/newsfirstlive-kannada/media/post_attachments/wp-content/uploads/2025/01/gallantry-awards.jpg)
ಗಣರಾಜ್ಯೋತ್ಸವದ ಅಂಗವಾಗಿ ರಾಷ್ಟ್ರಪ್ರತಿಗಳಾದ ದ್ರೌಪದಿ ಮುರ್ಮ ಅವರು ಒಟ್ಟು 93 ಶೌರ್ಯ ಪ್ರಶಸ್ತಿಗಳ ಪ್ರಧಾನಕ್ಕೆ ಅನುಮೋದನೆ ನೀಡಿದ್ದಾರೆ. ಅವುಗಳಲ್ಲಿ 14 ಶೌರ್ಯ ಚಕ್ರ, ಹಾಗೂ 2 ಕೀರ್ತಿ ಚಕ್ರ ಪ್ರಶಸ್ತಿಗಳು ಕೂಡ ಸೇರಿವೆ. ಸಶಸ್ತ್ರ ಪಡೆಯಲ್ಲಿ ಸೇವೆ ಸಲ್ಲಿಸಿದ ಯೋಧರಿಗೆ ಈ ಪ್ರಶಸ್ತಿಗಳನ್ನು ನೀಡಲಾಗುತ್ತದೆ.
ನಾಯಕ್​ ದಿಲ್ವಾರ್ ಖಾನ್​​ ಅವರಿಗೆ ಕೀರ್ತಿ ಚಕ್ರ ಪ್ರಶಸ್ತಿ ಪ್ರಧಾನ ಮಾಡಲಾಗುವುದು.ಇದು ಭಾರತದ ಎರಡನೇ ಅತ್ಯುನ್ನತ ಶೌರ್ಯ ಪ್ರಶಸ್ತಿಯಾಗಿದೆ. ದಿಲ್ವಾರ್ ಖಾನ್ ಅವರು ಕುಪ್ವಾರದಲ್ಲಿ ಭಯೋತ್ಪಾದಕರನ್ನು ಮಟ್ಟ ಹಾಕುವ ವೇಳೆ ಕಳೆದ ವರ್ಷ ಜುಲೈನಲ್ಲಿ ಹುತಾತ್ಮರಾಗಿದ್ದರು.
ಇನ್ನು 22 ರಾಷ್ಟ್ರೀಯ ರೈಫಲ್ಸ್​ನ ಮೇಜರ್​ ಮಂಜಿತ್ಅವರಿಗೆ ಶೌರ್ಯ ಚಕ್ರ ಪ್ರಶಸ್ತಿ ಪ್ರಧಾನ ಮಾಡಲಾಗುವುದು. ಮೇಜರ್ ಅಶೀಶ್ ದಹಿಯಾ 50 ಆರ್​ಆರ್​, ಮೇಜರ್ ಕುನಾಲ್ 1 ಆರ್​ಆರ್​, ಮೇಜರ್ ಸತೇಂದ್ರ ಧನ್ಕರ್​ 4 ಆರ್ಆರ್, ಕ್ಯಾಪ್ಟನ್ ದೀಪಕ್ ಸಿಂಗ್​ 48 ಆಆರ್​​​​ಆರ್​ ಹಾಗೂ ಅಸಿಸ್ಟಂಟ್ ಕಮಾಂಡಂಟ್ ಇಷ್ಣೋತಿಂಗ್​ ಕಿಕೊನ್​ 4 ಆಸ್ಸಾಂ ರೈಫಲ್ಸ್ ಇವರಿಗೆ ಶೌರ್ಯ ಚಕ್ರ ಪ್ರಶಸ್ತಿ ಲಭಿಸಲಿದೆ.
ಇದನ್ನೂ ಓದಿ:8 ವರ್ಷ, 40 ಸಾವಿರ ಗಿಡಗಳು.. ಬೋಳು ಬೆಟ್ಟವನ್ನೇ ನಿತ್ಯ ಹರಿದ್ವರ್ಣದ ಕಾಡು ಮಾಡಿದ ಭೂಪ; ಯಾರಿವನು?
ಸುಬೇದಾರ್ ವಿಕಾಸ್ ಟೊಮರ್ 1 ಪ್ಯಾರಾ, ಸುಬೇದಾರ್ ಮೋಹನ್ ರಾಮ್ 20 ಜಾಟ್ ರೆಜಿಮೆಂಟ್, ಹವಾಲ್ದಾರ್​ ಕುಮಾರ್ ದೊರ್ಗಾ, ಹವಾಲ್ದಾರ್​ ಪ್ರಕಾಶ್ ತಮಂಗ್​, 32ಆರ್​ಆರ್ ಫೈಟ್ ಲೆಫ್ಟಿನೆಂಟ್​ ಅಮನ್ ಸಿಂಗ್ ಹನ್ಸ್, ಕಾರ್ಪೊರಲ್ ದಾಭಿ, ಸಂಜಯ್ ಹಫೀ ಭಾಯ್ ಎಸ್ಸಾ ವಿಜಯನ್ ಕುಟ್ಟಿ, ವಿಕ್ರಾಂತ್ ಕುಮಾರ್, ಸಿಆರ್​ಪಿಎಫ್​ನ ಡೆಪ್ಯೂಟ ಕಮಾಂಡ್​ ವಿಕ್ರಮ್ ಕುಮಾರ್ ಮತ್ತು ಜೆಫ್ರಿ ಹಿಮುಂಗುಚುಲ್ಲೊ ಇವರಿಗೆಲ್ಲರಿಗೂ ಶೌರ್ಯ ಚಕ್ರ ಪ್ರಶಸ್ತಿ ಘೋಷಣೆಯಾಗಿದೆ
ಇದನ್ನೂ ಓದಿ: 9 ಕನ್ನಡಿಗರು ಸೇರಿ 139 ಸಾಧಕರಿಗೆ ಪದ್ಮ ಪ್ರಶಸ್ತಿ ಘೋಷಿಸಿದ ಕೇಂದ್ರ ಸರ್ಕಾರ
ಈ ಪ್ರಶಸ್ತಿಗಳನ್ನು ಬಾರ್ ಟು ಸೇನಾ ಮೆಡಲ್ (ಗ್ಯಾಲಂಟರಿ) 66 ಸೇನಾ ಮೆಡಲ್ (ಗ್ಯಾಲಂಟರಿ) 8 ವಾಯುಸೇನಾ ಮೆಡಲ್ (ಗ್ಯಾಲಂಟರಿ) ಮತ್ತು ಎರಡು ನಾವೊ ಸೇನಾ ಮೆಡಲ್ ಗ್ಯಾಲಂಟರಿ ಅವಾರ್ಡ್​​ಗಳಿಗೆ ರಾಷ್ಟ್ರಪತಿಗಳು ಅನುಮೋದನೆ ನೀಡಿದ್ದಾರೆ.
ಇವುಗಳಲ್ಲಿ 30 ಪರಮ ವಿಶಿಷ್ಟ ಸೇವಾ ಮೆಡಲ್ಸ್, ಐದು ಉತ್ತಮ್ ಯುದ್ಧ ಸೇವಾ ಮೆಡಲ್ಸ್, 57 ಅತಿವಿಶಿಷ್ಟ್​ ಸೇವಾ ಮೆಡಲ್ಸ್,10 ಯುದ್ಧ ಸೇವಾ ಮೆಡಲ್ಸ್​ ಒಂದು ಬಾರ್ ಟು ಸೇನಾ ಮೆಡಲ್ಸ್, 43 ಸೇನಾ ಮೆಡಲ್ಸ್​, 8 ನಾವೊ ಸೇನಾ ಮೆಡಲ್ಸ್​, 15 ವಾಯು ಸೇನಾ ಮೇಡಲ್ಸ್​, 4ಬಾರ್​ ಟು ವಿಶಿಷ್ಟ್​ ಸೇವಾ ಮೆಡಲ್ಸ್ ಹಾಗೂ 132 ವಿಶಿಷ್ಟ್ ಸೇವಾ ಮೆಡಲ್ಸ್ ಒಳಗೊಂಡಿವೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us