆ ಶಂಕೆ

ಸದ್ಯಕ್ಕೆ ಸಿಕ್ಕ ಮಾಹಿತಿ ಪ್ರಕಾರ ಗುರುಪ್ರಸಾದ್​​​ ಕೋಟ್ಯಾಂತರ ರೂ. ಸಾಲು ಮಾಡಿಕೊಂಡಿದ್ದರು. ಸಾಲದ ಹೊರೆ ತಾಳಲಾರದೆ ಆಗಾಗ ತನ್ನ ಮನೆ ಬದಲಾವಣೆ ಮಾಡುತ್ತಿದ್ದರು. ಇವರ ವಿರುದ್ಧ ಹಲವು ದೂರುಗಳು ಕೂಡ ದಾಖಲಾಗಿದ್ದವು. ರಂಗನಾಯಕ ಸಿನಿಮಾ ಕೂಡ ಸೋತಿತ್ತು. ಈ ಕಾರಣದಿಂದಲೇ ಗುರುಪ್ರಸಾದ್​​ ನೇಣಿಗೆ ಶರಣಾಗಿದ್ದಾರೆ ಎಂದು ಹೇಳಲಾಗುತ್ತಿದೆ.

ಅನಾಥವಾದ ಗುರುಪ್ರಸಾದ್​​

ಗುರುಪ್ರಸಾದ್​​ ಮೃತದೇಹ ಅನಾಥವಾಗಿದೆ. ಇವರನ್ನು ತಮ್ಮ ಕುಟುಂಬಸ್ಥರು ಯಾರು ಬಂದಿಲ್ಲ ಅನ್ನೋ ಮಾಹಿತಿ ಲಭ್ಯವಾಗಿದೆ. ವಿಕ್ಟೋರಿಯಾ ಆಸ್ಪತ್ರೆಗೆ ಗುರುಪ್ರಸಾದ್​ ಮೃತದೇಹ ಕರೆ ತರಲಾಗಿದೆ.

ಅಂತ್ಯಸಂಸ್ಕಾರಕ್ಕೆ ಸಿದ್ಧತೆ

ನಟ ದುನಿಯಾ ವಿಜಯ್​​, ಡಾಲಿ ಧನಂಜಯ, ಸತೀಶ್​ ನೀನಾಸಂ ಅವರ ನೇತೃತ್ವದಲ್ಲಿ ಗುರುಪ್ರಸಾದ್​ ಅಂತ್ಯಸಂಸ್ಕಾರಕ್ಕೆ ಸಿದ್ಧತೆ ನಡೆಯುತ್ತಿದೆ. ಇವರು ಈಗಾಗಲೇ ವಿಕ್ಟೋರಿಯಾ ಆಸ್ಪತ್ರೆಗೆ ಆಗಮಿಸಿದ್ದು, ಎಲ್ಲವನ್ನು ಪರಿಶೀಲಿಸುತ್ತಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment