ಭಾರತ, ಪಾಕ್ ಹೈವೋಲ್ಟೇಜ್‌ ಪಂದ್ಯಕ್ಕೆ ಅಂತಿಮ ಕಸರತ್ತು.. ರೋಹಿತ್​, ವಿರಾಟ್​ ಕೊಹ್ಲಿ ಮೇಲೆ ತೀವ್ರ ಒತ್ತಡ!

author-image
Gopal Kulkarni
Updated On
ಚಾಂಪಿಯನ್ಸ್​ ಟ್ರೋಫಿ ಬೆನ್ನಲ್ಲೇ ಕೊಹ್ಲಿಗೆ ಬಿಗ್​ ಶಾಕ್​​; ರೋಹಿತ್​ ಶರ್ಮಾಗೆ ಭರ್ಜರಿ ಜಾಕ್​ಪಾಟ್​​
Advertisment
  • ಪಾಕಿಸ್ತಾನವನ್ನು ಬಗ್ಗು ಬಡೆಯಲು ಸಿಡಿದೇಳಲೇಬೇಕು ಕೊಹ್ಲಿ, ರೋಹಿತ್​
  • ಉಭಯ ಆಟಗಾರರ ಮೇಲೆ ಇದೆ ಕ್ರಿಕೆಟ್ ಪ್ರೇಮಿಗಳ ವಿಪರೀತ ನಿರೀಕ್ಷೆ
  • ಕಳೆದ ಪಂದ್ಯದಲ್ಲಿ ನಿರೀಕ್ಷಿತ ಮಟ್ಟಕ್ಕೆ ಬ್ಯಾಟ್ ಬೀಸದ ಕೊಹ್ಲಿ, ರೋಹಿತ್​

ಭಾರತ ಕ್ರಿಕೆಟ್ ತಂಡ ವಿಶ್ವ ಚಾಂಪಿಯನ್ಸ್ ಟ್ರೋಫಿಯಲ್ಲಿ ಬಾಂಗ್ಲಾದೇಶದ ವಿರುದ್ಧ ಭರ್ಜರಿ ಜಯಗಳಿಸಿ ಶುಭಾರಂಭ ಮಾಡಿದೆ. ಇಂದು ಮತ್ತೊಂದು ಬದ್ಧ ಎದುರಾಳಿ ಪಾಕಿಸ್ತಾನದ ಜೊತೆ ಭಾರತೀಯ ತಂಡ ಮುಖಾಮುಖಿಯಾಗಲಿದೆ. ರಾಜಕೀಯ ಹಲವು ಭಿನ್ನಾಭಿಪ್ರಾಯಗಳಿಂದಾಗಿ ಭಾರತ ತಂಡ ಪಾಕಿಸ್ತಾನಕ್ಕೆ ಹೋಗಲು ನಿರಾಕರಿಸಿದ್ದು. ಉಭಯ ತಂಡಗಳ ಪಂದ್ಯ ದುಬೈ ಅಂತಾರಾಷ್ಟ್ರೀಯ ಕ್ರೀಡಾಂಗಣದಲ್ಲಿ ನಡೆಯಲಿದೆ.

ಇತಿಹಾಸವನ್ನು ಕೆದಕಿ ನೋಡಿದಾಗ ಪಾಕಿಸ್ತಾನ ಸದ್ಯ ಮೊದಲಿನಂತೆ ಭರ್ಜರಿಯಾಗಿ ಆಡುತ್ತಿಲ್ಲ. ಅದರಲ್ಲೂ ಭಾರತದೊಂದಿಗೆ ಅದರ ಅಬ್ಬರ ಕಳಪೆಯೇ ಇದೆ.ಏಕದಿನ ಪಂದ್ಯಗಳಲ್ಲಿ ಭಾರತ ಪಾಕಿಸ್ತಾನದ ನಡುವೆ ಒಟ್ಟು 2018ರಿಂದ ನಡೆದ 73 ಪಂದ್ಯಗಳಲ್ಲಿ ಭಾರತ ಒಟ್ಟು 57 ಪಂದ್ಯಗಳಲ್ಲಿ ಗೆದ್ದು ಮುನ್ನಡೆಯಲ್ಲಿದೆ.ಆದ್ರೆ 2018 ರಿಂದ ಇಲ್ಲಿಯವರೆಗೂ ಈ ಉಭಯ ತಂಡಗಳು ಕೇವಲ 6 ಬಾರಿ ಮುಖಾಮುಖಿಯಾಗಿವೆ. ಈ ಆರು ಪಂದ್ಯಗಳಲ್ಲಿಯೂ ಭಾರತ ಭರ್ಜರಿ ವಿಜಯ ಸಾಧಿಸಿದೆ. ಆದ್ರೆ ಚಾಂಪಿಯನ್ಸ್ ಟ್ರೋಫಿ ವಿಚಾರಕ್ಕೆ ಬಂದಾಗ ಪಾಕಿಸ್ತಾನ ಭಾರತ ವಿರುದ್ಧ 3 ಪಂದ್ಯಗಳನ್ನು ಜಯಿಸಿದ್ದರೆ. ಭಾರತ ಎರಡು ಪಂದ್ಯಗಳನ್ನು ಜಯಸಿದೆ.

ಇದನ್ನೂ ಓದಿ: INDvsPAK: ಭಾರತದ ವಿರುದ್ಧ ಮಾಡು ಇಲ್ಲವೇ ಮಡಿ ಪಂದ್ಯ; ಪಾಕಿಸ್ತಾನಕ್ಕೆ ಡಬಲ್ ಟೆನ್ಷನ್!

publive-image

ಇದೆಲ್ಲದರ ನಡುವೆ ಇಂದು ನಡೆಯುವ ಮ್ಯಾಚ್ ಅತ್ಯಂತ ಪ್ರಮುಖವಾಗಿದೆ. ತಂಡದಲ್ಲಿ ಯಾವುದೇ ಬದಲಾವಣೆ ಆಗಿಲ್ಲವಾದರೂ ಕೂಡ ಕೆಲವು ದಿಗ್ಗಜ ಬ್ಯಾಟ್ಸಮನ್​ಗಳ ಫಾರ್ಮ್​ ಕೊರತೆ ಚಿಂತೆಗೀಡು ಮಾಡಿದೆ. ಇಡೀ ಭಾರತೀಯ ಕ್ರಿಕೆಟ್ ಪ್ರಿಯರು ರೋಹಿತ್ ಶರ್ಮಾ ಹಾಗೂ ವಿರಾಟ್ ಕೊಹ್ಲಿ ಮೇಲೆ ದೊಡ್ಡ ನಿರೀಕ್ಷೆಯನ್ನಿಟ್ಟುಕೊಂಡು ಕುಳಿತಿದ್ದಾರೆ. ಅವರು ಮತ್ತೆ ಫಾರ್ಮ್​ನ್ನು ಸುಧಾರಿಸಿಕೊಂಡು ಹಳೆಯ ಅಬ್ಬರದ ಆಟವನ್ನು ಆಡಬೇಕಾದ ಅನಿವಾರ್ಯತೆ ಎದುರಾಗಿದೆ.
ಕಳೆದ ಮ್ಯಾಚ್​ನಲ್ಲಿ ಶುಭಮನ್ ಗಿಲ್​ರೊಂದಿಗೆ ಆರಂಭಿಕರಾಗಿ ಆಟಕ್ಕೆ ಇಳಿದ ರೋಹಿತ್ ಶರ್ಮಾರ ಬ್ಯಾಟಿಂಗ್ ಮೇಲೆ ಬಹಳ ನಿರೀಕ್ಷೆಯನ್ನಿಡಲಾಗಿತ್ತು. ಆದ್ರೆ ರೋಹಿತ್ 36 ಬಾಲ್​​ಗಳಿಗೆ 41 ರನ್ ಸಿಡಿಸಿ ಔಟಾದರು. ಇದರಿಂದಾಗಿ ಅವರು ಒಳ್ಳೆಯ ಓಪನಿಂಗ್​ ನೀಡಲಿಲ್ಲ ಎಂಬ ವಾದಗಳು ಕೇಳಿ ಬಂದವು. ಕೊಹ್ಲಿ ವಿರುದ್ಧವೂ ಕೂಡ ಇಂತಹುದೇ ಆರೋಪಗಳು ಕೇಳಿ ಬಂದವು.

ಇದನ್ನೂ ಓದಿ:ಭಾರತದ ರಾಷ್ಟ್ರಗೀತೆ ಕೇಳಿಯೇ ಶಾಕ್ ಆದ ಪಾಕಿಸ್ತಾನದ ಸ್ಟೇಡಿಯಂ; ವಿಡಿಯೋ ಫುಲ್‌ ವೈರಲ್‌!

ಮೂರನೇ ಕ್ರಮಾಂಕದಲ್ಲಿ ಬ್ಯಾಟಿಂಗ್​ಗೆ ಇಳಿದ ಕೊಹ್ಲಿ ಕೇವಲ 22 ರನ್​ ಗಳಿಸಿ ಮತ್ತೆ ಅಭಿಮಾನಿಗಳನ್ನು ನಿರಾಸೆಗೊಳಿಸಿದರು. ದಿನ ಕಳೆದಂತೆ ಟೆಸ್ಟ್ ಹಾಗೂ ಏಕದಿನ ಪಂದ್ಯದಲ್ಲಿ ಕೊಹ್ಲಿ ತಮ್ಮ ಫಾರ್ಮ್​ ಕಳೆದುಕೊಳ್ಳುತ್ತಾ ಬರುತ್ತಿದ್ದಾರೆ. ಆದ್ರೆ ಇಂದಿನ ಪಂದ್ಯ ಅತ್ಯಂತ ಹೈವೋಲ್ಟೇಜ್ ಪಂದ್ಯವಾಗಿದ್ದ ಅವರ ತಮ್ಮ ಮೊದಲಿನ ಬ್ಯಾಟಿಂಗ್​ ಲಯವನ್ನು ಕಾಯ್ದುಕೊಳ್ಳಲೇಬೇಕಿದೆ. ಇಲ್ಲದಿದ್ದರೆ ಪಾಕ್ ವಿರುದ್ಧ ಅಷ್ಟು ಪಂದ್ಯವನ್ನು ಗೆಲ್ಲುವುದು ಅಷ್ಟು ಸರಳವಲ್ಲ. ಹೀಗಾಗಿ ಈ ಪಂದ್ಯದಲ್ಲಿ ರೋಹಿತ್ ಹಾಗೂ ವಿರಾಟ್​ ಮೇಲೆ ಬಹಳ ನಿರೀಕ್ಷೆಯಿದ್ದು, ಅವರ ಮೇಲೆ ತೀವ್ರ ಒತ್ತಡವು ಕೂಡ ಇದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment