newsfirstkannada.com

ಪ್ರಧಾನಿಯಾಗಿ ಸತತ 10ನೇ ಬಾರಿಗೆ ಮೋದಿ ಭಾಷಣ; ನಾಳೆ 1800 ವಿಶೇಷ ಅತಿಥಿಗಳೊಂದಿಗೆ ನಮೋ ಸ್ವಾತಂತ್ರ್ಯೋತ್ಸವದ ಸಂಭ್ರಮ

Share :

14-08-2023

    26 ಮೇ 2014ರಲ್ಲಿ ಪ್ರಧಾನಿಯಾದ ನರೇಂದ್ರ ಮೋದಿ

    ನಾಳೆ ಕೆಂಪು ಕೋಟೆಯಲ್ಲಿ ನಡೆಯುವ ಕಾರ್ಯಕ್ರಮ

    ಮಹತ್ವದ ಯೋಜನೆಗಳನ್ನ ಘೋಷಿಸಬಹುದೆಂಬ ನಿರೀಕ್ಷೆ

ದೇಶದಾದ್ಯಂತ 76ನೇ ಸ್ವಾತಂತ್ರ್ಯೋತ್ಸವದ ಸಂಭ್ರಮ ಮನೆಮಾಡಿದೆ. ನಾಳೆ ಪ್ರಧಾನಿ ನರೇಂದ್ರ ಮೋದಿ ಕೆಂಪು ಕೋಟೆಯ ಮೇಲೆ ತ್ರಿವರ್ಣ ಧ್ವಜವನ್ನು ಹಾರಿಸಲಿದ್ದಾರೆ. ಅಂದಹಾಗೆಯೇ ಸತತ 10ನೇ ಬಾರಿ ಮೋದಿ ಸ್ವಾತಂತ್ರ್ಯೋತ್ಸವದ ಬಗ್ಗೆ ದೇಶವನ್ನುದ್ದೇಶಿಸಿ ಭಾಷಣ ಮಾತನಾಡಲಿದ್ದಾರೆ.

ಮೋದಿ 2024ರ ಲೋಕಸಭಾ ಚುನಾವಣೆಗೂ ಮುನ್ನ ಮಾಡುತ್ತಿರುವ ಕೊನೆಯ ಭಾಷಣ ಇದಾಗಿದೆ. ಸರ್ಕಾರದ ಸಾಧನೆ, ಪ್ರಮುಖ ಉಪಕ್ರಮಗಳನ್ನು ಮತ್ತು ರಾಷ್ಟ್ರಕ್ಕಾಗಿ ಅವರು ಹರಿಸಿರುವ ದೃಷ್ಟಿಕೋನವನ್ನು ವ್ಯಕ್ತಪಡಿಸಲಿದ್ದಾರೆ ಎಂಬ ನಿರೀಕ್ಷೆ ಎಲ್ಲರಲ್ಲಿ ಹುಟ್ಟಿದೆ.

ಮೋದಿ ಪ್ರಧಾನಿಯಾಗಿ 26 ಮೇ 2014ರಲ್ಲಿ ಅಧಿಕಾರ ವಹಿಸಿಕೊಂಡರು. ಮೊದಲ ಬಾರಿಗೆ ಪ್ರಧಾನಿಯಾದ ಸಂದರ್ಭದಲ್ಲಿ ಸ್ವಚ್ಛ ಭಾರತ ಮತ್ತು ‘ಜನ್​ಧನ್​ ಯೋಜನೆ’ ಬಗ್ಗೆ ಮಾಹಿತಿ ಹಂಚಿಕೊಂಡರು. ಇನ್ನು ಮುಂಬರುವ 2024ರಲ್ಲಿ ಲೋಕಸಭಾ ಚುನಾವಣೆಯಿರುವ ಕಾರಣ ಮಹತ್ವದ ಯೋಜನೆಗಳನ್ನು ಘೋಷಿಸಬಹುದು ಎನ್ನಲಾಗುತ್ತಿದೆ.

ಮೋದಿ
ಪ್ರಧಾನಿ ನರೇಂದ್ರ ಮೋದಿ

1800 ವಿಶೇಷ ಅತಿಥಿಗಳು

ಇನ್ನು ನಾಳೆ ಕೆಂಪು ಕೋಟೆಯಲ್ಲಿ ನಡೆಯುವ ಕಾರ್ಯಕ್ರಮಕ್ಕೆ 1800 ವಿಶೇಷ ಅತಿಥಿಗಳನ್ನು ಆಹ್ವಾನಿಸಲಾಗಿದೆ. ಅದರಲ್ಲಿ ಕೇಂದ್ರ ಸರ್ಕಾರ ‘ಜನ್​ ಭಾಗಿದಾರಿ’ಗೆ ಅನುಗುಣವಾಗಿ ದೇಶದ ವಿವಿಧ ಭಾಗದ 50 ದಾದಿಯರ ತಂಡದೊಂದಿಗೆ ಸ್ವಾತಂತ್ರ್ಯ ದಿನಾಚರಣೆಯನ್ನು ಆಚರಿಸಲಿದ್ದಾರೆ. ಇವರೊಂದಿಗೆ ಶಿಕ್ಷಕರು, ರೈತರು, ಮೀನುಗಾರರು ಸೇರಿ ಮತ್ತಷ್ಟು ಅತಿಥಿಗಳು ಈ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಪ್ರಧಾನಿಯಾಗಿ ಸತತ 10ನೇ ಬಾರಿಗೆ ಮೋದಿ ಭಾಷಣ; ನಾಳೆ 1800 ವಿಶೇಷ ಅತಿಥಿಗಳೊಂದಿಗೆ ನಮೋ ಸ್ವಾತಂತ್ರ್ಯೋತ್ಸವದ ಸಂಭ್ರಮ

https://newsfirstlive.com/wp-content/uploads/2023/08/Modi-1-1.jpg

Load More