newsfirstkannada.com

ಮಕರ ಸಂಕ್ರಾಂತಿ ಸಡಗರ.. ಪ್ರಧಾನಿ ಮೋದಿ ಸೆಲೆಬ್ರೇಟ್‌ ಮಾಡಿದ ವಿಶೇಷ ಪೋಟೋಗಳು​ ಇಲ್ಲಿವೆ

Share :

Published January 14, 2024 at 5:31pm

  ದಕ್ಷಿಣ ಭಾರತದ ಸಾಂಪ್ರದಾಯಿಕ ಉಡುಗೆಯಲ್ಲಿ ಕಾಣಿಸಿಕೊಂಡ ಮೋದಿ

  ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್​ ಆಯ್ತು ಪ್ರಧಾನಿ ಫೋಟೋಸ್​

  ಬಾಲಕಿ ಗಾಯನಕ್ಕೆ ಮೆಚ್ಚಿ ತಮ್ಮ ಶಾಲನ್ನ ಉಡುಗೊರೆಯಾಗಿ ಕೊಟ್ಟ ಮೋದಿ

ಕರ್ನಾಟಕ ಸೇರಿದಂತೆ ದೇಶಾದ್ಯಂತ ಮಕರ ಸಂಕ್ರಾಂತಿ ಹಬ್ಬದ ಸಂಭ್ರಮ ಜೋರಾಗಿದೆ. ಮಕರ ಸಂಕ್ರಾಂತಿ ಹಬ್ಬದ ಸಂದರ್ಭದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ದೇಶದ ಜನತೆಗೆ ಶುಭಾಶಯ ಕೋರಿದ್ದಾರೆ. ಇದರ ಜೊತೆಗೆ ಪ್ರಧಾನಿ ಮೋದಿ ಅವರು ತಮ್ಮ ನಿವಾಸದಲ್ಲಿ 6ಕ್ಕೂ ಹೆಚ್ಚು ಗೋವುಗಳಿಗೆ ಮೇವು ತಿನ್ನಿಸಿದ್ದಾರೆ. ಕೆಲ ಹೊತ್ತು ಗೋವುಗಳ ಜೊತೆ ಕಳೆದಿದ್ದಾರೆ. ಈ ಫೋಟೋಗಳನ್ನು ತಮ್ಮ ಟ್ವಿಟರ್​ ಖಾತೆಯಲ್ಲಿ ಶೇರ್​ ಮಾಡಿಕೊಂಡಿದ್ದಾರೆ.

ಪೊಂಗಲ್ ಪೂಜೆಯ ನಂತರ, ಪಿಎಂ ಮೋದಿ ಅವರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದ ಜನರನ್ನು ಉದ್ದೇಶಿಸಿ ಮಾತನಾಡಿ, ಎಲ್ಲರಿಗೂ ಪೊಂಗಲ್ ಹಬ್ಬದ ಶುಭಾಶಯಗಳನ್ನು ಕೋರಿದರು. ದೇಶವು ನಿನ್ನೆ ಲೋಹ್ರಿ ಹಬ್ಬವನ್ನು ಆಚರಿಸಿದೆ. ಕೆಲವರು ಇಂದು ಮಕರ ಸಂಕ್ರಾಂತಿಯನ್ನು ಆಚರಿಸುತ್ತಿದ್ದಾರೆ ಮತ್ತು ಕೆಲವರು ನಾಳೆ ಆಚರಿಸುತ್ತಾರೆ. ಈ ಹಬ್ಬಗಳಿಗಾಗಿ ನಾನು ದೇಶವಾಸಿಗಳಿಗೆ ನನ್ನ ಶುಭಾಶಯಗಳನ್ನು ಸಲ್ಲಿಸುತ್ತೇನೆ ಎಂದರು.

ಪ್ರತಿ ವರ್ಷದಂತೆ ಈ ವರ್ಷವು ಕೂಡ ಕೇಂದ್ರ ಸಚಿವ ಎಲ್.ಮುರುಗನ್ ಅವರು ಅಧಿಕೃತ ನಿವಾಸಕ್ಕೆ ಮೋದಿ ಅವರು ಬಂದಿದ್ದರು. ಅವರು ಆಯೋಜಿಸಲಾಗಿದ್ದ ಪೊಂಗಲ್ ಕಾರ್ಯಕ್ರಮಕ್ಕೆ ಪ್ರಧಾನಿ ಮೋದಿ ಭೇಟಿ ಕೊಟ್ಟು ಪೊಂಗಲ್ ಆಚರಣೆ ಮಾಡಿದ್ದಾರೆ. ಈ ವೇಳೆ ತೆಲಂಗಾಣ ರಾಜ್ಯಪಾಲ ತಮಿಳಿಸೈ ಸೌಂದರರಾಜನ್ ಕೂಡ ಉಪಸ್ಥಿತರಿದ್ದರು. ಪೊಂಗಲ್‌ನಲ್ಲಿ ಪಾಲ್ಗೊಳ್ಳಲು, ಪ್ರಧಾನಿ ಮೋದಿ ದಕ್ಷಿಣ ಭಾರತದ ಸಾಂಪ್ರದಾಯಿಕ ಉಡುಗೆಯಲ್ಲಿ ಕಾಣಿಸಿಕೊಂಡಿದ್ದಾರೆ.

ಪ್ರಧಾನಿ ಮೋದಿ ಅವರು ದೆಹಲಿಯಲ್ಲಿ ಪೊಂಗಲ್ ಆಚರಣೆಯಲ್ಲಿ ಭಾಗಿಯಾಗಿ ತಮಿಳರ ಸಾಂಪ್ರದಾಯಿಕ ಕಲೆಗಳಾದ ಕರಕಟ್ಟಂ, ಪರೈಯಾಟ್ಟಂ, ಸಿಲಂಬಟಂ ಸೇರಿದಂತೆ ವಿವಿಧ ಪ್ರದರ್ಶನಗಳನ್ನು ಕಣ್ತುಂಬಿಕೊಂಡಿದ್ದಾರೆ. ಈ ಕಾರ್ಯಕ್ರಮದಲ್ಲಿ ಬಾಲಕಿಯೊಬ್ಬಳು ಸತ್ಯಂ ಶಿವಂ ಸುಂದರಂ ಹಾಡನ್ನು ಹಾಡಿದರು.

ಆಕೆಯ ಗಾಯನದಿಂದ ಸಂತೋಷಗೊಂಡ ಪ್ರಧಾನಿ ಮೋದಿ ಆಕೆಯನ್ನು ತಾನಿದ್ದಲ್ಲಿ ಬಾಲಕಿಯನ್ನು ಕರೆಸಿಕೊಂಡು ಆಶೀರ್ವಾದ ಮಾಡಿದ್ದಾರೆ. ಈ ವೇಳೆ ಮೋದಿ ತಮ್ಮ ಶಾಲನ್ನು ಯುವ ಗಾಯಕಿಗೆ ವಿಶೇಷ ಉಡುಗೊರೆಯಾಗಿ ನೀಡಿದರು. ಸದ್ಯ ಮೋದಿ ಅವರು ಶೇರ್​ ಮಾಡಿಕೊಂಡ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್​ ಆಗುತ್ತಿವೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಮಕರ ಸಂಕ್ರಾಂತಿ ಸಡಗರ.. ಪ್ರಧಾನಿ ಮೋದಿ ಸೆಲೆಬ್ರೇಟ್‌ ಮಾಡಿದ ವಿಶೇಷ ಪೋಟೋಗಳು​ ಇಲ್ಲಿವೆ

https://newsfirstlive.com/wp-content/uploads/2024/01/pm-mod.jpg

Load More