/newsfirstlive-kannada/media/post_attachments/wp-content/uploads/2024/11/Vladimir-Putin.jpg)
ರಷ್ಯಾ ಅಧ್ಯಕ್ಷ ವ್ಲಾಡಿಮೀರ್ ಪುಟಿನ್ ವಿಶ್ವದ ಪ್ರಭಾವಿ ವ್ಯಕ್ತಿ. ಪುಟಿನ್ ಬಗೆಗಿನ ಅಚ್ಚರಿ ಸಂಗತಿಗಳು ಆಗಾಗ ಸದ್ದು ಮಾಡುತ್ತಲೇ ಇರುತ್ತವೆ. ಇದೀಗ ಅವರ ಸಂಪತ್ತಿನ ಬಗ್ಗೆ ಚರ್ಚೆ ಶುರುವಾಗಿದೆ. ಕೆಲ ವಿಶ್ಲೇಷಕರ ಪ್ರಕಾರ ಪುಟಿನ್ ವಿಶ್ವದ ಕುಬೇರರನ್ನ ಮೀರಿಸುವಷ್ಟು ಆಸ್ತಿಯನ್ನ ಹೊಂದಿದ್ದು, ಅವರ ಸಂಪತ್ತನ್ನು ಅಂದಾಜಿಸಲು ಸಾಧ್ಯವೇ ಇಲ್ಲ ಅಂತ ಹೇಳಿದ್ದಾರೆ. ಹಾಗಾದ್ರೇ ಪುಟಿನ್ ಆಸ್ತಿ ಎಷ್ಟು ಅವರ ಸಂಪತ್ತಿನ ಮೂಲವೇನು?
ಇದನ್ನೂ ಓದಿ: ಹೇರ್ ಡ್ರೈಯರ್ ಭಯಾನಕ ಸ್ಫೋಟಕ್ಕೆ ಸಿನಿಮಾವನ್ನು ಮೀರಿಸಿದ ಸಂಚು; ಹುಚ್ಚು ಪ್ರೇಮಿ ಮಾಡಿದ್ದೇನು?
72 ವರ್ಷ ವಯಸ್ಸಿನ ಪುಟಿನ್ ತಮ್ಮ ಜೀವತಾವಧಿವರೆಗೂ ತಾವೇ ರಷ್ಯಾ ಅಧ್ಯಕ್ಷ ಅಂತ ಈಗಾಗಲೇ ಘೋಷಿಸಿದ್ದಾರೆ. ಆದ್ರೇ ಇಷ್ಟು ವರ್ಷಗಳ ಕಾಲ ರಷ್ಯಾದಂತಾಹ ದೊಡ್ಡ ರಾಷ್ಟ್ರದ ಅಧ್ಯಕ್ಷರಾಗಿರುವ ಪುಟಿನ್ ಆಸ್ತಿ ಎಷ್ಟು ಅನ್ನೊದ್ರ ಬಗ್ಗೆ ಶಾಕಿಂಗ್ ಮಾಹಿತಿ ಸಿಕ್ಕಿದೆ. ರಷ್ಯಾ ಅಧ್ಯಕ್ಷ ಪುಟಿನ್ ವಾರ್ಷಿಕವಾಗಿ 1.4 ಲಕ್ಷ ಡಾಲರ್ ಹಣ ಸಂಪಾದನೆ ಮಾಡ್ತಾರೆ. ಆದ್ರೆ ಕೆಲ ಮಾಹಿತಿಗಳ ಪ್ರಕಾರ ಪುಟಿನ್ ಬರೋಬ್ಬರಿ 200 ಶತಕೋಟಿ ಡಾಲರ್ ಆಸ್ತಿ ಹೊಂದಿದ್ದಾರೆ ಅಂತ ಹೇಳಲಾಗ್ತಿದೆ. ರಷ್ಯಾದ ಆರ್ಥಿಕ ತಜ್ಞ ಬಿಲ್ ಬ್ರೌಡರ್, ಪುಟಿನ್ ಅವರು ಅನಧಿಕೃತವಾಗಿ 200 ಬಿಲಿಯನ್ ಡಾಲರ್ನಷ್ಟು ಆಸ್ತಿ ಹೊಂದಿದ್ದಾರೆ ಮತ್ತು ಅವರ ಸಂಪತ್ತನ್ನು ಅಂದಾಜಿಸಲು ಸಾಧ್ಯವೇ ಇಲ್ಲ ಅಂತ ಹೇಳಿದ್ದಾರೆ.
ಪುಟಿನ್ ಅವರು 800 ಚದರ ಅಡಿ ಅಪಾರ್ಟ್ಮೆಂಟ್ ಹಾಗೂ ಮಾಸ್ಕೋದಲ್ಲಿ 1,600 ಚದರ ಅಡಿ ಅಪಾರ್ಟ್ಮೆಂಟ್, ಮೂರು ಕಾರುಗಳನ್ನ ಹೊಂದಿದ್ದಾರೆ ಅಂತ ರಷ್ಯಾ ಸರ್ಕಾರ ಅಧಿಕೃತ ಮಾಹಿತಿ ನೀಡಿದೆ. ಆದ್ರೇ ಪುಟಿನ್ ಅವರ ಅನಧಿಕೃತ ಆಸ್ತಿ ವಿಶ್ವದ ಶ್ರೀಮಂತ ವ್ಯಕ್ತಿಗಳನ್ನು ಮೀರಿಸುವಷ್ಟಿದೆ ಅಂತ ಹೇಳಲಾಗಿದೆ. ವಿಶ್ವದ ಶ್ರೀಮಂತ ರಾಜಕಾರಣಿಗಳಲ್ಲಿ ಒಬ್ಬರು ಎನಿಸಿಕೊಂಡಿರುವ ಪುಟಿನ್ ರಷ್ಯಾದ ಕಪ್ಪು ಸಮುದ್ರ ತೀರದ ಬಳಿ ‘ಪುಟಿನ್ ಮಾನ್ಷನ್’ ಹೆಸರಿನ ಐಷಾರಾಮಿ ಅರಮನೆ ಹೊಂದಿದ್ದಾರೆ ಅಂತ ಹೇಳಲಾಗಿದೆ. ಇದರ ಜೊತೆಗೆ 700 ಕಾರುಗಳು ಹಾಗೂ 700 ಮಿಲಿಯನ್ ಡಾಲರ್ ಬೆಲೆ ಬಾಳುವ ವಿಮಾನ, ಹೆಲಿಕಾಪ್ಟರ್ ಸೇರಿದಂತೆ ಪಟೆಕ್ ಫಿಲಿಫ್ನಂತಹ ಲಕ್ಷುರಿ ವಾಚ್ಗಳ ಕಲೆಕ್ಷನ್ ಕೂಡ ಹೊಂದಿದ್ದಾರೆ ಎನ್ನಲಾಗಿದೆ.
ಇದನ್ನೂ ಓದಿ:ಫಸ್ಟ್ ಕ್ರಶ್ಗಳು ಫೇಲ್ ಆಗೋದು ಏಕೆ ? ದೀರ್ಘಾವಧಿವರೆಗೂ ಪ್ರೀತಿ ಸಾಗಿದರೂ ಮುರಿದು ಬೀಳುವುದೇಕೆ?
ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಆಸ್ತಿ ಬಗ್ಗೆ ಸಾಕಷ್ಟು ಉಹಾಪೋಹಗಳಿವೆ. ಜೊತೆಗೆ ಪುಟಿನ್ ಅಧ್ಯಕ್ಷರಾದ ಬಳಿಕ ಅಕ್ರಮವಾಗಿ ಆಸ್ತಿ ಗಳಿಸಿದ್ದಾರೆ ಎಂಬ ಆರೋಪ ಕೂಡ ಕೇಳಿಬಂದಿದೆ. ಆದ್ರೇ ಈ ಆರೋಪಗಳಿಗೆ ಪುಟಿನ್ ಆಗಿಲಿ ರಷ್ಯಾ ಸರ್ಕಾರವಾಗಲಿ ಯಾವುದೇ ಪ್ರತಿಕ್ರಿಯೆ ನೀಡಿಲ್ಲ. ಒಟ್ಟಾರೆ, ಪುಟಿನ್ ಬಗೆಗಿನ ಅಚ್ಚರಿ ಸಂಗತಿಗಳು ಆಗಾಗ ಸದ್ದು ಮಾಡುತ್ತಲೇ ಇರುತ್ತವೆ. ಹೀಗಾಗಿ ಯಾವುದು ಸತ್ಯ. ಯಾವುದು ಸುಳ್ಳು ಅನ್ನೋದೆ ದೊಡ್ಡ ಪ್ರಶ್ನೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ