ಕಲಬುರಗಿ ಮಹಾದಾಸೋಹಿ ಶ್ರೀ ಶರಣಬಸಪ್ಪ ಅಪ್ಪ ಆರೋಗ್ಯದಲ್ಲಿ ಏರುಪೇರು.. ಆಸ್ಪತ್ರೆಗೆ ದಾಖಲು

author-image
Veena Gangani
Updated On
ಕಲಬುರಗಿ ಮಹಾದಾಸೋಹಿ ಶ್ರೀ ಶರಣಬಸಪ್ಪ ಅಪ್ಪ ಆರೋಗ್ಯದಲ್ಲಿ ಏರುಪೇರು.. ಆಸ್ಪತ್ರೆಗೆ ದಾಖಲು
Advertisment
  • ಶರಣಬಸಪ್ಪ ಅಪ್ಪ ಆರೋಗ್ಯ ವಿಚಾರಿಸಲು ಕಮೀಷನರ್ ಭೇಟಿ
  • ಶ್ರೀ ಶರಣಸವೇಶ್ವರ ಮಹಾಸಂಸ್ಥಾನದ 8ನೇ ಪೀಠಾಧಿಪತಿ
  • ಖಾಸಗಿ ಆಸ್ಪತ್ರೆಗೆ ಶರಣಬಸವಪ್ಪ ಅಪ್ಪ ಅವರು ದಾಖಲು

ಕಲಬುರಗಿ: ಕಲ್ಯಾಣ ಕರ್ನಾಟಕದಲ್ಲಿ ಶೈಕ್ಷಣಿಕ ಕ್ರಾಂತಿ ಮಾಡಿದ ದಾರ್ಶನಿಕ, ಶಿಕ್ಷಣ ತಜ್ಞರಾದ ಶರಣಬಸವಪ್ಪ ಅಪ್ಪ ಅವರ ಆರೋಗ್ಯದಲ್ಲಿ ಏರುಪೇರು ಉಂಟಾಗಿದೆ. ಹೀಗಾಗಿ ಅವರನ್ನು ಕಲಬುರಗಿಯ ಖಾಸಗಿ ಆಸ್ಪತ್ರೆಗೆ ಶರಣಬಸವಪ್ಪ ಅಪ್ಪ ಅವರನ್ನು ದಾಖಲು ಮಾಡಲಾಗಿದೆ.

ಇದನ್ನೂ ಓದಿ:ವೀಕ್ಷಕರಿಗೆ ಇಷ್ಟವಾದ ಜೋಡಿ.. ಈ ಬಾರಿ ಭರ್ಜರಿ ಬ್ಯಾಚುಲರ್ಸ್ 2 ವಿನ್ನರ್​ ಇವರೇನಾ?

ಶರಣಬಸವಪ್ಪಾ ಅಪ್ಪ(90) ಅವರು ಶ್ರೀ ಶರಣಬಸವೇಶ್ವರರ ಸಂಸ್ಥಾನದ ಎಂಟನೇ ಪೀಠಾಧಿಪತಿ ಆಗಿದ್ದಾರೆ. ಶರಣಬಸವಪ್ಪ ಅಪ್ಪ ಅವರು ವಯೋಸಹಜ ಕಾಯಿಲೆಯಿಂದ ಬಳಲುತ್ತಿದ್ದರು. ಸದ್ಯ ಶರಣಬಸವಪ್ಪಾ ಅಪ್ಪ ಅವರಿಗೆ ಕಲಬುರಗಿ ನಗರದ ಖಾಸಗಿ ಆಸ್ಪತ್ರೆಯ ಐಸಿಯುನಲ್ಲಿ ಚಿಕಿತ್ಸೆ ಮುಂದುವರೆದಿದೆ. ಶರಣಬಸವೇಶ್ವರರ ಸಂಸ್ಥಾನ ಕಲ್ಯಾಣ ಕರ್ನಾಟಕದಲ್ಲಿ ಶೈಕ್ಷಣಿಕ ಕ್ರಾಂತಿ ದಾಸೋಹ ವ್ಯವಸ್ಥೆಗೆ ಹೆಸರು ವಾಸಿಯಾಗಿದೆ.

publive-image

ಡಾ. ಶರಣಬಸಪ್ಪ ಅಪ್ಪ ಆರೋಗ್ಯವನ್ನು ವಿಚಾರಿಸಲು ಚಿರಾಯು ಆಸ್ಪತ್ರೆಗೆ ಪೊಲೀಸ್ ಕಮೀಷನರ್ ಶರಣಪ್ಪ ಎಸ್.ಡಿ ಭೇಟಿ ಕೊಟ್ಟಿದ್ದಾರೆ. ಡಾ. ಅಪ್ಪ ಅವರನ್ನು ಭೇಟಿ ಮಾಡಿದ ಬಳಿಕ ಮಾತಾಡಿದ ಅವರು, ಡಾ: ಶರಣಬಸಪ್ಪ ಅಪ್ಪಾಜಿ ಅವರು ಆರೋಗ್ಯವಾಗಿದ್ದಾರೆ. ಚಿಕಿತ್ಸೆಗೆ ಸ್ಪಂದಿಸುತ್ತಿದ್ದು ಗುಣಮುಖರಾಗುತ್ತಿದ್ದಾರೆ ಎಂದು ಮಾಹಿತಿ ಕೊಟ್ಟಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment