newsfirstkannada.com

ಭಾರತೀಯ ಸೈನಿಕರನ್ನು ದೇಶ ತೊರೆಯಲು ಹೇಳಿದ ಮಾಲ್ಡೀವ್ಸ್​​ ಅಧ್ಯಕ್ಷ; 1988ರ ಘಟನೆ ಮರೆಯಿತೇ ದ್ವೀಪರಾಷ್ಟ್ರ? 

Share :

Published January 15, 2024 at 9:35pm

Update January 15, 2024 at 9:36pm

    30 ವರ್ಷಗಳಿಗೆ ಮಾಲ್ಡೀವ್ಸ್‌ನಲ್ಲಿ ದ್ವೀಪವನ್ನ ಲೀಸ್‌ಗೆ ಪಡೆದಿರುವ ಭಾರತ

    ಶ್ರೀಲಂಕಾದ ಎಲ್‌ಟಿಟಿಇ ಉಗ್ರರ ಜೊತೆ ಸೇರಿ ಅಧ್ಯಕ್ಷರ ಮನೆ ವಶ

    1988ರಲ್ಲಿ ಮಾಲ್ಡೀವ್ಸ್‌ನಲ್ಲಿ ದಂಗೆ ಎದ್ದಿದ್ದ​​ ಬಂಡುಕೋರರ ಗುಂಪು

ಭಾರತ ಮತ್ತು ಮಾಲ್ಡೀವ್ಸ್‌ ನಡುವಿನ ಸಂಬಂಧದಲ್ಲಿ ಉಂಟಾಗಿರುವ ಬಿಕ್ಕಟ್ಟು ಮತ್ತೊಂದು ಮಜಲು ಪಡೆದಿದೆ. ಚೀನಾ ಬೆಂಬಲದೊಂದಿಗೆ ಮೆರೆಯುತ್ತಿರುವ ಮಾಲ್ಡೀವ್ಸ್​​​ ಸರ್ಕಾರ ಮತ್ತು ಭಾರತ ವಿರೋಧಿ ದೋರಣೆ ಮುಂದುವರೆಸಿದೆ. ಇತ್ತೀಚಿಗೆ ಚೀನಾ ಪ್ರವಾಸ ಕೈಗೊಂಡಿದ್ದ ಮಾಲ್ಡೀವ್ಸ್​​ ಅಧ್ಯಕ್ಷ ಮೊಹಮ್ಮದ್​​​ ಮುಯಿಝು ಸ್ವದೇಶಕ್ಕೆ ವಾಪಸ್ಸಾಗುತ್ತಿದಂತೆ ಮಾಲ್ಡೀವ್ಸ್‌ನಲ್ಲಿರುವ ಭಾರತೀಯ ಸೈನಿಕರನ್ನ ಮಾರ್ಚ್​ 15ರೊಳಗೆ ವಾಪಸ್​​​​​​​​​​ ಕರೆಸಿಕೊಳ್ಳವಂತೆ ಡೆಡ್​​ಲೈನ್​ ನೀಡಿದೆ.

ಈಗಾಗಲೇ ಭಾರತದ ವಿರೋಧ ಕಟ್ಟಿಕೊಂಡು ಹಲವು ಸಮಸ್ಯೆ ಎದುರಿಸುತ್ತಿರುವ ಮಾಲ್ಡೀವ್ಸ್​​​ಗೆ ಇನ್ನು ಬುದ್ಧಿ ಬಂದಂತೆ ಕಾಣುತ್ತಿಲ್ಲ. ಇದೀಗ ಮತ್ತೊಮ್ಮೆ ಭಾರತದ ವಿರುದ್ಧವೆ ಮಾತನಾಡಿರುವ ಮಾಲ್ಡೀವ್ಸ್​​​ ಅಧ್ಯಕ್ಷ ಮೊಹಮ್ಮದ್‌ ಮುಯಿಝ, ಮಾಲ್ಡೀವ್ಸ್​​​ ನೆಲದಿಂದ ಮಾರ್ಚ್‌ 15ರೊಳಗೆ ಸೇನೆ ವಾಪಸ್ ಕರೆಯಿಸಿಕೊಳ್ಳಿ ಎಂದು ಭಾರತಕ್ಕೆ ತಾಕೀತು ಮಾಡಿದ್ದಾರೆ.

ಮಾಲ್ಡೀವ್ಸ್‌ನಲ್ಲಿನ ಭಾರತದ ಸೇನಾ ನೆಲೆ ತೆರವಿಗೆ ಒತ್ತಡ

ಮಾಲ್ಡೀವ್ಸ್‌ನಲ್ಲಿ ಭಾರತ ಸೇನಾ ನೆಲೆ ಸ್ಥಾಪಿಸಿದ್ದು ಹಲವು ವರ್ಷಗಳಿಂದಲೂ ಹಿಂದೂ ಮಹಾಸಾಗರದ ಮೇಲೆ ನಿಗಾ ಇರಿಸಿದೆ. ಇದೀಗ ಭಾರತದ ಜತೆಗಿನ ಪ್ರವಾಸೋದ್ಯಮ ಬಿಕ್ಕಟ್ಟಿನ ನಡುವೆಯೇ ಚೀನಾ ಪ್ರವಾಸ ಕೈಗೊಂಡಿದ್ದ ಮಾಲ್ಡೀವ್ಸ್​​ ಅಧ್ಯಕ್ಷ ಚೀನಾದಿಂದ ವಾಪಾಸ್​​​ ಆಗುತ್ತಿದ್ದಂತೇ ತೀಕ್ಷ್ಣವಾಗಿ ಪ್ರತಿಕ್ರಿಯಿಸಿದ್ದಾರೆ. ಭಾರತಕ್ಕೆ ಸೆಡ್ಡು ಹೊಡೆದು ಹಿಂದೂ ಮಹಾ ಸಾಗರದಲ್ಲಿ ಅಧಿಪತ್ಯ ಸಾಧಿಸಲು ಮುಂದಾಗಿರುವ ಚೀನಾ, ಮಾಲ್ಡೀವ್ಸ್​​ನ ಅಭಿವೃದ್ಧಿಗಾಗಿ ಸುಮಾರು 130 ಮಿಲಿಯನ್​​ ಡಾಲರ್​ ಹಣವನ್ನ ಸಾಲವಾಗಿ ನೀಡಿದೆ. ಮತ್ತು ಚೀನಾ ಭೇಟಿ ಬಳಿಕ ಮಾಲ್ಡೀವ್ಸ್​​​​ ಅಧ್ಯಕ್ಷ ಪರೋಕ್ಷವಾಗಿ ಭಾರತದ ಹರಿಹಾಯ್ದಿದ್ದು, ಚೀನಾದ ಕೈಗೊಂಬೆಯಂತೆ ಮಾಲ್ಡೀವ್ಸ್​​​ ವರ್ತಿಸುತ್ತಿರುವುದು ಮೆಲ್ನೊಟಕ್ಕೆ ಕಂಡು ಬಂದಿದೆ.

ಅಂದು ರಕ್ಷಣೆಗಾಗಿ ಅಂಗಲಾಚಿದ್ದ ದ್ವೀಪರಾಷ್ಟ್ರ!

1988ರ ನವೆಂಬರ್‌ನಲ್ಲಿ ಶ್ರೀಲಂಕಾ ಉಗ್ರರ ಜೊತೆ ಸೇರಿ ಮಾಲ್ಡೀವ್ಸ್​​​ನ ಗುಂಪೊಂದು ದೇಶವನ್ನು ವಶಪಡಿಸಿಕೊಂಡಿದ್ದರು, ಅಂದು ಉಗ್ರರ ದಾಳಿಯಿಂದ ತತ್ತರಿಸಿ ಹೋಗಿದ್ದ ಮಾಲ್ಡೀವ್ಸ್​, ರಕ್ಷಣೆಗಾಗಿ ಭಾರತದ ಬಳಿ ಅಂಗಲಾಚಿ ರಕ್ಷಿಸುವಂತೆ ನೆರವು ಕೇಳಿತ್ತು. ಕೇವಲ 18 ಗಂಟೆಯಲ್ಲೆ ಆಪರೇಷನ್​ ಮುಗಿಸಿ ಉಗ್ರರಿಂದ ಮಾಲ್ಡೀವ್ಸ್​​​​ ದೇಶವನ್ನು ರಕ್ಷಿಸಿತ್ತು. ಮೂಲಗಳ ಪ್ರಕಾರ ಪ್ರಸ್ತುತ ಮಾಲ್ಡೀವ್ಸ್​​ನಲ್ಲಿ 88 ಭಾರತೀಯ ಸೈನಿಕರು ಮಾಲ್ಡೀವ್ಸ್‌ನಲ್ಲಿ ಸೇವೆ ಸಲ್ಲಿಸುತ್ತಿದೆ. ಶಾಂತಿ ಸ್ಥಾಪಿಸಲು ಹಾಗೂ ಹಿಂದೂ ಮಹಾಸಾಗರದ ಮೇಲೆ ನಿಗಾ ಇರಿಸಲು ಭಾರತೀಯ ಸೇನೆ ಮಾಲ್ಡೀವ್ಸ್​​​ನಲ್ಲಿ 30 ವರ್ಷಗಳ ಹಿಂದೆ ಸೇನಾ ನೆಲಯನ್ನು ಸ್ಥಾಪಿಸಿತ್ತು. ಆದರೆ ಚೀನಾದ ಪರ ಒಲವು ತೋರಿಸಿ ಭಾರತ ವಿರೋಧಿ ನಿಲುವು ತಾಳಿ ಅಧಿಕಾರಕ್ಕೆ ಬಂದ ಮುಯಿಝು ಭಾರತದ ಸೈನಿಕರನ್ನು ಹಿಂಪಡೆಯುವಂತೆ ಆದೇಶ ನೀಡಿದ್ದಾರೆ.

ಕೊನೆಗೂ ಮೌನ ಮುರಿದ ವಿದೇಶಾಂಗ ಸಚಿವ

ಇನ್ನು ಭಾರತದ ವಿದೇಶಾಂಗ ವ್ಯವಹಾರಗಳ ಸಚಿವ ಎಸ್​​​ ಜೈಶಂಕರ್​​ ಕೊನೆಗೂ ಮಾಲ್ಡೀವ್ಸ್​​​ನೊಂದಿಗೆ ನಡೆಯುತ್ತಿರುವ ರಾಜತಾಂತ್ರಿಕ ವಿವಾದದ ಬಗ್ಗೆ ಮೌನ ಮುರಿದಿದ್ದು, ಪ್ರತಿಯೊಂದು ದೇಶವೂ ಭಾರತವನ್ನು ಬೆಂಬಲಿಸುತ್ತದೆ ಅಥವಾ ಭಾರತದ ನಿಲುವನ್ನು ಒಪ್ಪುತ್ತದೆ ಎಂದು ಖಾತರಿಪಡಿಸಲಾಗುವುದಿಲ್ಲ, ರಾಜಕೀಯವು ಹಾವು-ಏಣಿಯಂತೆ ಮೇಲಕ್ಕೇರಲೂಬಹುದು ಕೆಳಕ್ಕಿಳಿಯಲುಬಹುದು,ಆದರೆ ಆ ರಾಷ್ಟ್ರದ ಜನರು ಭಾರತದ ಬಗ್ಗೆ ಉತ್ತಮ ಭಾವನೆಗಳನ್ನು ಹೊಂದಿದ್ದಾರೆ ಮತ್ತು ಉತ್ತಮ ಸಂಬಂಧವನ್ನು ಹೊಂದುವ ಮಹತ್ವವನ್ನು ಅರ್ಥಮಾಡಿಕೊಳ್ಳುತ್ತಾರೆ ಎಂದು ಹೇಳಿದ್ದಾರೆ. ಒಟ್ನಲ್ಲಿ ಚೀನಾ ಕೈಗೊಂಬೆಯಾಗಿರುವ ನೂತನ ಅಧ್ಯಕ್ಷ ಮೊಹಮ್ಮದ್‌ ಮುಯಿಝ ಅಧಿಕಾರಕ್ಕೇರಿದ ದಿನದಿಂದಲೂ ಭಾರತ ವಿರೋಧಿ ನಿಲುವು ತಳೆದಿರುವುದು ಸ್ಪಷ್ಟ. ಅಧ್ಯಕ್ಷನ ಈ ನಿಲುವಿನಿಂದ ಉಭಯ ದೇಶಗಳ ನಡುವಿನ ಸಂಬಂಧ ಮತ್ತಷ್ಟು ಹದಗೆಟ್ಟಂತಾಗಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಭಾರತೀಯ ಸೈನಿಕರನ್ನು ದೇಶ ತೊರೆಯಲು ಹೇಳಿದ ಮಾಲ್ಡೀವ್ಸ್​​ ಅಧ್ಯಕ್ಷ; 1988ರ ಘಟನೆ ಮರೆಯಿತೇ ದ್ವೀಪರಾಷ್ಟ್ರ? 

https://newsfirstlive.com/wp-content/uploads/2024/01/Modi-Maldives.jpg

Load More