ನಾನು ಏಕಾಂಗಿಯಲ್ಲ, ನನ್ನದು ಒನ್​ ಪ್ಲಸ್​​ ಒನ್​ ಸಿದ್ಧಾಂತ -ಲೆಕ್ಸ್ ಫ್ರಿಡ್‌ಮನ್ ಜೊತೆ ಮೋದಿ ಯಾವೆಲ್ಲ ವಿಚಾರ ಮಾತಾಡಿದ್ರು?

author-image
Ganesh
Updated On
ನಾನು ಏಕಾಂಗಿಯಲ್ಲ, ನನ್ನದು ಒನ್​ ಪ್ಲಸ್​​ ಒನ್​ ಸಿದ್ಧಾಂತ -ಲೆಕ್ಸ್ ಫ್ರಿಡ್‌ಮನ್ ಜೊತೆ ಮೋದಿ ಯಾವೆಲ್ಲ ವಿಚಾರ ಮಾತಾಡಿದ್ರು?
Advertisment
  • ರಾಷ್ಟ್ರವೇ ಸರ್ವಸ್ವ, RSSಗಿಂತ ದೊಡ್ಡ ಸಂಘವಿಲ್ಲ
  • ಗೋಧ್ರಾ ದುರಂತದ ಬಗ್ಗೆ ಮೌನ ಮುರಿದ ಮೋದಿ
  • ಪಾಕ್​ ಉಗ್ರ ಮನಸ್ಥಿತಿ ಅಶಾಂತಿಗೆ ಕಾರಣ ಎಂದ ಮೋದಿ

ವಿವಿಧ ಕ್ಷೇತ್ರದ ಗಣ್ಯರ ಜೊತೆಗೆ ಪಾಡ್​ಕಾಸ್ಟ್​ ನಡೆಸುವ ಅಮೆರಿಕಾದ ಪಾಡ್‌ಕ್ಯಾಸ್ಟರ್ ಲೆಕ್ಸ್ ಫ್ರಿಡ್‌ಮನ್ ಪ್ರಧಾನಿ ಮೋದಿ ಜೊತೆಗೆ ಸಂದರ್ಶನ ನಡೆಸಿದ್ದಾರೆ. ಪ್ರಿಡ್​ಮನ್​​ ಜೊತೆ ಸತತ ಮೂರು ಗಂಟೆಗಳ ಕಾಲ ಪಾಡ್​ಕಾಸ್ಟ್​​ನಲ್ಲಿ ಮಾತನಾಡಿದ ಪ್ರಧಾನಿ ಮೋದಿ, ಬಾಲ್ಯದಿಂದ ಹಿಡಿದು ರಾಜಕಾರಣಿ ಆಗುವವರೆಗೂ ಎಲ್ಲ ಸಂಗತಿಗಳನ್ನ ಮನಬಿಚ್ಚಿ ಮಾತನಾಡಿದ್ದಾರೆ.

ಗೋಧ್ರಾ ದುರಂತದ ಬಗ್ಗೆ ಮೌನ ಮುರಿದ ಮೋದಿ

ಪಾಡ್​ಕಾಸ್ಟ್​​ನಲ್ಲಿ ತಮ್ಮ ಜೀವನ ಹಲವು ಕುತೂಹಲಕಾರಿ ಸಂಗತಿಗಳ ಬಗ್ಗೆ ಮಾತನಾಡಿರುವ ಪ್ರಧಾನಿ ಮೋದಿ, 2002ರ ವೇಳೆ ಗುಜರಾತ್​​ನಲ್ಲಿ ನಡೆದ ಗೋಧ್ರಾ ಹತ್ಯಾಕಾಂಡ ದುರಂತ ಬಗ್ಗೆ ಮೊದಲ ಬಾರಿ ಮೌನ ಮುರಿದ್ರು.. ಗೋಧ್ರಾ ಘಟನೆ ನಿಜಕ್ಕೂ ಯಾರೂ ಊಹಿಸಲಾಗದ ದುರಂತ. ಮಹಿಳೆಯರು, ಮಕ್ಕಳೆಂಬುದನ್ನು ನೋಡದೇ 59 ಮಂದಿಯನ್ನ ರೈಲಿನಲ್ಲೇ ಸಜೀವ ದಹನ ಮಾಡಲಾಗಿತ್ತು.. ತಾವು ಅಧಿಕಾರಕ್ಕೆ ಬರುವುದಕ್ಕೂ ಮುನ್ನ ಗುಜರಾತ್​​ನಲ್ಲಿ 250ಕ್ಕೂ ಹೆಚ್ಚು ಗಲಭೆಗಳಿಗೆ ಸಾಕ್ಷಿಯಾಗಿದೆ. ಆ ಬಳಿಕ ಗುಜರಾತ್​​ನಲ್ಲಿ ದೊಡ್ಡ ದಂಗೆಗಳಾಗಿಲ್ಲ ಎಂದಿದ್ದಾರೆ.

ಇದನ್ನೂ ಓದಿ: ಭಾರತದ ಮೋಸ್ಟ್ ವಾಟೆಂಡ್​ ಉಗ್ರ ಖತಂ! ಹಫೀಜ್ ಸಯೀದ್​ಗೆ ಜನ್ನತ್ ದಾರಿ ತೋರಿಸಿದ್ರಾ ಅಪರಿಚಿತ ಬಂದೂಕುದಾರಿಗಳು?

publive-image

RSSಗಿಂತ ದೊಡ್ಡ ಸ್ವಯಂಸೇವ ಸಂಘ ವಿಶ್ವದಲ್ಲಿಲ್ಲ

ತಮ್ಮ ಮಾತೃಸಂಸ್ಥೆ ಆರ್‌ಎಸ್‌ಎಸ್‌ ಜೊತೆಗಿನ ಸಂಬಂಧ ಹಾಗೂ ಹಳೆಯ ನೆನಪುಗಳನ್ನು ಮೆಲುಕು ಹಾಕಿದ ಮೋದಿ, RSSಗಿಂತ ಸ್ವಯಂಸೇವಾ ಸಂಘ ಜಗತ್ತಿನಲ್ಲೇ ಇಲ್ಲ. ನಮ್ಮ ವೈದಿಕ ಸಂತರು ಮತ್ತು ಸ್ವಾಮಿ ವಿವೇಕಾನಂದರು ಏನನ್ನು ಕಲಿಸಿದರೋ ಅದೇ ರೀತಿ ಸಮಾಜ ಸೇವೆಯೇ ದೇವರ ಸೇವೆ ಎಂದು ಸಂಘ ಕಲಿಸುತ್ತದೆ ಅಂತ ಗುಣಗಾನ ಮಾಡಿದ್ದಾರೆ.

ಪಾಕಿಸ್ತಾನ ಭಯೋತ್ಪಾದನೆಯ ಕೇಂದ್ರಬಿಂದು!

ಪಾಕಿಸ್ತಾನ ವಿರುದ್ಧ ಟೀಕಾ ಪ್ರಹಾರ ನಡೆಸಿದ ನಮೋ, ಪಾಕಿಸ್ತಾನ ಟೆರರ್​​​ ಹಬ್​​​. ನಾವು ಶಾಂತಿ ಬಯಸಿದ್ದೆವು.. ಆದ್ರೆ, ಪಾಕಿಸ್ತಾನದ ಉಗ್ರ ಮನಸ್ಥಿತಿಯಿಂದ ಅಶಾಂತಿಗೆ ಕಾರಣ. ಪಾಕಿಸ್ತಾನ ಶಾಂತಿ ಮಾತುಕತೆಗೆ ದ್ರೋಹ ಬಗೆದಿದೆ ಎಂದು ಮೋದಿ ಹೇಳಿದ್ದಾರೆ.

ನಾನು ಏಕಾಂಗಿಯಲ್ಲ.. ಮೋದಿ ಒನ್​ ಪ್ಲಸ್​​ ಒನ್​ ಸಿದ್ಧಾಂತ!

ಒಂಟಿತನದ ಪ್ರಶ್ನೆಗೆ ಉತ್ತರಿಸಿರುವ ಪ್ರಧಾನಿ ಮೋದಿ, ನಾನು ಎಂದಿಗೂ ಒಂಟಿತನ ಅನುಭವಿಸುವುದಿಲ್ಲ, ನಾನು ಒನ್​ ಪ್ಲಸ್​ ಒನ್​ ಸಿದ್ಧಾಂತವ್ನ ನಂಬುತ್ತೇನೆ. ಒಂದು ಮೋದಿ ಮತ್ತು ಇನ್ನೊಂದು ದೈವಿಕ. ದೇವರು ಯಾವಾಗಲು ನನ್ನೊಂದಿಗಿರುವುದರಿಂದ ನಾನು ಎಂದಿಗೂ ಒಂಟಿಯಲ್ಲ ಅಂತ ಪ್ರಧಾನಿ ಮೋದಿ ಉತ್ತರಿಸಿದ್ದಾರೆ.

ಇದನ್ನೂ ಓದಿ: ಆಧಾರ್​ ಕಾರ್ಡ್​ ಅಡ್ರೆಸ್​ ಚೇಂಜ್​ ಮಾಡೋದು ಈಗ ಮತ್ತಷ್ಟು ಸುಲಭ; ಈ ಸ್ಟೆಪ್ಸ್​ ಫಾಲೋ ಮಾಡಿ

ನಾನು ಎಂದಿಗೂ ಒಂಟಿತನ ಅನುಭವಿಸುವುದಿಲ್ಲ.. ನಾನು 1+1 ಸಿದ್ಧಾಂತವನ್ನು ನಂಬುತ್ತೇನೆ. ಯಾರಾದ್ರೂ 1+1 ಏನು ಅಂತ ಕೇಳಿದ್ರೆ, ಮೊದಲ 1 ಏನಿದು ಅದು ಮೋದಿ, ಇನ್ನೊಂದು ಈಶ್ವರ, ಹೀಗಾಗಿ ನಾನು ಯಾವತ್ತು ಒಂಟಿಯಲ್ಲ. ಒಂದು ಮೋದಿ, ಮತ್ತು ಇನ್ನೊಂದು ದೈವಿಕ. ನಾನು ಎಂದಿಗೂ ನಿಜವಾಗಿಯೂ ಒಂಟಿಯಲ್ಲ ಏಕೆಂದರೆ ದೇವರು ಯಾವಾಗಲೂ ನನ್ನೊಂದಿಗಿರುತ್ತಾನೆ. ನನಗೆ, 'ಜನ ಸೇವಾ ಹಾಯ್ ಪ್ರಭು ಸೇವಾ'. ನನಗೆ ದೈವಿಕ ಮತ್ತು 140 ಕೋಟಿ ಭಾರತೀಯರ ಬೆಂಬಲವಿದೆ.." ಪ್ರಧಾನಿ ಮೋದಿ

ಲೆಕ್ಸ್​​ ಫ್ರಿಡ್​ಮನ್​ ಅವರ ಜೊತೆಗಿನ ಮೂರು ಗಂಟೆಗಳ ಪಾಡ್​​ಕಾಸ್ಟ್​​ನಲ್ಲಿ ಪ್ರಧಾನಿ ಮೋದಿ, ಮನಬಿಚ್ಚಿ ಮಾತನಾಡಿದ್ದಾರೆ. ಹಾಗೇ ಜಾಗತಿಕ, ರಾಜತಾಂತ್ರಿಕ ವಿಷಯಗಳ ಬಗ್ಗೆ ತಮ್ಮ ಅಭಿಪ್ರಾಯವನ್ನ ಹಂಚಿಕೊಂಡಿದ್ದಾರೆ.

ಇದನ್ನೂ ಓದಿ: ‘ನನ್ನ ಬೇರುಗಳಿರುವುದು ಕೋಲಾರದ ಮಣ್ಣಿನಲ್ಲಿ’.. ಈ ಮಣ್ಣಿನ ಋಣ ತೀರಿಸುತ್ತಿದ್ದೇನೆ ಎಂದ ಕೆ.ವಿ.ಪ್ರಭಾಕರ್

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment