ಒಂದನ್ನು ಒತ್ತಿ.. 2 ಲಕ್ಷ ರೂಪಾಯಿ ಕಳೆದು ಕೊಂಡ ಬೆಂಗಳೂರು ಮಹಿಳೆ ಕಂಗಾಲು; ನೀವೂ ಹುಷಾರಾಗಿರಿ!

author-image
admin
Updated On
ಫೋನ್ ಪದೇ ಪದೆ ಬಿಸಿ ಆಗಲು ಕಾರಣ ನೀವೇ.. ಈ ತಪ್ಪುಗಳನ್ನು ಮಾಡಲೇಬೇಡಿ..!
Advertisment
  • SBI ಬ್ಯಾಂಕ್‌ನಿಂದ ಬಂದಿರುವ ಕರೆ ಎಂದು ನಂಬಿದ್ದ ಮಹಿಳೆಗೆ ಬಿಗ್ ಶಾಕ್‌
  • ಸೈಬರ್ ವಂಚಕರ ಖತರ್ನಾಕ್ ಐಡಿಯಾ ಕೇಳಿದ್ರೆ ನೀವು ಕಳೆದೇ ಹೋಗ್ತೀರಾ
  • ಅನುಮಾನ ಬಂದು ಬ್ಯಾಂಕ್ ಬ್ಯಾಲೆನ್ಸ್ ಚೆಕ್ ಮಾಡಿದಾಗ ಗೊತ್ತಾಯ್ತು

ಬೆಂಗಳೂರು: ಪೊಲೀಸರು ಎಷ್ಟೇ ಎಚ್ಚರಿಸಿದರೂ ಸೈಬರ್ ಖದೀಮರು ಹೊಸ, ಹೊಸ ರೀತಿಯಲ್ಲಿ ವಂಚಿಸುತ್ತಿದ್ದಾರೆ. ಈ ಸೈಬರ್ ವಂಚಕರ ಖತರ್ನಾಕ್ ಐಡಿಯಾ ಏನು ಅಂತ ಕೇಳಿದ್ರೆ ನಿಜಕ್ಕೂ ನೀವು ದಂಗಾಗುತ್ತೀರಾ. ಒಂದೇ ಒಂದು ಫೋನ್ ಕಾಲ್ ರಿಸೀವ್ ಮಾಡಿ ಒಂದನ್ನು ಒತ್ತಿದ್ದಕ್ಕೆ ಬೆಂಗಳೂರಿನ ಮಹಿಳೆಯೊಬ್ಬರು 2 ಲಕ್ಷ ರೂಪಾಯಿ ಕಳೆದುಕೊಂಡಿದ್ದಾರೆ.

57 ವರ್ಷದ ಮಹಿಳೆಯೊಬ್ಬರಿಗೆ ನ್ಯಾಷನಲ್ ಬ್ಯಾಂಕಿ ಮಾಡುವ ಮಾದರಿಯಲ್ಲೇ IVR (ಇಂಟರಾಕ್ಟಿವ್ ವಾಯ್ಸ್ ರೆಸ್ಪಾನ್ಸ್) ಫೇಕ್‌ ಕರೆ ಬಂದಿದೆ. ಆ ಕರೆಯಲ್ಲಿ ಒಂದನ್ನು ಒತ್ತಿ ಎಂದು ಸೂಚಿಸಿದ್ದಾರೆ. ಬ್ಯಾಂಕ್‌ನಿಂದ ಬಂದಿರುವ ಕರೆ ಎಂದು ನಂಬಿರುವ ಮಹಿಳೆ ಒಂದನ್ನು ಒತ್ತಿದ್ದಾರೆ ಅಷ್ಟೇ. ಒಂದನ್ನು ಒತ್ತಿದ ಮರುಕ್ಷಣವೇ ಮಹಿಳೆಯ ಬ್ಯಾಂಕ್ ಅಕೌಂಟ್‌ನಿಂದ 2 ಲಕ್ಷ ರೂಪಾಯಿ ಹಣ ಟ್ರ್ಯಾನ್ಸ್‌ಫರ್ ಆಗಿದೆ.

publive-image

ಅಸಲಿಗೆ ಆಗಿದ್ದೇನು?
ಬೆಂಗಳೂರಿನ ಹೊಸಕೆರೆಹಳ್ಳಿ ದತ್ತಾತ್ರೇಯನಗರದಲ್ಲಿ ಈ ಪ್ರಕರಣ ಬೆಳಕಿಗೆ ಬಂದಿದೆ. ಕಳೆದ ಜನವರಿ 20ರ ಮಧ್ಯಾಹ್ನ 3.55ಕ್ಕೆ ಸರಿಯಾಗಿ 01412820071 ಸಂಖ್ಯೆಯಿಂದ ಕರೆ ಬಂದಿದೆ. ಈ ನಂಬರ್ ಕಾಲರ್ ಐಡಿಯಲ್ಲಿ SBI ಬ್ಯಾಂಕ್‌ ಅಂತಾನೇ ಬಂದಿದೆ. ಬ್ಯಾಂಕ್ ನಂಬರ್ ಅಂತ ರಿಸೀವ್ ಮಾಡಿದ ಮಹಿಳೆಗೆ ಇತ್ತೀಚೆಗೆ ನೀವು 2 ಲಕ್ಷ ಹಣದ ವಹಿವಾಟು ನಡೆಸಿದ್ದೀರಿ. ನೀವೇ ಈ ಹಣದ ವ್ಯವಹಾರ ನಡೆಸಿದ್ರೆ 3 ಅನ್ನು ಒತ್ತಿ. ನೀವು ಈ ಹಣದ ವ್ಯವಹಾರ ನಡೆಸಿಲ್ಲ ಅಂದ್ರೆ 1 ಅನ್ನು ಒತ್ತಿ ಎನ್ನಲಾಗಿದೆ.

ಇದನ್ನೂ ಓದಿ: ಮುಂಬೈ ಬೀದಿಯಲ್ಲಿ ಅಲೆದಾಡಿದ ಗುಹೆ ವಾಸಿಯಂತಹ ವ್ಯಕ್ತಿ;ಅಸಲಿಗೆ ಅವರು ಯಾರು ಅಂತ ಗೊತ್ತಾದ್ರೆ ಶಾಕ್ ಆಗ್ತೀರಾ 

ಫೇಕ್ ಕಾಲ್ ರಿಸೀವ್ ಮಾಡಿದ ಮಹಿಳೆಗೆ ನಾನು ಯಾವುದೇ ಹಣದ ವ್ಯವಹಾರ ನಡೆಸಿಲ್ಲ. ಇದೇನಿದು ಅಂತ ಶಾಕ್ ಆಗಿದೆ. ಪದೇ ಪದೇ ಹೀಗೆ ಹೇಳುತ್ತಿದ್ದಕ್ಕೆ ಕೊನೆಗೆ ಒಂದನ್ನು ಒತ್ತಿದ್ದಾರೆ. ಆಗ ಮತ್ತೊಂದು ಸಂದೇಶದಲ್ಲಿ ನೀವು ಈ ಕೂಡಲೇ ಬ್ಯಾಂಕ್ ಮ್ಯಾನೇಜರ್‌ ಅನ್ನು ಬಂದು ಭೇಟಿ ಮಾಡಿ ಎಂದು ಹೇಳಿ ಕಾಲ್ ಕಟ್ ಮಾಡಿದೆ.

ಅನುಮಾನ ಬಂದ ಮಹಿಳೆ ಬ್ಯಾಂಕ್ ಬ್ಯಾಲೆನ್ಸ್ ಚೆಕ್ ಮಾಡಿದ್ದಾರೆ. ಆಗ ತನ್ನ ಅಕೌಂಟ್‌ನಿಂದಲೇ 2 ಲಕ್ಷ ರೂಪಾಯಿ ಟ್ರ್ಯಾನ್ಸ್‌ಫರ್ ಆಗಿರೋದು ಗೊತ್ತಾಗಿದೆ. ಕೂಡಲೇ ಗಾಬರಿಯಾದ ಮಹಿಳೆ 1930 ಹೆಲ್ಪ್‌ಲೈನ್‌ಗೆ ಕರೆ ಮಾಡಿ ದೂರು ನೀಡಿದ್ದಾರೆ. ನಂತರ ಗಿರಿನಗರ ಪೊಲೀಸ್ ಠಾಣೆಗೆ ತೆರಳಿರುವ ಮಹಿಳೆ FIR ಕೂಡ ದಾಖಲಿಸಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment