newsfirstkannada.com

ಇಹಲೋಕ ತ್ಯಜಿಸಿದ ಜೈನಮುನಿ ಆಚಾರ್ಯ ವಿದ್ಯಾಸಾಗರ ಮಹಾರಾಜರು; ಪ್ರಧಾನಿ ಮೋದಿ ಸಂತಾಪ

Share :

Published February 18, 2024 at 2:23pm

    ಚಂದ್ರಗಿರಿ ಜೈನಮಂದಿರದಲ್ಲಿ ವಿಧಿವಶರಾದ ವಿದ್ಯಾಸಾಗರ ಮಹಾರಾಜರು

    ಬಡತನ ನಿವಾರಣೆ, ಆರೋಗ್ಯ, ಶಿಕ್ಷಣ, ಆಧ್ಯಾತ್ಮಿಕತೆ ಜಾಗೃತಿಯ ಹರಿಕಾರ

    ಸಲ್ಲೇಖನ ವ್ರತ ಸ್ವೀಕರಿಸಿದ್ದ ಆಚಾರ್ಯ ವಿದ್ಯಾಸಾಗರ ಮಹಾರಾಜರು

ನವದೆಹಲಿ: ಜೈನಮುನಿ ಶ್ರೀ ಆಚಾರ್ಯ ವಿದ್ಯಾಸಾಗರ ಮಹಾರಾಜರು ಇಹಲೋಕ ತ್ಯಜಿಸಿದ್ದಾರೆ. ಇಂದು ಬೆಳಗ್ಗೆ 2.35ರ ಸಮಯದಲ್ಲಿ ಆಚಾರ್ಯ ವಿದ್ಯಾಸಾಗರ ಮಹಾರಾಜರು ದೈವಾಧೀನರಾದರು ಎನ್ನಲಾಗಿದೆ. ಜೈನಮುನಿಯ ನಿಧನಕ್ಕೆ ಪ್ರಧಾನಿ ನರೇಂದ್ರ ಮೋದಿ ಸೇರಿದಂತೆ ದೇಶದ ನಾನಾ ಗಣ್ಯರು ಕಂಬನಿ ಮಿಡಿದಿದ್ದಾರೆ.

ಸಲ್ಲೇಖನ ವ್ರತ ಸ್ವೀಕರಿಸಿದ್ದ ಆಚಾರ್ಯ ವಿದ್ಯಾಸಾಗರ ಮಹಾರಾಜರು ಛತ್ತೀಸ್‌ಗಢದ ಡೊಂಗರಗಢದಲ್ಲಿರುವ ಚಂದ್ರಗಿರಿ ಜೈನಮಂದಿರದಲ್ಲಿ ನೆಲೆಸಿದ್ದರು. ಆಧ್ಯಾತ್ಮಿಕ ಶುದ್ಧೀಕರಣಕ್ಕಾಗಿ ಸಾವಿನ ಕೊನೇ ಕ್ಷಣದವರೆಗೆ ಉಪವಾಸ ಕೈಗೊಂಡಿದ್ದ ವಿದ್ಯಾಸಾಗರ ಮಹಾರಾಜರು ಅಪಾರ ಭಕ್ತರನ್ನು ಬಿಟ್ಟು ಅಗಲಿದ್ದಾರೆ. ಆಚಾರ್ಯ ವಿದ್ಯಾಸಾಗರ ಮಹಾರಾಜರಿಗೆ ಅಪಾರ ಭಕ್ತರು ಅನುಯಾಯಿಗಳಾಗಿದ್ದರು. ಜೈನಮುನಿಗಳ ಇಹಲೋಕ ತ್ಯಜಿಸಿದ ಸುದ್ದಿ ಭಕ್ತ ಸಮುದಾಯಕ್ಕೆ ಆಘಾತವನ್ನು ಉಂಟುಮಾಡಿದೆ.

ಪ್ರಧಾನಿ ನರೇಂದ್ರ ಮೋದಿ ಅವರು ಜೈನಮುನಿ ಆಚಾರ್ಯ ವಿದ್ಯಾಸಾಗರ ಅವರ ನಿಧನಕ್ಕೆ ಕಂಬನಿ ಮಿಡಿದಿದ್ದಾರೆ. ಅವರ ಆಶೀರ್ವಾದ ಪಡೆದ ಫೋಟೋವನ್ನು ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಡಿರುವ ಮೋದಿ ಅವರು 108ನೇ ವಿದ್ಯಾಸಾಗರ ಮಹರಾಜ್‌ ಅವರಿಗೆ ಅಪಾರ ಭಕ್ತರಿದ್ದಾರೆ. ಸಮಾಜಕ್ಕೆ ಆಚಾರ್ಯ ವಿದ್ಯಾಸಾಗರರು ನೀಡಿದ ಕೊಡುಗೆಯನ್ನು ಮುಂದಿನ ಪೀಳಿಗೆಯು ಸ್ಮರಿಸಿಕೊಳ್ಳಲಿದೆ. ಆಧ್ಯಾತ್ಮಿಕತೆಯ ಕುರಿತ ಜಾಗೃತಿ, ಬಡತನ ನಿವಾರಣೆ, ಆರೋಗ್ಯ, ಶಿಕ್ಷಣಕ್ಕೆ ಅವರ ನೀಡಿದ ಕೊಡುಗೆಗಳು ಅಪಾರ ಎಂದು ಬಣ್ಣಿಸಿದ್ದಾರೆ.

ಇದನ್ನೂ ಓದಿ: ಭೀಕರ ರಸ್ತೆ ಅಪಘಾತ.. ಶನಿಮಹಾತ್ಮ ದೇವಸ್ಥಾನಕ್ಕೆ ಹೋಗಿ ಬರ್ತಿದ್ದ ಗೃಹಿಣಿ ಸಾವು; ನಾಲ್ವರ ಸ್ಥಿತಿ ಗಂಭೀರ

ಕೆಲ ವರ್ಷಗಳ ಹಿಂದೆ ನಾನು ಕೂಡ ಡೊಂಗರಗಢದಲ್ಲಿರುವ ಚಂದ್ರಗಿರಿ ಜೈನಮಂದಿರಕ್ಕೆ ಭೇಟಿ ನೀಡಿದ್ದೆ. ಅವರ ಆಶೀರ್ವಾದ ಪಡೆದಿದ್ದನ್ನು ನಾನು ಎಂದಿಗೂ ಮರೆಯಲು ಸಾಧ್ಯವಿಲ್ಲ. ವಿದ್ಯಾಸಾಗರ ಮಹರಾಜ್‌ ಅವರೊಂದಿಗೆ ಕಳೆದ ಅಮೂಲ್ಯ ಕ್ಷಣ ಹಾಗೂ ಆಶೀರ್ವಾದ ಪಡೆದಿದ್ದೇ ನನ್ನ ಪುಣ್ಯ ಎಂದು ಪ್ರಧಾನಿ ಮೋದಿ ಸ್ಮರಿಸಿಕೊಂಡಿದ್ದಾರೆ. ನವದೆಹಲಿಯಲ್ಲಿ ನಡೆಯುತ್ತಿರುವ ಬಿಜೆಪಿ ರಾಷ್ಟ್ರೀಯ ಕಾರ್ಯಗಾರದಲ್ಲೂ ಜೈನಮುನಿ ಆಚಾರ್ಯ ವಿದ್ಯಾಸಾಗರ ಅವರ ನಿಧನಕ್ಕೆ ಒಂದು ನಿಮಿಷ ಮೌನಾಚರಣೆ ಮಾಡಲಾಗಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಇಹಲೋಕ ತ್ಯಜಿಸಿದ ಜೈನಮುನಿ ಆಚಾರ್ಯ ವಿದ್ಯಾಸಾಗರ ಮಹಾರಾಜರು; ಪ್ರಧಾನಿ ಮೋದಿ ಸಂತಾಪ

https://newsfirstlive.com/wp-content/uploads/2024/02/PM-modi-5.jpg

Load More