/newsfirstlive-kannada/media/post_attachments/wp-content/uploads/2025/03/classroom.jpg)
ಬೆಂಗಳೂರು: ರಾಜ್ಯ ಶಿಕ್ಷಣ ಇಲಾಖೆ ಮುಂಬರುವ 2025/26ನೇ ಶೈಕ್ಷಣಿಕ ಸಾಲಿನಿಂದ ಫ್ರೌಢ ಶಾಲೆ ವಿದ್ಯಾರ್ಥಿಗಳಿಗೆ ಲೈಂಗಿಕ ಶಿಕ್ಷಣ ಬೋಧನೆಗೆ ತಯಾರಿ ನಡೆಸಿದೆ. ಮಕ್ಕಳಿಗೆ ಲೈಂಗಿಕ ಶಿಕ್ಷಣ ನೀಡುವ ಬಗ್ಗೆ ಬಹಳ ವರ್ಷಗಳಿಂದ ಚರ್ಚೆಯ ಹಂತದಲ್ಲಿಯೇ ಇರುವ ಟಾಪಿಕ್ ಇದಾಗಿದೆ. ಸದ್ಯ ಸರ್ಕಾರ ವಾರಕ್ಕೆ ಎರಡು ತರಗತಿ ನಡೆಸಲು ನಿರ್ಧರಿಸಿದ್ದು, ಶಾಲಾ ಶಿಕ್ಷಣ ಇಲಾಖೆಯ ನಡೆಗೆ ಹಿಂದೂಪರ ಸಂಘಟನೆಗಳಿಂದ ವಿರೋಧ ವ್ಯಕ್ತವಾಗಿದೆ.
ಇದನ್ನೂ ಓದಿ: ಭಾರತಕ್ಕೆ ಜಾಕ್‌ಪಾಟ್: ಒಂದಲ್ಲ.. ಎರಡಲ್ಲ.. 7 ಕಡೆ KGF ಮಾದರಿಯ ಚಿನ್ನದ ನಿಕ್ಷೇಪ ಪತ್ತೆ; ಗುಡ್‌ನ್ಯೂಸ್!
ನಿರ್ಧಾರವೇನು?
- ಮಕ್ಕಳಲ್ಲಿ ಮೌಲ್ಯಗಳನ್ನು ಬೆಳೆಸಲು ಈ ಕ್ರಮಕ್ಕೆ ಮುಂದು
- ಶಾಲಾ ಶಿಕ್ಷಣ ಇಲಾಖೆಯ ನಡೆಗೆ ಹಿಂದೂಪರ ಸಂಘಟನೆಗಳಿಂದ ವಿರೋಧ
ಲೈಂಗಿಕ ಶಿಕ್ಷಣ ಲಾಭ
- ತಪ್ಪು ಕಲ್ಪನೆಯನ್ನು ಹೋಗಲಾಡಿಸಲು ಸರಿಯಾದ ಲೈಂಗಿಕ ಶಿಕ್ಷಣ ಅನಿವಾರ್ಯ
- ಲೈಂಗಿಕ ಶಿಕ್ಷಣ ಪಡೆಯುವುದರಿಂದ ಹದಿಹರೆಯದ ಗರ್ಭಧಾರಣೆಯ ಕಷ್ಟ ಸವಾಲುಗಳ ಬಗ್ಗೆ ಮಾಹಿತಿ
- ಲೈಂಗಿಕ ನಿಂದನೆ ಅಥವಾ ಹಿಂಸೆಯಿಂದ ರಕ್ಷಣೆ ಸಾಧ್ಯತೆಮಕ್ಕಳು ಒಳ್ಳೆಯ ಅಥವಾ ಕೆಟ್ಟ ಸ್ಪರ್ಶದ ನಡುವೆ ವ್ಯತ್ಯಾಸವನ್ನು ಕಲಿಯುವ ಸಾಧ್ಯತೆ
- ಲೈಂಗಿಕ ನಿಂದನೆ ಅಥವಾ ಹಿಂಸೆಗೆ ಬಲಿಯಾಗದಂತೆ ರಕ್ಷಿಸಲು ಸಹಕಾರಿ
- ತಮ್ಮ ದೇಹದ ಮೇಲೆ ಉತ್ತಮ ತಿಳುವಳಿಕೆ ಮತ್ತು ಸ್ವಾಯತ್ತತೆ ಪಡೆಯಲು ಅವಶ್ಯ
- ಪ್ರೌಢಾವಸ್ಥೆಯ ವರ್ಷಗಳಲ್ಲಿ ಮಗುವಿನ ಮೇಲಾಗುವ ಬದಲಾವಣೆ ಅರಿಯಲು ಅನೂಕೂಲ
ಇದಕ್ಕೆ ವಿರೋಧ ಯಾಕೆ?
- ಭಾರತೀಯ ಸಂಸ್ಕೃತಿಯತ್ತ ಮಕ್ಕಳ ಮನಸ್ಸಿಗೆ ಪಾಠ ಹೇಳಬೇಕು
- ಲೈಂಗಿಕ ಶಿಕ್ಷಣ ಅಂತ ಈ ಪಾಶ್ಚಿಮಾತ್ಯ ಶಿಕ್ಷಣ ಯಾಕೆ ಅಂತ ಆಕ್ರೋಶ
- ಮಕ್ಕಳಿಗೆ ನೀತಿ ಪಾಠ ನೈತಿಕ ಶಿಕ್ಷಣ ಸಂಸ್ಕೃತಿ ಅವಶ್ಯ
- ಲೈಂಗಿಕ ಶಿಕ್ಷಣ ಎಷ್ಟು ಮುಖ್ಯ ಹಾಗೂ ಅವಶ್ಯಕತೆ ಇದೆ ಅಂತಾ ವಿರೋಧ ಹೊರ ಹಾಕುತ್ತಿದ್ದಾರೆ.
- ಮಕ್ಕಳಿಗೆ ಮೊದಲು ಭಾರತೀಯ ಸಂಸ್ಕಾರ ಪರಿಚಯಿಸುವ ಅವಶ್ಯಕತೆ ಇದೆ
- ಹೀಗಾಗಿ ಶಾಲಾ ಶಿಕ್ಷಣ ಇಲಾಖೆ ಪರಿಚಯಿಸಲು ಮುಂದಾಗಿರುವ ಲೈಂಗಿಕ ಶಿಕ್ಷಣಕ್ಕೆ ಪರ ವಿರೋಧ ಚರ್ಚೆ ಶುರು
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ