/newsfirstlive-kannada/media/post_attachments/wp-content/uploads/2025/02/MODI-GIFT-TO-WOMEN.jpg)
ವಿಶ್ವ ಮಹಿಳಾ ದಿನಾಚರಣೆಯಂದು ಪ್ರಧಾನಿ ನರೇಂದ್ರ ಮೋದಿಯವರು ದೇಶದ ಯಶಸ್ವಿ ಮಹಿಳೆಯರಿಗೆ ಬಿಗ್​​ ಗಿಫ್ಟ್ ಕೊಟ್ಟಿದ್ದಾರೆ. ಮಾರ್ಚ್​​ 8 ರಂದು ವಿಶ್ವ ಮಹಿಳಾ ದಿನಾಚರಣೆ ಆಚರಿಸಲಾಗುತ್ತಿದ್ದು, ಹೀಗಾಗಿ ತಮ್ಮ ವಿವಿಧ ಸೋಷಿಯಲ್ ಮೀಡಿಯಾಗಳನ್ನು ಹ್ಯಾಂಡಲ್ ಮಾಡಲು ವಿವಿಧ ಕ್ಷೇತ್ರದಲ್ಲಿ ಸಾಧನೆ ಮಾಡಿದ ವನಿತೆಯರಿಗೆ ಬಿಟ್ಟುಕೊಡುವುದಾಗಿ ಹೇಳಿದ್ದಾರೆ.
ತಮ್ಮ ಮನ್​ ಕಿ ಬಾತ್​ನಲ್ಲಿ ಈ ಬಗ್ಗೆ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿಯವರು. ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಮಹಿಳೆಯರು ತಮ್ಮ ಅನುಭವ ಹಾಗೂ ವಿಶೇಷ ಸಂದೇಶವನ್ನು ತಮ್ಮ ಸೋಷಿಯಲ್ ಮೀಡಿಯಾ ಖಾತೆಯಿಂದ ಜನರಿಗೆ ತಿಳಿಸಬಹುದು ಎಂದು ಮೋದಿ ಹೇಳಿದ್ದಾರೆ. ಈ ಮೂಲಕ ನಾವು ಮಹಿಳೆಯರ ಅದಮ್ಯ ಚೇತನವನ್ನು ಸಂಭ್ರಮಿಸೋಣ ಎಂದು ಹೇಳಿದ ಮೋದಿ, ಹೆಚ್ಚು ಹೆಚ್ಚು ಮಹಿಳೆಯರು ಇಲ್ಲಿ ಭಾಗಿಯಾಗುವಂತೆ ಕೇಳಿಕೊಂಡಿದ್ದಾರೆ.
/newsfirstlive-kannada/media/post_attachments/wp-content/uploads/2025/02/MODI-GIFT-TO-WOMEN-1.jpg)
ಮಾರ್ಚ್​ 8 ರಂದು ದೇಶದಲ್ಲಿ ವಿವಿಧ ಕ್ಷೇತ್ರಗಳಲ್ಲಿ ಅದಮ್ಯ ಸಾಧನೆ ಮಾಡಿದ ಮಹಿಳೆಯರಿಗೆ ಮಾರ್ಚ್​ 8 ರಂದು ಮೋದಿಯವರ ಸೋಷಿಯಲ್ ಮೀಡಿಯಾಗಳಾದ ಎಕ್ಸ್, ಫೇಸ್​​ಬುಕ್​, ಯೂಟ್ಯೂಬ್​ ಇನ್​​ಸ್ಟಾಗ್ರಾಮ್ ಇವೆಲ್ಲವನ್ನೂ ಯಶಸ್ವಿ ಮಹಿಳೆಯರೇ ಹ್ಯಾಂಡಲ್ ಮಾಡುವಂತೆ ಹೇಳಿಕೊಂಡಿದ್ದಾರೆ. ಸೋಷಿಯಲ್​ ಮೀಡಿಯಾದಲ್ಲಿ ಜಾಗತಿಕವಾಗಿ ಅತಿಹೆಚ್ಚು ಫಾವೋರ್ಸ್​ಗಳನ್ನು ಹೊಂದಿರುವ ನಾಯಕರಲ್ಲಿ ಮೋದಿಯೂ ಕೂಡ ಒಬ್ಬರು. ಅವರ ಎಕ್ಸ್ ಖಾತೆಗೆ ಸುಮಾರು 10 ಕೋಟಿಗೂ ಅಧಿಕ ಜನರು ಫಾಲೋವರ್​​ಗಳಿದ್ದಾರೆ.
/newsfirstlive-kannada/media/post_attachments/wp-content/uploads/2024/08/NEERAJ-CHOPRA-1-2.jpg)
ಇನ್ನು ಮುಂದುವರಿದು ಮಾತನಾಡಿರುವ ಮೋದಿಯವರು ದೇಶದ ಜನರಿಗೆ ಮತ್ತೊಂದು ಮನವಿಯನ್ನು ಮಾಡಿದ್ದಾರೆ. ದೇಶದಲ್ಲಿ ಹೆಚ್ಚುತ್ತಿರುವ ಬೊಜ್ಜಿನ ಸಮಸ್ಯೆಯನ್ನು ಸರಿಯಾಗಿ ನಿರ್ವಹಿಸಿ. ಇದು ದೇಶವನ್ನು ಸರಿಯಾದ ಹಾಗೂ ಆರೋಗ್ಯವಂತ ದೇಶವಾಗುವತ್ತ ಕರೆದುಕೊಂಡು ಹೋಗುತ್ತದೆ ಎಂದು ಮೋದಿಯವರು ಮನವಿ ಮಾಡಿದ್ದಾರೆ.
ಇದನ್ನೂ ಓದಿ: ದೆಹಲಿಯಲ್ಲಿ ರೇಖಾ ಗುಪ್ತ ದರ್ಬಾರ್.. ಹೇಗಿದೆ ನೂತನ ಸರ್ಕಾರ? ಮಹಿಳೆಯರಿಗೆ ಮೊದಲ ಉಡುಗೊರೆ!
ದೇಶದ 8 ಜನರಲ್ಲಿ ಒಬ್ಬರು ಈ ಬೊಜ್ಜು ಸಮಸ್ಯೆಯಿಂದ ಬಳಲುತ್ತಿದ್ದಾರೆ, ಕಳೆದ ಕೆಲವು ವರ್ಷಗಳಿಂದ ಅವರ ಸಂಖ್ಯೆ ದ್ವಿಮುಖವಾಗುತ್ತಿದೆ. ಅದಕ್ಕಿಂತ ದೊಡ್ಡ ಚಿಂತಾಜನಕ ವಿಷಯವೆಂದರೆ ಮಕ್ಕಳಲ್ಲಿ ಈ ಬೊಜ್ಜಿನ ಸಮಸ್ಯೆ ನಾಲ್ಕು ಪಟ್ಟು ಹೆಚ್ಚುತ್ತಿದೆ. ಹೀಗಾಗಿ ಬೊಜ್ಜು ನಿರ್ವಹಣೆಯ ಬಗ್ಗೆ ಕಾಳಜಿವಹಿಸಿ ಎಂದು ಹೇಳಿದ್ದಾರೆ. ಅದು ಅಲ್ಲದೇ ಹೆಚ್ಚು ಎಣ್ಣೆಯುಕ್ತ ಪದಾರ್ಥವನ್ನು ಸೇವಿಸುವುದ ಕಡಿಮೆ ಮಾಡುಂತೆಯೂ ಕೂಡ ಮನವಿ ಮಾಡಿಕೊಂಡಿದ್ದಾರೆ. 10 ಜನರು ಈ ಒಂದು ಮಾರ್ಗವನ್ನು ಅನುಸರಿಸಿ ಆ ಹತ್ತು ಜನರಲ್ಲಿ ಒಬ್ಬಬ್ಬರೂ 10 ಜನರಿಗೆ ಮಾರ್ಗದರ್ಶನ ನೀಡಿ ಎಂದು ಹೇಳಿದ್ದಾರೆ.
ಇದನ್ನೂ ಓದಿ:ಗೃಹಲಕ್ಷ್ಮಿ ಹಣಕ್ಕಾಗಿ ಕಾಯ್ತಿರೋರಿಗೆ ಗುಡ್​ನ್ಯೂಸ್ ನೀಡಿದ ಸಚಿವೆ ಹೆಬ್ಬಾಳ್ಕರ್..!
ಒಲಿಂಪಿಕ್ಸ್​ ಗೋಲ್ಡ್​ ಪದಕ ವಿಜೇತ ನೀರಜ್ ಚೋಪ್ರಾ ಸೇರಿದಂತೆ ಹಲವು ವ್ಯಕ್ತಿಗಳ ಆಡಿಯೋ ಪ್ಲೇ ಮಾಡಿದ ಮೋದಿ. ಬೊಜ್ಜನ್ನು ನಿಯಂತ್ರಣ ಮಾಡುವುದು ಹೇಗೆ ಎಂಬುದನ್ನು ತಿಳಿಸಿಕೊಟ್ಟಿದ್ದಾರೆ.
ಇದರ ಜೊತೆಗೆ ಮನ್​ ಕಿ ಬಾತ್​ನಲ್ಲಿ ಜನರಿಗೆ ಒಂದು ದಿನದ ವಿಜ್ಞಾನಿಯಾಗಲು ಸಲಹೆ ನೀಡಿದ್ದಾರೆ. ಹತ್ತಿರದ ತಾರಾಲಯ ಹಾಗೂ ಪ್ರಯೋಗಶಾಲೆಗಳಿಗೆ ಸೈನ್ಸ್ ಡೇ ದಿನ ಭೇಟಿ ನೀಡುವ ಮೂಲಕ ಒಂದು ದಿನದ ವಿಜ್ಞಾನಿಯಾಗಿರಿ ಎಂದು ವಿದ್ಯಾರ್ಥಿಗಳಿಗೆ ಹೇಳಿದ್ದಾರೆ. ಅದು ಅಲ್ಲದೇ ಸದ್ಯ ಪರೀಕ್ಷೆ ಬರೆಯುತ್ತಿರುವ ವಿದ್ಯಾರ್ಥಿಗಳಿಗೆ ಪರೀಕ್ಷೆಗಳನ್ನು ಒತ್ತಡರಹಿತವಾಗಿ ಸಂತೋಷವಾಗಿ ಬರೆಯಿರಿ ಎಂದು ಸಲಹೆ ನೀಡಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us