ವಿಶ್ವದ ಅತಿ ಎತ್ತರದ ರೈಲ್ವೆ ಬ್ರಿಡ್ಜ್‌ ಮೇಲೆ ತಿರಂಗ ಧ್ವಜ ಹಾರಿಸಿದ ಪ್ರಧಾನಿ; ಮೋದಿ ಸಂಭ್ರಮದ ಕ್ಷಣಗಳು ಇಲ್ಲಿದೆ!

author-image
admin
Updated On
ವಿಶ್ವದ ಅತಿ ಎತ್ತರದ ರೈಲ್ವೆ ಬ್ರಿಡ್ಜ್‌ ಮೇಲೆ ತಿರಂಗ ಧ್ವಜ ಹಾರಿಸಿದ ಪ್ರಧಾನಿ; ಮೋದಿ ಸಂಭ್ರಮದ ಕ್ಷಣಗಳು ಇಲ್ಲಿದೆ!
Advertisment
  • ಅತಿ ಎತ್ತರದ ಚಿನಾಬ್ ರೈಲ್ವೇ ಬ್ರಿಡ್ಜ್ ಉದ್ಘಾಟಿಸಿದ ಪ್ರಧಾನಿ ಮೋದಿ
  • ಪ್ರಬಲ ಭೂಕಂಪ, ಬಿರುಗಾಳಿಯನ್ನು ತಡೆದುಕೊಳ್ಳುವ ಸಾಮರ್ಥ್ಯ
  • ಇಂದು ಭಾರತೀಯ ರೈಲ್ವೆ ನಿರ್ಮಾಣದಲ್ಲಿ ಹೊಸ ಯುಗದ ಆರಂಭ

ವಿಶ್ವದ ಅತಿ ಎತ್ತರದ ರೈಲ್ವೆ ಬ್ರಿಡ್ಜ್ ಅನ್ನು ಜಮ್ಮು ಕಾಶ್ಮೀರದಲ್ಲಿ ಪ್ರಧಾನಿ ನರೇಂದ್ರ ಮೋದಿ ಉದ್ಘಾಟಿಸಿದ್ದಾರೆ.

publive-image

ಜಮ್ಮು ಕಾಶ್ಮೀರದ ರಿಯಾಸಿ ಜಿಲ್ಲೆಯಲ್ಲಿರುವ ಚಿನಾಬ್ ರೈಲ್ವೇ ಬ್ರಿಡ್ಜ್ ಉದ್ಘಾಟಿಸಿದ ಪ್ರಧಾನಿ ಮೋದಿ ಅವರು ಭಾರತದ ತಿರಂಗ ಧ್ವಜ ಹಿಡಿದು ಸಂಭ್ರಮಾಚರಿಸಿದರು.

publive-image

ಭಾರತೀಯ ರೈಲ್ವೆ ಇಲಾಖೆ ಚಿನಾಬ್ ನದಿಯ ಮೇಲೆ ವಿಶ್ವದ ಅತಿ ಎತ್ತರದ ಸೇತುವೆ ನಿರ್ಮಾಣ ಮಾಡಿದೆ. ಬ್ರಿಡ್ಜ್ ಮೇಲೆ ಪ್ರಧಾನಿ ಮೋದಿ ಓಡಾಡಿದ ವಿಡಿಯೋವನ್ನು ರೈಲ್ವೆ ಇಲಾಖೆ ಹಂಚಿಕೊಂಡಿದೆ.


">June 6, 2025

ಜಮ್ಮು ಕಾಶ್ಮೀರವನ್ನು ಭಾರತದ ಉಳಿದ ಭಾಗದ ಜೊತೆಗೆ ಸಂಪರ್ಕ ಕಲ್ಪಿಸುವ ರೈಲ್ವೇ ಮಾರ್ಗ ಇದಾಗಿದೆ. ಈ ರೈಲ್ವೆ ಬ್ರಿಡ್ಜ್‌ಗೆ ಪ್ರಬಲ ಭೂಕಂಪ, ಬಿರುಗಾಳಿಯನ್ನು ತಡೆದುಕೊಳ್ಳುವ ಸಾಮರ್ಥ್ಯ ಇರೋದು ವಿಶೇಷವಾದದ್ದು. ಇದರ ಜೊತೆಗೆ ಇಂದು ಜಮ್ಮುವಿನ ಕಟ್ರಾದಿಂದ ಕಾಶ್ಮೀರ ಭಾಗಕ್ಕೆ ವಂದೇ ಭಾರತ್ ರೈಲ್ವೇಯನ್ನು ಪ್ರಧಾನಿ ಮೋದಿ ಉದ್ಘಾಟನೆ ಮಾಡಿದ್ದಾರೆ.

publive-image

ಚಿನಾಬ್ ನದಿಯಿಂದ 359 ಮೀಟರ್ ಎತ್ತರದಲ್ಲಿರುವ ವಿಶ್ವದ ಅತಿ ಎತ್ತರದ ರೈಲ್ವೆ ಕಮಾನು ಸೇತುವೆ ಇದಾಗಿದೆ. ಎಂಜಿನಿಯರಿಂಗ್ ಅದ್ಭುತ ಎಂದು ಕರೆಯಲ್ಪಡುವ 1,315 ಮೀಟರ್ ಉದ್ದದ ಉಕ್ಕಿನ ಕಮಾನು ಸೇತುವೆಯನ್ನು ಕಠಿಣ ಭೂಕಂಪ ಮತ್ತು ಬಿರುಗಾಳಿಯ ಪರಿಸ್ಥಿತಿಗಳನ್ನು ತಡೆದುಕೊಳ್ಳುವಂತೆ ವಿನ್ಯಾಸಗೊಳಿಸಲಾಗಿದೆ. ಇದು ಭಾರತೀಯ ರೈಲ್ವೆ ನಿರ್ಮಾಣದಲ್ಲಿ ಹೊಸ ಯುಗದ ಆರಂಭದ ಸಂಕೇತವಾಗಿದೆ.

ಇದನ್ನೂ ಓದಿ: Chenab bridge: ವಿಶ್ವದ ಅತಿ ಎತ್ತರದ ರೈಲ್ವೆ ಕಮಾನು ಸೇತುವೆ ಇಂದು ಕಾಶ್ಮೀರದಲ್ಲಿ ಉದ್ಘಾಟನೆ..! 

ಭಾರತದ ಮೊದಲ ಕೇಬಲ್-ಸ್ಟೇ ರೈಲು ಸೇತುವೆಯಾದ ಇದು ದೇಶದ ಅತ್ಯಂತ ಭೌಗೋಳಿಕವಾಗಿ ಸವಾಲಿನ ಭೂಪ್ರದೇಶಗಳಲ್ಲಿ ಒಂದಕ್ಕೆ ಸೇವೆ ಸಲ್ಲಿಸಲು ನಿರ್ಮಿಸಲಾಗಿದೆ, ಇದು ಜಮ್ಮು ಕಾಶ್ಮೀರ ರೈಲು ಸಂಪರ್ಕವನ್ನು ಮತ್ತಷ್ಟು ಸುಧಾರಿಸುತ್ತದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment