newsfirstkannada.com

VIDEO: ಅರಬ್ ರಾಷ್ಟ್ರದಲ್ಲಿ ‘ನಮೋ’ ಮೇನಿಯಾ; UAE ಅಧ್ಯಕ್ಷರ ಸ್ವಾಗತಕ್ಕೆ ಮನಸೋತ ಪ್ರಧಾನಿ ಮೋದಿ

Share :

Published February 13, 2024 at 6:22pm

Update February 13, 2024 at 6:24pm

    ಯುಎಇಯಲ್ಲಿ ಮೊದಲ ಹಿಂದೂ ಮಂದಿರ ಉದ್ಘಾಟನೆಗೆ ಕ್ಷಣಗಣನೆ

    65 ಸಾವಿರ ಅನಿವಾಸಿ ಭಾರತೀಯರ ಉದ್ದೇಶಿಸಿ ಮೋದಿ ಭಾಷಣ

    2 ದಿನಗಳ ಕಾಲ ಅಬುಧಾಬಿಗೆ ಭೇಟಿ ನೀಡಿರುವ ಪ್ರಧಾನಿ ಮೋದಿ

ದುಬೈ: ಯುನೈಟೆಡ್ ಅರಬ್ ಎಮಿರೇಟ್ಸ್‌ನಲ್ಲಿ ನಿರ್ಮಾಣವಾಗಿರೋ ಮೊದಲ ಹಿಂದೂ ದೇವಾಲಯದ ಉದ್ಘಾಟನೆಯ ಹಿನ್ನೆಲೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಅಬುಧಾಬಿಗೆ ತೆರಳಿದ್ದಾರೆ. ಯುನೈಟೆಡ್ ಅರಬ್ ಎಮಿರೇಟ್ಸ್ ಅಧ್ಯಕ್ಷ ಶೇಖ್ ಮೊಹಮ್ಮದ್ ಬಿನ್ ಜಾಯೆದ್ ಅಲ್ ನಹ್ಯಾನ್ ಮೋದಿ ಅವರಿಗೆ ಆತ್ಮೀಯವಾಗಿ ಸ್ವಾಗತ ಕೋರಿದ್ದು ಮಹತ್ವದ ಚರ್ಚೆ ನಡೆಸಿದ್ದಾರೆ.

UAE ಅಧ್ಯಕ್ಷರ ಆತ್ಮೀಯ ಸ್ವಾಗತಕ್ಕೆ ಮನಸೋತ ಪ್ರಧಾನಿ ಮೋದಿ ಅವರು ಕೆಲ ಕಾಲ ಮಹತ್ವದ ಮಾತುಕತೆ ನಡೆಸಿದರು. ಉಭಯ ರಾಷ್ಟ್ರದ ಮಧ್ಯೆ ವ್ಯಾಪಾರ, ವಾಣಿಜ್ಯಕ್ಕೆ ಸಂಬಂಧಿಸಿದಂತೆ ದ್ವಿಪಕ್ಷೀಯ ಮಾತುಕತೆ ನಡೆದಿದದ್ದು, ಮಹತ್ವದ ಒಪ್ಪಂದಗಳನ್ನು ಮಾಡಿಕೊಳ್ಳಲಾಗಿದೆ.

ಅಬುಧಾಬಿಯಲ್ಲಿ 27 ಎಕರೆ ಜಾಗ, 700 ಕೋಟಿ ರೂಪಾಯಿ ವೆಚ್ಚದಲ್ಲಿ ನಿರ್ಮಾಣವಾಗಿರೋ ಹಿಂದೂ ದೇವಾಲಯ ಉದ್ಘಾಟನೆಗೆ ರೆಡಿಯಾಗಿದೆ. ಇಂದು ಮತ್ತು ನಾಳೆ ಪ್ರಧಾನಿ ಮೋದಿ ಅವರು ದುಬೈನಲ್ಲಿ ವಾಸ್ತವ್ಯ ಹೂಡಿದ್ದ್ದಾರೆ. ಪ್ರಧಾನಿ ಮೋದಿ ಅವರನ್ನು ಅನಿವಾಸಿ ಭಾರತೀಯರು ಅದ್ಧೂರಿಯಾಗಿ ಸ್ವಾಗತಿಸಲು ಸಜ್ಜಾಗಿದ್ದಾರೆ. ಇಂದು ಅಬುಧಾಬಿಯಲ್ಲಿರೋ 65 ಸಾವಿರ ಅನಿವಾಸಿ ಭಾರತೀಯರ ಉದ್ದೇಶಿಸಿ ಪ್ರಧಾನಿ ಮೋದಿ ಭಾಷಣ ಮಾಡಲಿದ್ದಾರೆ. ಅಬುಧಾಬಿಯ ಜಯೇದಾ ಸ್ಪೋರ್ಟ್ಸ್ ಸಿಟಿ ಸ್ಟೇಡಿಯಂನಲ್ಲಿ ಪ್ರಧಾನಿ ಮೋದಿ ಭಾಷಣ ಮಾಡಲಿದ್ದಾರೆ. ಈ ಕಾರ್ಯಕ್ರಮಕ್ಕೆ ದುಬೈ ಸರ್ಕಾರ ಉಚಿತ ಸಾರಿಗೆ ವ್ಯವಸ್ಥೆಯನ್ನು ಮಾಡಿದೆ. 65 ಸಾವಿರ ಭಾರತೀಯರು ಮೋದಿ ಕಾರ್ಯಕ್ರಮದಲ್ಲಿ ಭಾಗಿಯಾಗಲು ನೊಂದಾಯಿಸಿಕೊಂಡಿದ್ದಾರೆ. ಅಬುಧಾಬಿಯಲ್ಲಿ 38 ಲಕ್ಷಕ್ಕೂ ಹೆಚ್ಚು ಭಾರತೀಯರು ನೆಲೆಸಿದ್ದಾರೆ.

ಹಿಂದೂ ದೇವಾಲಯದ ವಿಶೇಷತೆ ಏನು?

  • 27 ಎಕರೆ ಜಾಗ, 700 ಕೋಟಿ ರೂಪಾಯಿ ವೆಚ್ಚದ ದೇಗುಲ
  • ಹೊರಗೆ ರಾಜಸ್ಥಾನದ ಮರಳುಗಲ್ಲು, ಒಳಗೆ ಬಿಳಿ ಅಮೃತಶಿಲೆ
  • ಪ್ರಾಚೀನ ಹಿಂದೂ ಶಿಲ್ಪಶಾಸ್ತ್ರದ ಪ್ರಕಾರ ಕಟ್ಟಿರೋ ಮಂದಿರ
  • 7 ಗೋಪುರಗಳಿದ್ದು, UAEನ 7 ದೇಶ​ಗಳನ್ನು ಸೂಚಿಸುತ್ತದೆ
  • 2017ರಲ್ಲಿ ಭೂಮಿ ಪೂಜೆ ಮಾಡಿದ್ದ ಪ್ರಧಾನಿ ಮೋದಿ
  • ಕಳೆದ ಮೂರು ವರ್ಷಗಳಿಂದ ಕಂಬಗಳ ಕೆತ್ತನೆ ಕಾರ್ಯ
  • ರಾಜಸ್ಥಾನ, ಗುಜರಾತ್‌ 2,000 ಕಾರ್ಮಿಕರಿಂದ ನಿರ್ಮಾಣ
  • ಫೆಬ್ರವರಿ 14ರಂದು ಪ್ರಧಾನಿ ಮೋದಿ ಲೋಕಾರ್ಪಣೆ
  • ಧಾರ್ಮಿಕ ಪ್ರಕ್ರಿಯೆ ಜೊತೆಗೆ ಭೋಧನಾ ಶಾಲೆ, ಕ್ರೀಡಾಂಗಣ
  • ಸುಂದರ ಉದ್ಯಾನಗಳು, ಸಭಾಂಗಣ, ಮಳಿಗೆಯ ಸೌಲಭ್ಯ
  • ಹಿಂದೂ ಸಂಸ್ಕೃತಿ ಬಗ್ಗೆ ಅನ್ವೇಷಿಸಲು ಮುಕ್ತವಾದ ಅವಕಾಶ
  • ಬೋಚಸನ್ವಾಸಿ ಅಕ್ಷರ ಪುರುಷೋತ್ತಮ ಸ್ವಾಮಿನಾರಾಯಣ ಸಂಸ್ಥೆ

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

VIDEO: ಅರಬ್ ರಾಷ್ಟ್ರದಲ್ಲಿ ‘ನಮೋ’ ಮೇನಿಯಾ; UAE ಅಧ್ಯಕ್ಷರ ಸ್ವಾಗತಕ್ಕೆ ಮನಸೋತ ಪ್ರಧಾನಿ ಮೋದಿ

https://newsfirstlive.com/wp-content/uploads/2024/02/pm-modi-90.jpg

Load More