ಯೂಟ್ಯೂಬ್​ನಲ್ಲಿ ಮೋದಿಯೇ NO.1; ಹೊಸ ಮೈಲಿಗಲ್ಲು ಸೃಷ್ಟಿಸಿದ ಭಾರತದ ಪ್ರಧಾನಿ; ಏನದು?

author-image
Veena Gangani
Updated On
ಯೂಟ್ಯೂಬ್​ನಲ್ಲಿ ಮೋದಿಯೇ NO.1; ಹೊಸ ಮೈಲಿಗಲ್ಲು ಸೃಷ್ಟಿಸಿದ ಭಾರತದ ಪ್ರಧಾನಿ; ಏನದು?
Advertisment
  • ಟ್ವಿಟರ್, ಫೇಸ್‌ಬುಕ್, ವ್ಯಾಟ್ಸ್ಆ್ಯಪ್​ನಿಂದ ಮೋದಿ ಜನಸಾಮಾನ್ಯರಿಗೆ ಹತ್ತಿರ
  • 2007ರಲ್ಲಿ ಗುಜರಾತ್ ಮುಖ್ಯಮಂತ್ರಿ ಆಗಿದ್ದಾಗ ಯೂಟ್ಯೂಬ್ ಚಾನೆಲ್​ ಸ್ಥಾಪನೆ
  • ಗರಿಷ್ಠ ಸಬ್​ಸ್ಕ್ರೈಬರ್ಸ್​ನನ್ನು ಪಡೆದು ವಿಶ್ವದ ಮೊದಲ ನಾಯಕರಾದ ಪ್ರಧಾನಿ ಮೋದಿ

ಪ್ರಧಾನಮಂತ್ರಿ ನರೇಂದ್ರ ಮೋದಿಯವರ ವೈಯಕ್ತಿಕ ಯೂಟ್ಯೂಬ್ ಚಾನೆಲ್‌ನಲ್ಲಿ ಹೊಸ ಮೈಲಿಗಲ್ಲು ಸೃಷ್ಟಿಸಿದ್ದಾರೆ. ಹೌದು, ಪ್ರಧಾನಿ ಮೋದಿ ಅವರು ಅವರ ಅಧಿಕೃತ ಯೂಟ್ಯೂಬ್​​ ಚಾನೆಲ್​​ನಲ್ಲಿ ಬರೋಬ್ಬರಿ 2 ಕೋಟಿ ಸಬ್​ಸ್ಕ್ರೈಬರ್ಸ್ ಪಡೆದುಕೊಂಡು ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.

publive-image

ಪ್ರಧಾನಿ ಮೋದಿ ಅವರು ಟ್ವಿಟರ್, ಫೇಸ್‌ಬುಕ್, ವ್ಯಾಟ್ಸ್ಆ್ಯಪ್​ ಸೇರಿದಂತೆ ಹಲವು ಸಾಮಾಜಿಕ ಮಾಧ್ಯಮಗಳ ಮೂಲಕ ಜನಸಾಮಾನ್ಯರಿಗೆ ಹತ್ತಿರವಾಗಿದ್ದಾರೆ. ಮೋದಿ ಅವರ ಅಕೌಂಟ್​​​ಗಳಿಗೆ ಗರಿಷ್ಠ ಫಾಲೋವರ್ಸ್ ಕೂಡ ಇದ್ದಾರೆ. ಇದೀಗ ಪ್ರಧಾನಿ ನರೇಂದ್ರ ಮೋದಿ ಅವರು ತಮ್ಮ ಅಧಿಕೃತ ಯೂಟ್ಯೂಬ್ ಚಾನೆಲ್‌ನಲ್ಲಿ 20 ಮಿಲಿಯನ್ ಸಬ್​ಸ್ಕ್ರೈಬರ್ಸ್ ಗಳಿಸುವ ಮೂಲಕ ವಿಶ್ವದ ಮೊದಲ ನಾಯಕರಾಗಿದ್ದಾರೆ. ಇನ್ನು ನರೇಂದ್ರ ಮೋದಿ ಅವರ ಯೂಟ್ಯೂಬ್ ಚಾನೆಲ್​​ನಲ್ಲಿ ಹಲವಾರು ವಿಷಗಳನ್ನು ಪ್ರಸ್ತುತ ಪಡಿಸುತ್ತದೆ.

publive-imageಮೋದಿ ಚಾನೆಲ್‌ನಲ್ಲಿನ ವಿಡಿಯೋಗಳು 4.5 ಬಿಲಿಯನ್ ಅಂದರೆ 450 ಕೋಟಿ ವೀಕ್ಷಣೆಗಳನ್ನು ಪಡೆದುಕೊಂಡಿದೆ. ವಿಶ್ವದ ಪ್ರಮುಖ ನಾಯಕರ ಪೈಕಿ ಗರಿಷ್ಠ ಸಬ್​ಸ್ಕ್ರೈಬರ್ಸ್ ಪಡೆಯುವ ಮೂಲಕ ಜಾಗತಿಕ ಸಮಕಾಲೀನರ ಯೂಟ್ಯೂಬ್ ಚಾನೆಲ್‌ಗಳನ್ನೇ ಮೀರಿಸಿದೆ. ಪ್ರಧಾನ ಮಂತ್ರಿಯವರು 2007ರಲ್ಲಿ ಗುಜರಾತ್ ಮುಖ್ಯಮಂತ್ರಿಯಾಗಿದ್ದಾಗ ತಮ್ಮ ಯೂಟ್ಯೂಬ್ ಚಾನೆಲ್ ಅನ್ನು ಶುರು ಮಾಡಿದ್ದರು. ಸಾರ್ವಜನಿಕ ಸಂವಹನದಲ್ಲಿ ಸಾಮಾಜಿಕ ಮಾಧ್ಯಮದ ಸಾಮರ್ಥ್ಯವನ್ನು ಅರ್ಥಮಾಡಿಕೊಳ್ಳುವಲ್ಲಿ ಭಾರತೀಯ ರಾಜಕೀಯದಲ್ಲಿ ಪ್ರವರ್ತಕ ಎಂದು ಪರಿಗಣಿಸಲ್ಪಟ್ಟಿದ್ದಾರೆ.

publive-image

ಇನ್ನು, ಬ್ರೆಜಿಲ್‌ನ ಮಾಜಿ ಅಧ್ಯಕ್ಷ ಜೈರ್ ಬೋಲ್ಸನಾರೊ ಯೂಟ್ಯೂಬ್​ ಚಾನೆಲ್​ನಲ್ಲಿ ಸುಮಾರು 64 ಲಕ್ಷ ಸಬ್​ಸ್ಕ್ರೈಬರ್ಸ್ ಪಟ್ಟಿಯಲ್ಲಿ ಎರಡನೇ ಸ್ಥಾನದಲ್ಲಿದ್ದಾರೆ. ವಿಡಿಯೋಗಳ ವೀಕ್ಷಣೆ ಪ್ರಕಾರ ಉಕ್ರೇನ್​​ ಅಧ್ಯಕ್ಷ ವೊಲೊಡಿಮಿರ್ ಝೆಲೆನ್ಸ್ಕಿ ಅವರು 22.4 ಕೋಟಿಯಷ್ಟು ವೀವ್ಸ್​ ಪಡೆದುಕೊಂಡಿದೆ. ಹಾಗೇ ನೋಡಿದರೇ ಪ್ರಧಾನಿ ನರೇಂದ್ರ ಮೋದಿ ಅವರು ಎರಡನೇ ಸ್ಥಾನದಲ್ಲಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
Advertisment