/newsfirstlive-kannada/media/post_attachments/wp-content/uploads/2025/03/nirmala-sitaraman.jpg)
ನವದೆಹಲಿ: ಇವತ್ತು ರಾತ್ರಿ ಕಳೆದು ಬೆಳಗಾದ್ರೆ ಜನಸಾಮಾನ್ಯರಿಗೆ ಬೆಲೆ ಏರಿಕೆಯ ಬರೆ ಬೀಳಲಿದೆ. ನಾಳೆಯಿಂದ ದೇಶಾದ್ಯಂತ ಹೊಸ ಆರ್ಥಿಕ ವರ್ಷ ಆರಂಭವಾಗುತ್ತಿದೆ. ಅದರಲ್ಲೂ ಪ್ರಮುಖವಾಗಿ ರಾಜ್ಯದಲ್ಲಿ ನಂದಿನಿ ಹಾಲಿನ ದರ, ವಿದ್ಯುತ್ ದರ, ಹೊಸ ಟೋಲ್ ದರಗಳು ನಾಳೆಯಿಂದಲೇ ಜಾರಿಗೆ ಬರುತ್ತಿದೆ.
ನಾಳೆಯಿಂದ ಯಾವುದರ ದರ ಏರಿಕೆ?
1. ಹಾಲಿನ ದರ 4 ರೂಪಾಯಿ ಹೆಚ್ಚಳ
2. ವಿದ್ಯುತ್ ದರ ಪ್ರತಿ ಯೂನಿಟ್ಗೆ 36 ಪೈಸೆ
3. ಟೋಲ್ ದರ ಶೇಕಡ 5ರಷ್ಟು ಹೆಚ್ಚಳ
ನಾಳೆಯಿಂದ ಹೊಸ ಆರ್ಥಿಕ ವರ್ಷ ಆರಂಭವಾಗುತ್ತಿದ್ದು, ಕೇಂದ್ರ ಸರ್ಕಾರ ಬಜೆಟ್‌ನಲ್ಲಿರುವ ಘೋಷಣೆಗಳು ದೇಶಾದ್ಯಂತ ಜಾರಿಯಾಗುತ್ತಿದೆ. 2025-26ನೇ ಸಾಲಿನಲ್ಲಿ ದೇಶಾದ್ಯಂತ ಹಲವು ಬದಲಾವಣೆಗಳಾಗುತ್ತಿದೆ.
ಆದಾಯ ತೆರಿಗೆ ಮಿತಿ ಹೆಚ್ಚಳ!
ನಾಳೆಯಿಂದ ವಾರ್ಷಿಕ 12 ಲಕ್ಷ ರೂಪಾಯಿವರೆಗೆ ಸಂಪೂರ್ಣ ಆದಾಯ ತೆರಿಗೆ ವಿನಾಯಿತಿ ಸಿಗಲಿದೆ. ಇದರ ಜೊತೆಗೆ 75 ಸಾವಿರ ರೂಪಾಯಿ ಸ್ಟಾಂಡರ್ಡ್ ಡಿಡಕ್ಷನ್ ಇರುತ್ತದೆ. ಒಟ್ಟು ₹12.75 ಲಕ್ಷದವರೆಗೆ ಸಂಪೂರ್ಣ ಆದಾಯ ತೆರಿಗೆ ವಿನಾಯಿತಿ ಪಡೆಯುವ ಅವಕಾಶ ಇದೆ.
ನಿಮ್ಮ ಆದಾಯ ವರ್ಷಕ್ಕೆ 12 ಲಕ್ಷ ರೂಪಾಯಿ ಆದಾಯವಿದ್ರೆ 80 ಸಾವಿರ ಆದಾಯ ತೆರಿಗೆ ಉಳಿತಾಯ ಆಗಲಿದೆ. 18 ಲಕ್ಷ ರೂಪಾಯಿ ಆದಾಯ ಇದ್ದವರಿಗೆ 70 ಸಾವಿರ ರೂಪಾಯಿಯ ಉಳಿತಾಯ ಮತ್ತು 25 ಲಕ್ಷ ರೂ. ಆದಾಯ ಇದ್ದಲ್ಲಿ ₹1.10 ಲಕ್ಷದವರೆಗೆ ತೆರಿಗೆಯ ಉಳಿತಾಯ ಆಗಲಿದೆ.
2 ಮನೆ ಇದ್ರೂ ಬಿಗ್ ರಿಲೀಫ್!
2 ಸ್ವಂತ ಮನೆ ಇರುವವರಿಗೂ ನಾಳೆಯಿಂದ ಬಿಗ್ ರಿಲೀಫ್ ಸಿಗಲಿದೆ. 2ನೇ ಮನೆಯ ವಾರ್ಷಿಕ ಮೌಲ್ಯವನ್ನ ಶೂನ್ಯ ಎಂದು ಪರಿಗಣನೆ ಮಾಡಲಾಗುತ್ತಿದೆ. ಬಜೆಟ್‌ನಲ್ಲಿ ಬಾಡಿಗೆ ಮನೆಯಿಂದ ಬರುವ ಆದಾಯಕ್ಕೆ ಟಿಡಿಎಸ್ ವಿನಾಯಿತಿ 2.5 ಲಕ್ಷ ರೂಪಾಯಿಯಿಂದ 6 ಲಕ್ಷ ರೂಪಾಯಿಗೆ ಏರಿಕೆ ಮಾಡಲಾಗಿದೆ.
ಇದನ್ನೂ ಓದಿ: ಏಪ್ರಿಲ್ 1 ರಿಂದ 7 ಮಹತ್ವದ ಬದಲಾವಣೆಗಳು.. ಹೊಸ ರೂಲ್ಸ್ಗಳು ನಿಮ್ಮ ಜೇಬಿಗೆ ಎಷ್ಟು ಭಾರವಾಗಲಿವೆ?
ಇನ್ನು, ಹಿರಿಯ ನಾಗರಿಕರ ಬಡ್ಡಿ ಆದಾಯದ ಮೇಲಿನ ಟಿಡಿಎಸ್ ವಿನಾಯಿತಿ ಮಿತಿ 1 ಲಕ್ಷ ರೂಪಾಯಿಗೆ ಏರಿಕೆ ಆಗಲಿದೆ. ಸಾಮಾನ್ಯ ನಾಗರಿಕರ ಬಡ್ಡಿ ಆದಾಯದ ಮೇಲಿನ ಟಿಡಿಎಸ್ ವಿನಾಯಿತಿ ಮಿತಿ 50 ಸಾವಿರ ರೂ.ಗೆ, ವಿಮಾ ಏಜೆಂಟ್ ಗಳಿಗೆ ಇದ್ದ ಟಿಡಿಎಸ್ ವಿನಾಯಿತಿ ಮಿತಿ 15 ರಿಂದ 20 ಸಾವಿರ ರೂ.ಗೆ, ಮ್ಯೂಚುವಲ್ ಫಂಡ್, ಷೇರು, ಲಾಭಾಂಶ, ಆದಾಯದ ಮೇಲಿನ ಟಿಡಿಎಸ್ ವಿನಾಯಿತಿ ಮಿತಿ 5 ಸಾವಿರದಿಂದ 10 ಸಾವಿರಕ್ಕೆ ಏರಿಕೆ ಆಗಲಿದೆ. ಮ್ಯೂಚುವಲ್ ಫಂಡ್, ಷೇರು, ಲಾಭಾಂಶದ ಆದಾಯ 10 ಸಾವಿರ ರೂ ಮೀರಿದಾಗ ಟಿಡಿಎಸ್ ಅನ್ವಯವಾಗುತ್ತೆ.
ಮೇ, 1ರಿಂದ ಎಟಿಎಂ ಶುಲ್ಕ ದುಬಾರಿ
ನಾಳೆಯಿಂದ ಉಚಿತ ಮಿತಿ ಮೀರಿ ಹೆಚ್ಚು ಬಾರಿ ಎಟಿಎಂ ಮೂಲಕ ಹಣ ವಿತ್ ಡ್ರಾ ಮಾಡಿದರೆ, ಪ್ರತಿ ವಿತ್ ಡ್ರಾಗೆ 2 ರೂಪಾಯಿ ಶುಲ್ಕ ವಿಧಿಸಲಾಗುತ್ತೆ. ಸದ್ಯಕ್ಕೆ ತಿಂಗಳಲ್ಲಿ 5 ಬಾರಿ ವಿತ್ ಡ್ರಾ ಉಚಿತವಾಗಿದೆ.
ಇದರ ಜೊತೆಗೆ ನಾಳೆ ದೇಶಾದ್ಯಂತ ಗೃಹ ಬಳಕೆ ಹಾಗೂ ಕಮರ್ಷಿಯಲ್ ಎಲ್‌ಪಿಜಿ ಸಿಲಿಂಡರ್ ಬೆಲೆಯು ಬದಲಾಗಲಿದೆ. ತೈಲ ಕಂಪನಿಗಳು ನಾಳೆ ದರ ಪರಿಷ್ಕರಿಸಲಿವೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ