Advertisment

ಸರ್ಕಾರಿ ಆಸ್ಪತ್ರೆ ವೈದ್ಯ ಬರೆದ ಪ್ರಿಸ್ಕ್ರಿಪ್ಷನ್ ನೋಡಿ ಮೆಡಿಕಲ್ ಸಿಬ್ಬಂದಿ ತಲೆ ಗಿರಗಿರ; ಕಾರಣ ಕೇಳಿದ್ರೆ ಶಾಕ್ ಆಗ್ತೀರಾ

author-image
admin
Updated On
ಸರ್ಕಾರಿ ಆಸ್ಪತ್ರೆ ವೈದ್ಯ ಬರೆದ ಪ್ರಿಸ್ಕ್ರಿಪ್ಷನ್ ನೋಡಿ ಮೆಡಿಕಲ್ ಸಿಬ್ಬಂದಿ ತಲೆ ಗಿರಗಿರ; ಕಾರಣ ಕೇಳಿದ್ರೆ ಶಾಕ್ ಆಗ್ತೀರಾ
Advertisment
  • ಎದೆನೋವು ಅಂತ ಆಸ್ಪತ್ರೆಗೆ ಬಂದ ರೋಗಿಯನ್ನು ಪರೀಕ್ಷಿಸಿದ ವೈದ್ಯ
  • ಬಡ ರೋಗಿಯ ಮೇಲೆ ಸರ್ಕಾರಿ ಆಸ್ಪತ್ರೆ ವೈದ್ಯನ ಕೋಪ ಯಾಕೆ ಗೊತ್ತಾ?
  • ಸೋಷಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆದ ಡಾಕ್ಟರ್ ಕೈಬರಹ!

ಭೋಪಾಲ್‌: ನೀವು ಆಸ್ಪತ್ರೆಗೆ ಹೋದರೆ ಔಷಧಿ, ಗುಳಿಗೆಗಳ ಬಗ್ಗೆ ವೈದ್ಯರು ಕೊಡುವ ಕೈಬರಹ ಚೀಟಿ (ಪ್ರಿಸ್ಕ್ರಿಪ್ಷನ್) ನೋಡಿರುತ್ತೀರಿ. ಅದು ಮೆಡಿಕಲ್ ಸ್ಟೋರ್​ ಸಿಬ್ಬಂದಿ ಬಿಟ್ಟು ಬೇರೆಯವರಿಗೆ ಅರ್ಥ ಮಾಡಿಕೊಳ್ಳುವುದು ಕಷ್ಟ. ಇಂಥದ್ದೊಂದು ವೈದ್ಯರ ಪ್ರಿಸ್ಕ್ರಿಪ್ಷನ್ ವೈರಲ್ ಆಗುತ್ತಿದೆ.

Advertisment

ಇದನ್ನೂ ಓದಿ: ರಾತ್ರಿಯೆಲ್ಲಾ ಅದಿತಿ ಪ್ರಭುದೇವ ಮಲಗೋದೆ ಇಲ್ವಂತೆ; ಅಸಲಿಗೆ ಏನ್ಮಾಡ್ತಾರೆ ಗೊತ್ತಾ? 

ಇದು ಮಧ್ಯಪ್ರದೇಶದ ಸಾತ್ನಾ ಜಿಲ್ಲೆಯ ಸರ್ಕಾರಿ ವೈದ್ಯರೊಬ್ಬರ ಪ್ರಿಸ್ಕ್ರಿಪ್ಷನ್. ವೈದ್ಯರು ಬರೆದ ಔಷಧಿ ಚೀಟಿ ನೋಡಿದ ಮೆಡಿಕಲ್ ಸ್ಟೋರ್ ಸಿಬ್ಬಂದಿ ತಲೆ ಗಿರಗಿರ ಎಂದಿದೆ.

publive-image

ಸತ್ನಾ ಜಿಲ್ಲೆಯ ರಾಹಿಕ್ವಾಡ್ ನಿವಾಸಿ ಅರವಿಂದ ಸೆನ್​ಗೆ ಎದೆನೋವು ಕಾಣಿಸಿಕೊಂಡಿದೆ. ಅವರು ಹತ್ತಿರದ ನಾಗವಾಡದ ಸರ್ಕಾರಿ ಆಸ್ಪತ್ರೆಗೆ ತೆರಳಿದ್ದಾರೆ. ಅಲ್ಲಿ ಡಾ.ಅಮಿತ್ ಸೋನಿ ಅವರನ್ನು ಭೇಟಿಯಾಗಿ ಎದೆ ನೋವಿನ ಬಗ್ಗೆ ಹೇಳಿದ್ದಾರೆ. ರೋಗಿಯನ್ನು ಪರೀಕ್ಷಿಸಿದ ವೈದ್ಯ ಡಾ.ಅಮಿತ್ ಸೋನಿ ಅವರು ಅರವಿಂದ್ ಸೇನ್​ಗೆ ತಮ್ಮದೇ ಖಾಸಗಿ ಆಸ್ಪತ್ರೆಗೆ ಬರುವಂತೆ ತಿಳಿಸಿದ್ದಾರೆ.

Advertisment

ಇದನ್ನೂ ಓದಿ: ಈ ಪಾನೀಯ ಕುಡಿದು ಕಾಯಿಲೆಗೆ ಹೇಳಿ ಗುಡ್ ಬೈ​; ಪ್ರಿಯಾಂಕಾ ಚೋಪ್ರಾ ಫಿಟ್‌ನೆಸ್​ಗೆ ಇದೇ ಕಾರಣ! 

ಆದರೆ ಆರ್ಥಿಕ ಪರಿಸ್ಥಿತಿಯಿಂದ ಖಾಸಗಿ ಆಸ್ಪತ್ರೆಗೆ ಚಿಕಿತ್ಸೆ ನಿರಾಕರಿಸಿ ಇಲ್ಲಿಯೆ ಚಿಕಿತ್ಸೆ ನೀಡುವಂತೆ ಮನವಿ ಮಾಡಿದ್ದಾರೆ. ಇದರಿಂದ ಸಿಟ್ಟಿಗೆದ್ದ ಡಾ.ಅಮಿತ್ ಸೋನಿ ಔಷಧಿ ಚೀಟಿಯೊಂದನ್ನು ನೀಡಿ ಆಸ್ಪತ್ರೆಯಿಂದ ತೆರಳಿದ್ದಾರೆ.

publive-image

ಅರವಿಂದ್ ಸೇನ್ ಆಸ್ಪತ್ರೆಯಿಂದ ಮೆಡಿಕಲ್ ಸ್ಟೋರ್​ ಬಂದು ವೈದ್ಯರು ಬರೆದ ಔಷಧಿ ಚೀಟಿ ನೀಡಿದ್ದಾರೆ. ಆದರೆ ಮೆಡಿಕಲ್​ನಲ್ಲಿದ್ದ ಯಾವುದೇ ಸಿಬ್ಬಂದಿಗೂ ಅರ್ಥ ಮಾಡಿಕೊಳ್ಳಲಾಗಿಲ್ಲ. ವಾಸ್ತವವಾಗಿ ವೈದ್ಯ ಯಾವುದೇ ಔಷಧಿಯೇ ಬರೆದಿರಲಿಲ್ಲ. ಖಾಸಗಿ ಕ್ಲಿನಿಕ್​ಗೆ ಬರಲ್ಲ ಎಂದಿದ್ದಕ್ಕೆ ಸುಮ್ಮನೆ ಏನೋ ಗೀಚಿ ಅದನ್ನು ರೋಗಿಗೆ ನೀಡಿದ್ದ.

Advertisment

ಮೆಡಿಕಲ್ ಸಿಬ್ಬಂದಿ ಒಬ್ಬರು ಫೋಟೋ ತೆಗೆದು ಸಾಮಾಜಿಕ ಜಾಲತಾಣದಲ್ಲಿ ಹಾಕಿದ್ದು ಅದೀಗ ವೈರಲ್ ಅಗಿದೆ. ಔಷಧಿ ಚೀಟಿ ಬಳಿಕ ವೈದ್ಯರ ವಿರುದ್ಧ ಕ್ರಮಕ್ಕೆ ಮಧ್ಯಪ್ರದೇಶ ಆರೋಗ್ಯ ಇಲಾಖೆ ಸೂಚನೆ ನೀಡಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment
Advertisment
Advertisment