/newsfirstlive-kannada/media/post_attachments/wp-content/uploads/2025/07/HCG.jpg)
ರಾಜ್ಯದ ಪ್ರತಿಷ್ಠಿತ ಕ್ಯಾನ್ಸರ್ ಆಸ್ಪತ್ರೆ ಹೆಚ್‌ಸಿಜಿ (HealthCare Global Enterprises Ltd) ವಿರುದ್ಧ ಅತ್ಯಂತ ಗಂಭೀರ ಆರೋಪವೊಂದು ಕೇಳಿಬಂದಿದೆ. ‘ಕ್ಲಿನಿಕಲ್ ಟ್ರಯಲ್’ (Clinical trials) ಚಟುವಟಿಕೆಗಳಲ್ಲಿ ನ್ಯಾಯೋಚಿತವಲ್ಲದ ನಿಯಮ ಬಾಹೀರ ಚಟುವಟಿಕೆಗಳು ನಡೆಯುತ್ತಿವೆ ಎಂದು ಎಥಿಕಲ್ ಕಮೀಟಿ ಮುಖ್ಯಸ್ಥ ನಿವೃತ್ತ ನ್ಯಾ.ಪಿ.ಕೃಷ್ಣ ಭಟ್ ಆರೋಪಿಸಿದ್ದಾರೆ.
ಆಸ್ಪತ್ರೆಯಲ್ಲಿ ನಡೆಯುತ್ತಿರುವ ಕ್ಲಿನಿಕಲ್ ಟ್ರಯಲ್ ಚಟುವಟಿಕೆಗಳ ಕುರಿತು ಆಡಳಿತ ಮಂಡಳಿಯ ಗಮನಕ್ಕೆ ತಂದು ಸರಿಪಡಿಸುವ ಕೆಲಸವನ್ನು ಕೃಷ್ಣಭಟ್ ಪ್ರಯತ್ನಿಸಿದ್ದರಂತೆ. ಆದರೆ ಆಸ್ಪತ್ರೆಯಲ್ಲಿ ಆ ವಿಚಾರವನ್ನೇ ಮುಚ್ಚಿಹಾಕುವ ಪ್ರಯತ್ನ ನಡೆದಿದೆ ಎಂದು ಆರೋಪಿಸಲಾಗಿದೆ. ಇದರಿಂದ ಬೇಸತ್ತು ನ್ಯಾ.ಪಿ.ಕೃಷ್ಣಭಟ್ ನೈತಿಕ ಸಮಿತಿ ಮುಖ್ಯಸ್ಥ ಹುದ್ದೆಗೆ ರಾಜೀನಾಮೆ ನೀಡಿದ್ದಾರೆ ಎಂದು ಹೇಳಲಾಗಿದೆ.
ಇದನ್ನೂ ಓದಿ: ಪೋಷಕರೇ ಎಚ್ಚರ.. ಈ ಲಕ್ಷಣ ನಿಮ್ಮ ಮಕ್ಕಳಿಗೆ ಬಂದಿದ್ರೆ ಅಪ್ಪಿತಪ್ಪಿಯೂ ನಿರ್ಲಕ್ಷಿಸಬೇಡಿ..!
ಗಂಭೀರ ಆರೋಪಗಳ ಬೆನ್ನಲ್ಲೇ ಆಸ್ಪತ್ರೆಯ ಸಿಇಓ, ನಿರ್ದೇಶಕರು ಪದತ್ಯಾಗ ಮಾಡಿದ್ದಾರೆ. ಸಾಲು ಸಾಲಾಗಿ ವೈದ್ಯರು ಕೂಡ ರಾಜೀನಾಮೆ ಸಲ್ಲಿಸಿದ್ದಾರೆ ಎನ್ನಲಾಗಿದೆ. ಈ ಮಧ್ಯೆ ಪರಿಸ್ಥಿತಿಯ ಗಂಭೀರತೆ ಅರಿತ ರಾಜ್ಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸೇವೆಗಳ ಆಯುಕ್ತಾಲಯವು ಕೇಂದ್ರೀಯ ಔಷಧ ಗುಣಮಟ್ಟ ನಿಯಂತ್ರಣ ಸಂಸ್ಥೆ (ಸಿಡಿಎಸ್ ಸಿಒ)ಗೆ ಬರೆದಿದೆ. ಹೆಚ್‌ಸಿಜಿ ಆಸ್ಪತ್ರೆಯಲ್ಲಿನ ನ್ಯಾಯೋಚಿತವಲ್ಲದ ಕ್ಲಿನಿಕಲ್ ಟ್ರಯಲ್ ಚಟುವಟಿಕೆಗಳ ಕುರಿತು ಕೂಡಲೇ ತನಿಖೆ ನಡೆಸುವಂತೆ ಮನವಿ ಮಾಡಿದೆ.
ಆರೋಪ ಏನು..?
ಹೆಚ್‌ಸಿಜಿ ಕ್ಯಾನ್ಸರ್ ಆಸ್ಪತ್ರೆಯಲ್ಲಿ ಕ್ಲಿನಿಕಲ್ ಟ್ರಯಲ್ ಎಂಬುದು ಹಗರಣ ರೀತಿಯಲ್ಲಿ ನಡೆಯುತ್ತಿದೆ ಎಂದು ಆ ಸಂಸ್ಥೆಯ ನೈತಿಕ ಸಮಿತಿ ಮುಖ್ಯಸ್ಥ ಪಿ. ಕೃಷ್ಣಭಟ್ ಬಹಿರಂಗಪಡಿಸಿದ್ದರಂತೆ. ಈ ಬಗ್ಗೆ ಕಂಪನಿಯ ಉನ್ನತ ಆಡಳಿತ ವರ್ಗಕ್ಕೆ ಪತ್ರ ಹಾಗೂ ಖುದ್ದಾಗಿ ಹಲವು ಬಾರಿ ಎಚ್ಚರಿಕೆ ನೀಡಿದ್ದರು. ಆದರೆ ಅದನ್ನು ಸರಿಪಡಿಸುವ ಬದಲು ಹೆಚ್‌ಸಿಜಿ ಆಡಳಿತ ಅಕ್ರಮವನ್ನೇ ಮುಚ್ಚಿ ಹಾಕಲು ಯತ್ನಿಸಿತು ಎಂಬ ಆರೋಪ ಕೇಳಿಬಂದಿದೆ. ಗಂಭೀರವಾಗಿ ಪರಿಗಣಿಸಿರುವ ರಾಜ್ಯ ಸರ್ಕಾರ ಸರ್ಕಾರ, ತನಿಖೆ ನಡೆಸುವಂತೆ DCGIಗೆ ಮನವಿ ಮಾಡಿದೆ.
ಇದನ್ನೂ ಓದಿ: ಯುವಕರ ಹೃದಯ ಹಿಂಡ್ತಿರುವ ಹೃದಯಾಘಾತ.. ಸರ್ಕಾರದಿಂದ 10 ತಜ್ಞರ ತಂಡ ರಚನೆಗೆ ನಿರ್ಧಾರ
ಅಧಿಕ ಲಾಭಕ್ಕಾಗಿ ಹೆಚ್ಚು ಆಘಾತಕಾರಿ ಕ್ಲಿನಿಕಲ್ ಟ್ರಯಲ್ ಆರೋಪ
ಕ್ಲಿನಿಕಲ್ ಟ್ರಯಲ್ ಮಾಡೋದ್ರಿಂದ ಆಸ್ಪತ್ರೆಗೆ ಹೆಚ್ಚಿನ ಪ್ರಮಾಣದಲ್ಲಿ ಹಣ ಹರಿದು ಬರಲಿದೆ. ಇದೇ ಉದ್ದೇಶದಿಂದ ಆಘಾತಕಾರಿ ಕ್ಲಿನಿಕಲ್ ಟ್ರಯಲ್ಗಳನ್ನು ಆಸ್ಪತ್ರೆ ನಡೆಸುತ್ತಿತ್ತು ಎಂಬ ಆರೋಪ ಮಾಡಲಾಗಿದೆ. ಹೆಚ್ಚಿನ ಲಾಭದ ಉದ್ದೇಶಕ್ಕಾಗಿ ಕ್ಲಿನಿಕಲ್ ಟ್ರಯಲ್ಗೆ ರೋಗಿಗಳ ಸೇರ್ಪಡೆ ವಿಚಾರದಲ್ಲಿ ಹೆಚ್ಚು ವಿನಾಯತಿ ನೀಡುತ್ತಿತ್ತು ಎಂಬ ಆರೋಪ ಮಾಡಲಾಗಿದೆ.
ಇದನ್ನೂ ಓದಿ: ಹಲ್ಲುಗಳು ಫಳಫಳ ಹೊಳಿಬೇಕಂತ ಅಪ್ಪಿತಪ್ಪಿಯೂ ಈ ತಪ್ಪು ಮಾಡ್ಬೇಡಿ.. ಈ ಟಿಪ್ಸ್ ಪಾಲಿಸಿ..!
ಆರೋಪಗಳಿಗೆ ಸ್ಪಷ್ಟನೆ
ತಮ್ಮ ವಿರುದ್ಧದ ಆರೋಪಗಳಿಗೆ ಹೆಚ್‌ಸಿಜಿ ಆಸ್ಪತ್ರೆ ಸ್ಪಷ್ಟನೆ ನೀಡಿದೆ. ನಾವು ಎಲ್ಲಾ ಗೈಡ್ಲೈನ್ಸ್ಗಳನ್ನೂ ಕಡ್ಡಾಯವಾಗಿ ಫಾಲೋ ಮಾಡ್ತಿದ್ದೇವೆ. ಡಿಜಿಸಿಐ, ಐಸಿಎಂಆರ್ನ ನಿಬಂಧನೆಗಳನ್ನ ಅನುಸರಿಸುತ್ತಿದ್ದೇವೆ. ನಮ್ಮಲ್ಲಿ ಹಲವು ಮಹತ್ವದ ಪ್ರಯೋಗಗಳನ್ನ ಕೈಗೊಳ್ಳಲಾಗುತ್ತಿದೆ. ಎಥಿಕ್ಸ್ ಕಮಿಟಿ ಅನುಮತಿಸಿರುವ ಪ್ರಯೋಗಗಳೇ ನಡೆಯುತ್ತಿವೆ. ಎಲ್ಲದರಲ್ಲೂ ಪಾರದರ್ಶಕತೆ, ರೋಗಿಯ ಸುರಕ್ಷತೆ ಬಗ್ಗೆಯೂ ಗಮನ ಕೊಟ್ಟಿದ್ದೇವೆ ಎಂದು ತಿಳಿಸಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ