/newsfirstlive-kannada/media/post_attachments/wp-content/uploads/2025/03/APSARA-AND-SAIKRISHNA-PRIEST.jpg)
ಆಕೆ ಟಿವಿಯಲ್ಲಿ ನಟಿಯಾಗಿ ಮಿಂಚಬೇಕು ಎಂಬ ಆಸೆ ಹೊಂದಿದ್ದವಳು.ಅರ್ಚಕನೊಬ್ಬನ ಪ್ರೀತಿಯ ಬಲೆಯಲ್ಲಿ ಬಿದ್ದಿದ್ದಳು. ಆದ್ರೆ ಆ ಅರ್ಚಕನಿಗೆ ಮೊದಲೇ ಮದುವೆಯಾಗಿತ್ತು. ಆದರೂ ನಟಿಯಾಗಬೇಕು ಎಂಬ ಮಹತ್ವಾಕಾಂಕ್ಷೆ ಹೊಂದಿದ್ದ ಯುವತಿಯ ಜೊತೆ ಪ್ರೀತಿ, ಪ್ರೇಮ, ಪ್ರಣಯ ನಡೆಸಿದ್ದ ಅರ್ಚಕ ಆಕೆಯನ್ನು ಮದುವೆಯಾಗುವುದಾಗಿ ಮಾತು ಕೊಟ್ಟಿರುತ್ತಾನೆ.ಒಂದು ಸಮಯ ಬಂದಾಗ ಆಕೆ ಮದುವೆಯಾಗುವಂತೆ ಆತನ ದುಂಬಾಲು ಬೀಳುತ್ತಾಳೆ. ಕೊನೆಗೆ ದಾರಿ ಕಾಣದೇ ಆತ ಆಕೆಯನ್ನು ಹತ್ಯೆ ಮಾಡಿ ಸೆಪ್ಟಿಕ್ ಟ್ಯಾಂಕ್ನಲ್ಲಿ ಶವವನ್ನು ತುರುಕಿ ಅದನ್ನು ಮರಳಿನಿಂದ ಮುಚ್ಚಿ ಮೇಲೆ ಸಿಮೆಂಟ್ನಿಂದ ಸೀಲ್ ಮಾಡಿಬಿಡುತ್ತಾನೆ. ಇದೇ ಪ್ರಕರಣದಲ್ಲಿ ಈಗ ರಂಗಾರೆಡ್ಡಿ ಜಿಲ್ಲಾ ನ್ಯಾಯಾಲಯ ಆ ಅರ್ಚಕನಿಗೆ ಜೀವಾವಧಿ ಶಿಕ್ಷೆ ನೀಡುವುದರೊಂದಿಗೆ 10 ಲಕ್ಷ ರೂಪಾಯಿ ದಂಡ ವಿಧಿಸಿದೆ. 9.75 ಲಕ್ಷ ಸಂತ್ರಸ್ತೆಯ ಕುಟುಂಬಕ್ಕೆ ಹಾಗೂ 25 ಸಾವಿರ ರೂಪಾಯಿ ಕೋರ್ಟ್ಗೆ.
ನಾವು ಈಗ ಹೇಳುತ್ತಿರುವ ಸುದ್ದಿ ಯಾವುದು ಎಂಬ ಬಗ್ಗೆ ನಿಮಗೆ ಕೊಂಚ ಐಡಿಯಾ ಸಿಕ್ಕಿರಬಹುದು. ನಾವು ಹೇಳುತ್ತಿರುವುದು 2023ರಲ್ಲಿ ನಡೆದ ಕುರುಗಂತಿ ಅಪ್ಸರಾ ಎಂಬ ಯುವತಿ ದಾರುಣ ಸಾವಿನ ಬಗ್ಗೆ. ಆಕೆಯನ್ನು ಆತ ಎಷ್ಟು ಬರ್ಬರವಾಗಿ ಹತ್ಯೆ ಮಾಡಿದ್ದನೋ ಅಷ್ಟೇ ಮಟ್ಟದ ಶಿಕ್ಷೆಯನ್ನು ಈಗ ಕೋರ್ಟ್ ಆತನಿಗೆ ನೀಡಿದೆ. ಜೀವಾವಧಿ ಶಿಕ್ಷೆ ನೀಡಿ ಮೇಲೆ 10 ಲಕ್ಷ ರೂಪಾಯಿ ದಂಡ ವಿಧಿಸಿದೆ.
ಇದನ್ನೂ ಓದಿ: VIDEO: ಇಬ್ಬರೂ ಚೆನ್ನಾಗಿರಿ.. ಮಡದಿಯನ್ನ ಅವಳ ಪ್ರಿಯಕರನೊಂದಿಗೆ ಮದುವೆ ಮಾಡಿಸಿದ ಪತಿ!
ಇದು 2023ರಲ್ಲಿ ದೇಶಾದ್ಯಂತ ಸುದ್ದಿ ಮಾಡಿದ್ದ ಒಂದು ಪ್ರಕರಣ ಐಯ್ಯಂಗಾರಿ ವೆಂಕಟ ಸಾಯಿಕೃಷ್ಣ ಎಂಬ ಅರ್ಚಕ ಕುರುಗಂತಿ ಅಪ್ಸರಾ, ಜೀವನದಲ್ಲಿ ದೊಡ್ಡ ಮಹತ್ವಾಕಾಂಕ್ಷೆಯನ್ನಿಟ್ಟುಕೊಂಡಿದ್ದ ಹಾಗೂ ಟಿವಿಯಲ್ಲಿ ನಟಿಯಾಗಿ ಮಿಂಚಬೇಕು ಎಂಬ ಆಸೆಯನ್ನಿಟ್ಟುಕೊಂಡವಳನ್ನು ಪ್ರೀತಿಯ ಬಲೆಯಲ್ಲಿ ಬೀಳಿಸಿಕೊಂಡು ಹತ್ಯೆ ಮಾಡಿದ್ದ.
ಆ ಒಂದು ದಿನ ಸಾಯಿ ಕೃಷ್ಣ ಅಪ್ಸರಾಳನ್ನು ಶಮಷಾಬಾದ್ಗೆ ಡ್ರಾಪ್ ಮಾಡಲು ತನ್ನ ಕಾರಿನಲ್ಲಿ ಕರೆದುಕೊಡು ಹೊರಟಿದ್ದ. ಆಕೆ ಅಲ್ಲಿಂದ ತನ್ನ ಸ್ನೇಹಿತೆಯೊಂದಿಗೆ ಕೊಯಮತ್ತೂರ್ಗೆ ಪ್ರಯಾಣ ಬೆಳೆಸಬೇಕಿತ್ತು. ಶಮಷಾಬಾದ್ಗೆ ಹೊರಡುವ ಬದಲು ಆತ ಒಂದು ಕಟ್ಟಡ ಕಾಮಗಾರಿ ನಡೆಯುತ್ತಿದ್ದ ಪ್ರದೇಶಕ್ಕೆ ಕರೆದುಕೊಂಡು ಹೋಗಿದ್ದ ಸಾಯಿ ಕೃಷ್ಣ ಆಕೆಯನ್ನು ಹತ್ಯೆ ಮಾಡಿದ್ದ.
ನಂತರ ಮನೆಗೆ ಬಂದ ಸಾಯಿ ಕೃಷ್ಣ ತನ್ನ ಕಾರನ್ನು ಪಾರ್ಕಿಂಗ್ ಸ್ಲಾಟ್ನಲ್ಲಿಯೇ ಎರಡು ದಿನ ಪಾರ್ಕ್ ಮಾಡಿದ್ದ. ಅಪ್ಸರಾಳ ಮೃತದೇಹವು ಕೂಡ ಕಾರಿನಲ್ಲಿಯೇ ಇತ್ತು. ವಾಸನೆ ಬರದಿರಲಿ ಅಂತ ನಿತ್ಯ ಅದಕ್ಕೆ ರೂಮ್ ಫ್ರೆಶನರ್ ಸ್ಪ್ರೇ ಹೊಡೆಯುತ್ತಿದ್ದ. ಕಡೆಗೆ ಒಂದು ದಿನ ಅಪ್ಸರಾಳ ಮೃತದೇಹವನ್ನು ತನ್ನ ಮನೆಯ ಪಕ್ಕದಲ್ಲಿಯೇ ಇರುವ ಸರ್ಕಾರ ಕಟ್ಟಡದ ಸೆಪ್ಟಿಕ್ ಟ್ಯಾಂಕ್ನಲ್ಲಿ ಎಸೆದು ಅದನ್ನು ಮರಳಿನಿಂದು ತುಂಬಿ ಸಿಮೆಂಟ್ನಿಂದ ಸೀಲ್ ಮಾಡಿ ಬಂದಿದ್ದ.
ಇದಾದ ಬಳಿಕ ಅಪ್ಸರರಾಳ ತಾಯಿ ಹಾಗೂ ಸಹೋದರಿ ಮಿಸ್ಸಿಂಗ್ ಕಂಪ್ಲೆಂಟ್ ದಾಖಲು ಮಾಡುತ್ತಾರೆ. ತನಿಖೆಗೆ ಇಳಿದ ಪೊಲೀಸರಿಗೆ ಕೃಷ್ಣ ಜೊತೆ ಅಪ್ಸರಾ ಸಂಪರ್ಕದಲ್ಲಿರುವ ಸಾಕ್ಷಿಗಳು ಸಿಗುತ್ತವೆ. ಕೂಡಲೇ ಆತನನ್ನು ವಶಕ್ಕೆ ಪಡೆದ ಪೊಲೀಸರು ವಿಚಾರಣೆ ಮಾಡಿದಾಗ ಸತ್ಯ ಹೊರಗೆ ಬರುತ್ತದೆ. ಸೀಲ್ ಮಾಡಲಾಗಿದ್ದ ಸೆಪ್ಟಿಕ್ ಟ್ಯಾಂಕ್ನ್ನು ಒಡೆದು ಮೃತದೇಹವನ್ನು ರಿಕವರಿ ಮಾಡುತ್ತಾರೆ.
ಇದನ್ನೂ ಓದಿ:2036 Olympics; ಭಾರತಕ್ಕೆ 64,000 ಕೋಟಿ ಹಣ ಖರ್ಚು ಆಗೋ ಸಾಧ್ಯತೆ.. ಹೇಗೆ?
ಸದ್ಯ ಇದೇ ಪ್ರಕರಣಕ್ಕೆ ಸಂಬಂಧಿಸಿದಂತೆ ರಂಗಾರೆಡ್ಡಿ ಜಿಲ್ಲಾ ನ್ಯಾಯಾಲಯ ಐಯ್ಯಂಗಾರಿ ಸಾಯಿ ಕೃಷ್ಣನನ್ನು ಅಪರಾಧಿ ಎಂದು ಘೋಷಿಸಿ ಜೀವಾವಧಿ ಶಿಕ್ಷೆಯನ್ನು ನೀಡಿದೆ. ಅದರ ಜೊತೆಗೆ 10 ಲಕ್ಷ ರೂಪಾಯಿ ದಂಡ ವಿಧಿಸಿದ್ದು ಅದರಲ್ಲಿ 9.75 ಲಕ್ಷ ರೂಪಾಯಿ ಅಪ್ಸರಾಳ ಕುಟುಂಬಕ್ಕೆ ಹಾಗೂ 25 ಸಾವಿರ ರೂಪಾಯಿ ಕೋರ್ಟ್ಗೆ ನೀಡಬೇಕು ಎಂದು ಆದೇಶ ಹೊರಡಿಸಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ