ದೇಶದಲ್ಲಿ GST ಸ್ಲ್ಯಾಬ್ ಬದಲಾವಣೆಗೆ ಮೋದಿ ಒಪ್ಪಿಗೆ.. ಮುಂದಿನ ತಿಂಗಳೇ ಗುಡ್​ನ್ಯೂಸ್​..?

author-image
Veena Gangani
Updated On
ದೇಶದಲ್ಲಿ GST ಸ್ಲ್ಯಾಬ್ ಬದಲಾವಣೆಗೆ ಮೋದಿ ಒಪ್ಪಿಗೆ.. ಮುಂದಿನ ತಿಂಗಳೇ ಗುಡ್​ನ್ಯೂಸ್​..?
Advertisment
  • ಆಗಸ್ಟ್ ತಿಂಗಳಿನಲ್ಲಿ ನಡೆಯುವ ಜಿಎಸ್‌ಟಿ ಕೌನ್ಸಿಲ್ ಸಭೆ
  • ಸಣ್ಣ ಮತ್ತು ಮಧ್ಯಮ ಉದ್ದಿಮೆದಾರರ ಮೇಲಿನ ಹೊರೆ ಕಡಿಮೆ
  • ಈಗಾಗಲೇ ಕೇಂದ್ರದ ಹಣಕಾಸು ಇಲಾಖೆಯಿಂದ ಚರ್ಚೆ ಶುರು

ಭಾರತದಲ್ಲಿ ಕಳೆದ 8 ವರ್ಷಗಳಿಂದ ಜಾರಿಯಲ್ಲಿರುವ ಜಿಎಸ್‌ಟಿ (Goods and Services Tax) ವ್ಯವಸ್ಥೆಯಲ್ಲಿ ಸದ್ಯದಲ್ಲೇ ಭಾರಿ ಬದಲಾವಣೆ ಆಗಲಿದೆ. ಜಿಎಸ್‌ಟಿ ಸ್ವರೂಪದಲ್ಲಿ ಬದಲಾವಣೆ ಮಾಡಲು ಪ್ರಧಾನಮಂತ್ರಿ ಕಚೇರಿ ತಾತ್ವಿಕ ಒಪ್ಪಿಗೆ ನೀಡಿದೆ. ಆಗಸ್ಟ್ ತಿಂಗಳಿನಲ್ಲಿ ನಡೆಯುವ ಜಿಎಸ್‌ಟಿ ಕೌನ್ಸಿಲ್ ಸಭೆಯಲ್ಲಿ ಈ ಬಗ್ಗೆ ತೀರ್ಮಾನ ಕೈಗೊಳ್ಳಲಾಗುತ್ತೆ. ಕೇಂದ್ರದ ಹಣಕಾಸು ಇಲಾಖೆಯು ಈಗಾಗಲೇ ಈ ಬಗ್ಗೆ ಅಂತರಿಕ ಚರ್ಚೆಗಳನ್ನು ನಡೆಸಿದ್ದು, ರಾಜ್ಯ ಸರ್ಕಾರಗಳ ಜೊತೆಗೂ ಮಾತುಕತೆ ನಡೆಸುತ್ತಿದೆ.

ಇದನ್ನೂ ಓದಿ:  ಹೈಕೋರ್ಟ್ ಸೂಕ್ತ ವಿವೇಚನೆ ಬಳಸಿ ದರ್ಶನ್​​ಗೆ ಜಾಮೀನು ನೀಡಿಲ್ಲ -ಸುಪ್ರೀಂ ಕೋರ್ಟ್​ ಅತೃಪ್ತಿ

ಪ್ರಸ್ತಾವಿತ ಬದಲಾವಣೆಗಳಿಗೆ ರಾಜ್ಯ ಸರ್ಕಾರಗಳ ಒಪ್ಪಿಗೆ ಹಾಗೂ ಸಹಮತ ಪಡೆಯಲು ಕೇಂದ್ರದ ಹಣಕಾಸು ಇಲಾಖೆ ಮಾತುಕತೆ ನಡೆಸುತ್ತಿದೆ. ಜಿಎಸ್‌ಟಿಯನ್ನು ಸರಳೀಕರಣಗೊಳಿಸುವ ಮತ್ತು ಬ್ಯುಸಿನೆಸ್, ಗ್ರಾಹಕರಿಗೆ ತೊಂದರೆಯನ್ನು ಕಡಿಮೆ ಮಾಡುವುದು ಈ ಬದಲಾವಣೆಯ ಉದ್ದೇಶ. ಜಿಎಸ್‌ಟಿಯಲ್ಲಿ ಸದ್ಯ ನಾಲ್ಕು ಸ್ಲ್ಯಾಬ್​ಗಳಿವೆ. ಇವುಗಳನ್ನು ಬದಲಾವಣೆ ಮಾಡಲಾಗುತ್ತೆ. ದೇಶದ ಆರ್ಥಿಕತೆಯ ಬೆಳವಣಿಗೆಗೆ ಅನುಕೂಲವಾಗುವ ನಿಟ್ಟಿನಲ್ಲಿ ಬದಲಾವಣೆಗಳನ್ನು ಮಾಡಲಾಗುತ್ತೆ. ದೇಶದ ಆರ್ಥಿಕತೆಯ ಸ್ಥಿತಿ ಈಗ ಉತ್ತಮವಾಗಿದೆ. ಹೀಗಾಗಿ ಜಿಎಸ್‌ಟಿ ಸ್ಲ್ಯಾಬ್​ಗಳಲ್ಲಿ ಬದಲಾವಣೆ ಮಾಡಲು ಇದು ಸೂಕ್ತ ಕಾಲ ಎಂದು ಅಧಿಕಾರಿಗಳು ಸರ್ಕಾರಕ್ಕೆ ಸಲಹೆ ನೀಡಿದ್ದಾರೆ.

ಸದ್ಯ ದೇಶದಲ್ಲಿ ಐದು ಜಿಎಸ್‌ಟಿ ಸ್ಲ್ಯಾಬ್ ಗಳಿವೆ. ಶೇ.0 , ಶೇ.5, ಶೇ.12 , ಶೇ.18 ಹಾಗೂ ಶೇ.28 ರ ಟ್ಸಾಕ್ಸ್ ಸ್ಲ್ಯಾಬ್ ಗಳಿವೆ. ಶೇ.12 ರ ಸ್ಲ್ಯಾಬ್ ನಲ್ಲಿ ಶೇ.19 ರಷ್ಟು ಉತ್ಪನ್ನಗಳಿವೆ. ಶೇ.12 ರ ಸ್ಲ್ಯಾಬ್ ಅನ್ನು ತೆಗೆದು ಹಾಕಿ, ಅದರ ಉತ್ಪನ್ನಗಳನ್ನು ಶೇ.5 ಮತ್ತು ಶೇ.18 ಕ್ಕೆ ಶಿಫ್ಟ್ ಮಾಡುವ ಉದ್ದೇಶ ಇದೆ. ಉತ್ಪನ್ನದ ಸ್ವರೂಪದ ಆಧಾರದ ಮೇಲೆ ಶೇ.5 ಮತ್ತು ಶೇ.18 ಕ್ಕೆ ಶಿಫ್ಟ್ ಮಾಡಲಾಗುತ್ತೆ. ಇದರಿಂದಾಗಿ ಜಿಎಸ್‌ಟಿ ವ್ಯವಸ್ಥೆ ಅರ್ಥ ಮಾಡಿಕೊಳ್ಳಲು ಮತ್ತು ಆಡಳಿತಾತ್ಮಕ ಉದ್ದೇಶಗಳಿಗೆ ಅನುಕೂಲವಾಗುತ್ತೆ.

ಜಿಎಸ್‌ಟಿ ವ್ಯವಸ್ಥೆಯನ್ನು ಬದಲಾವಣೆ ಹಾಗೂ ಸುಧಾರಣೆ ಮೂಲಕ ದೇಶದ ಆರ್ಥಿಕತೆಯನ್ನು ಮುಂದಿನ ಮುಕ್ತ ವ್ಯಾಪಾರ ಒಪ್ಪಂದಗಳಿಗೆ ಸಿದ್ದಪಡಿಸುವ ಕೆಲಸವನ್ನು ಮಾಡಲಾಗುತ್ತಿದೆ ಎಂದು ಹೇಳಲಾಗುತ್ತಿದೆ. ಸುಸೂತ್ರವಾದ ಮತ್ತು ಸರಳವಾದ ತೆರಿಗೆ ವ್ಯವಸ್ಥೆಯಿಂದ ಭಾರತದ ಉದ್ಯಮ ವಲಯಕ್ಕೆ ಅನುಕೂಲವಾಗುತ್ತೆ. ಜೊತೆಗೆ ಹೊಸ ಬ್ಯುಸಿನೆಸ್ ಅವಕಾಶಗಳನ್ನು ಪಡೆಯಲು ಕೂಡ ಅನುಕೂಲವಾಗುತ್ತೆ. ಭಾರತದಲ್ಲಿ ಉದ್ಯಮಿಗಳು ಕೂಡ ಜಿಎಸ್‌ಟಿ ಸ್ವರೂಪದಲ್ಲಿನ ಸಮಸ್ಯೆ ಬಗೆಹರಿಸಲು ಕೇಂದ್ರ ಸರ್ಕಾರವನ್ನು ಒತ್ತಾಯಿಸುತ್ತಿದ್ದರು. ಬಹು ತೆರಿಗೆ ದರಗಳಿಂದ ಸಮಸ್ಯೆ ಮತ್ತು ಇನ್ ಫುಟ್ ಟ್ಯಾಕ್ಸ್ ಕ್ರೆಡಿಟ್ ಪಡೆಯುವಾಗ ಗೊಂದಲ ಉಂಟಾಗುತ್ತಿದೆ ಎಂದು ಕೇಂದ್ರ ಸರ್ಕಾರದ ಗಮನಕ್ಕೆ ತಂದಿದ್ದರು. ಇನ್ನೂ ವಿವಿಧ ರಾಜಕೀಯ ಪಕ್ಷಗಳ ನಾಯಕರು ಕೂಡ ಜಿಎಸ್‌ಟಿ ದರಗಳನ್ನು ಮರುಪರಿಶೀಲಿಸಬೇಕು. ಸಣ್ಣ ಮತ್ತು ಮಧ್ಯಮ ಉದ್ದಿಮೆದಾರರ ಮೇಲಿನ ಹೊರೆ ಕಡಿಮೆ ಮಾಡಬೇಕೆಂದು ಆಗ್ರಹಿಸಿದ್ದರು.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment