newsfirstkannada.com

ರಾಮಲಲ್ಲಾ ಮೂರ್ತಿಗೆ ಮೊದಲ ಪೂಜೆ ನೆರವೇರಿಸಿದ ಪ್ರಧಾನಿ ಮೋದಿ; ಪ್ರಾಣ ಪ್ರತಿಷ್ಠಾಪನೆ ಹೇಗಿತ್ತು?

Share :

Published January 22, 2024 at 1:19pm

Update January 22, 2024 at 5:11pm

    ಭವ್ಯ ರಾಮಮಂದಿರದ ಗರ್ಭಗುಡಿಯಲ್ಲಿ ಪ್ರಾಣ ಪ್ರತಿಷ್ಠಾಪನೆ

    ಗರ್ಭಗುಡಿಯಲ್ಲಿ ಪ್ರಧಾನಿ ಮೋದಿ ದೀರ್ಘದಂಡ ನಮಸ್ಕಾರ

    ರಾಮಲಲ್ಲಾ ಮೂರ್ತಿಯ ಪಾದಕ್ಕೆ ನಮಸ್ಕರಿಸಿದ ಪ್ರಧಾನಿ ಮೋದಿ

ಅಯೋಧ್ಯೆ ರಾಮಮಂದಿರದಲ್ಲಿ ರಾಮಲಲ್ಲಾ ಮೂರ್ತಿಯ ಪ್ರಾಣ ಪ್ರತಿಷ್ಠಾಪನೆ ನೆರವೇರಿದ್ದು, ಕೋಟ್ಯಾನುಕೋಟಿ ಭಕ್ತರಿಗೆ ಬಾಲರಾಮನ ಅಮೋಘ ದರ್ಶನವಾಗಿದೆ. ಭವ್ಯ ರಾಮಮಂದಿರದ ಗರ್ಭಗುಡಿಯಲ್ಲಿ ಪ್ರಾಣ ಪ್ರತಿಷ್ಠಾಪನೆಯ ಬಳಿಕ ಪ್ರಧಾನಿ ಮೋದಿ ಮೊದಲ ಪೂಜೆ ನೆರವೇರಿಸಿದರು.

ರಾಮಲಲ್ಲಾ ಮೂರ್ತಿಯ ಪಾದಕ್ಕೆ ನಮಸ್ಕರಿಸಿದ ಪ್ರಧಾನಿ ಮೋದಿ ಭಗವಂತನಲ್ಲಿ ವಿಶೇಷ ಪ್ರಾರ್ಥನೆ ಮಾಡಿದರು.

ರಾಮಮಂದಿರದಲ್ಲಿ ರಾಮಲಲ್ಲಾ ಮೂರ್ತಿಯ ಪ್ರಾಣ ಪ್ರತಿಷ್ಠಾಪನೆ ಸಂಪ್ರದಾಯಬದ್ಧವಾಗಿ ನೆರವೇರಿದೆ. ಮಂತ್ರಗಳನ್ನು ಪಠಿಸುತ್ತಾ ವೇದಗಳನ್ನು ಸ್ತುತಿಸುತ್ತಾ ಮಧ್ಯಾಹ್ನ 12 ಗಂಟೆ 29ನೇ ನಿಮಿಷದ 8ನೇ ಸೆಕೆಂಡ್‌ಗೆ ಸರಿಯಾಗಿ ಪ್ರಾಣಪ್ರತಿಷ್ಠಾಪನೆ ಕಾರ್ಯ ಆರಂಭವಾಯಿತು. 84 ಸೆಕೆಂಡ್‌ಗಳ ಒಳಗಾಗಿ ರಾಮಲಲ್ಲಾ ಮೂರ್ತಿಗೆ ಜೀವಕಳೆ ಬರುವ ಅಂದ್ರೆ, ಪ್ರಾಣಪ್ರತಿಷ್ಠಾಪನೆ ಕಾರ್ಯ ನೆರವೇರಿಸಲಾಗಿದೆ.

ರಾಮಲಲ್ಲಾ ಮೂರ್ತಿಯ ಪ್ರಾಣ ಪ್ರತಿಷ್ಠಾಪನೆಯ ಹಿನ್ನೆಲೆಯಲ್ಲಿ ಗರ್ಭಗುಡಿಯಲ್ಲಿ ಮುಖ್ಯ ಅರ್ಚಕರು ಸೇರಿದಂತೆ ಪೇಜಾವರ ಶ್ರೀಗಳು, ಯುಪಿ ಸಿಎಂ ಯೋಗಿ ಆದಿತ್ಯನಾಥ್, ಆರ್‌ಎಸ್‌ಎಸ್‌ ಮುಖ್ಯಸ್ಥ ಮೋಹನ್ ಭಗವಾತ್ ಸೇರಿದಂತೆ ಕೆಲವೇ ಕೆಲವು ಮಂದಿ ಭಾಗಿಯಾಗಿದ್ದರು.

ರಾಮಮಂದಿರದ ಗರ್ಭಗುಡಿಯಲ್ಲಿ ಹಳೆಯ ರಾಮಲಲ್ಲಾ ಮೂರ್ತಿ ಹಾಗೂ ನೂತನವಾಗಿ ಕೆತ್ತನೆ ಮಾಡಿರುವ ರಾಮಲಲ್ಲಾ ಮೂರ್ತಿ ವಿರಾಜಮಾನವಾಗಿದೆ.

ಪೂಜೆಯ ಬಳಿಕ ಗರ್ಭಗುಡಿಯಲ್ಲಿ ಪ್ರಧಾನಿ ನರೇಂದ್ರ ಮೋದಿ ದೀರ್ಘದಂಡ ನಮಸ್ಕಾರ ಹಾಕಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ರಾಮಲಲ್ಲಾ ಮೂರ್ತಿಗೆ ಮೊದಲ ಪೂಜೆ ನೆರವೇರಿಸಿದ ಪ್ರಧಾನಿ ಮೋದಿ; ಪ್ರಾಣ ಪ್ರತಿಷ್ಠಾಪನೆ ಹೇಗಿತ್ತು?

https://newsfirstlive.com/wp-content/uploads/2024/01/Ramlala-PranaPratishatana.jpg

Load More