/newsfirstlive-kannada/media/post_attachments/wp-content/uploads/2025/03/sslc.jpg)
ಬೆಂಗಳೂರು: ನಾಳೆ ಅಖಂಡ ಕರ್ನಾಟಕ ಬಂದ್‌ಗೆ ವಾಟಾಳ್ ನಾಗಾರಾಜ್ ಕರೆ ನೀಡಿದ್ದಾರೆ. ಕನ್ನಡಿಗರ ಮೇಲಿನ ದಬ್ಬಾಳಿಕೆ ಖಂಡಿಸಿ ಹಿರಿಯ ಕನ್ನಡ ಹೋರಾಟಗಾರರು ಕೊಟ್ಟಿರೋ ಬಂದ್ ಕರೆಗೆ ಓಲಾ, ಉಬರ್, ಫಿಲ್ಮ್ ಚೇಂಬರ್ ಸಂಪೂರ್ಣ ಬೆಂಬಲ ಸೂಚಿಸಿದೆ. ಈ ಬಂದ್ನಿಂದ ಯಾವುದೇ ರೀತಿ ಮಕ್ಕಳಿಗೆ ತೊಂದರೆ ನೀಡಬಾರದು ಎಂದು ಖಾಸಗಿ ಶಾಲಾ ಒಕ್ಕೂಟ ಮನವಿ ಮಾಡಿದೆ.
ಇದನ್ನೂ ಓದಿ:ಇಂದಿನಿಂದ SSLC ಪರೀಕ್ಷೆ.. ಎಕ್ಸಾಂ ಬರೆಯಲು 8,96,447 ವಿದ್ಯಾರ್ಥಿಗಳು ನೋಂದಣಿ
ನಾಳೆ ಎಂಇಎಸ್, ಶಿವಸೇನೆ ಪುಂಡಾಟ ಖಂಡಿಸಿ ನಾಳೆ ಕನ್ನಡಪರ ಹೋರಾಟಗಾರ ವಾಟಾಳ್ ನಾಗರಾಜ್ ನೇತೃತ್ವದಲ್ಲಿ ಅಖಂಡ ಕರ್ನಾಟಕ ಬಂದ್‌ಗೆ ಕರೆ ನೀಡಲಾಗಿದೆ. ಈ ಮಧ್ಯೆ ಇಂದಿನಿಂದ ರಾಜ್ಯದಲ್ಲಿ 10ನೇ ತರಗತಿ ಪರೀಕ್ಷೆ ಆರಂಭವಾಗಿದೆ. ಹೀಗಾಗಿ ನಾಳೆ ಕರ್ನಾಟಕ ಬಂದ್ ಮಾಡಿದರೆ ಸುಮಾರು 40-50 ಲಕ್ಷ ವಿದ್ಯಾರ್ಥಿಗಳ ಭವಿಷ್ಯ ಅತಂತ್ರವಾಗಲಿದೆ. ನಾಳೆ ಬಂದ್‌ಗೆ ಕನ್ನಡ ಪರ ಸಂಘಟನೆಗಳು ಕರೆ ನೀಡಿವೆ. ಇದರಿಂದ ಮಕ್ಕಳಿಗೆ ಸಾಕಷ್ಟು ತೊಂದರೆಯಾಗಲಿದೆ.
ನಾಳೆ ಮೌಲ್ಯಂಕನ ಪರೀಕ್ಷೆ ನಡೆಯುತ್ತಿದೆ. ಹೀಗಾಗಿ ಪರೀಕ್ಷಾ ದಿನವನ್ನ ಗಮನದಲ್ಲಿಟ್ಟುಕೊಂಡು ಬಂದ್‌ಗೆ ಕರೆ ನೀಡಬೇಕಿತ್ತು. ಇದರ ಜವಾಬ್ದಾರಿಯನ್ನ ಸರ್ಕಾರ ಹಾಗೂ ಕನ್ನಡ ಪರ ಸಂಘಟನೆಗಳು ಹೊರಬೇಕು. ಕೃಪಾ ಖಾಸಗಿ ಶಾಲಾ ಕಾಲೇಜು ಸಂಘಟನೆ ಅಧ್ಯಕ್ಷ ಲೋಕೇಶ್ ತಾಳಿಕಟ್ಟೆ ಆಕ್ರೋಶ ಹೊರ ಹಾಕಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ