/newsfirstlive-kannada/media/post_attachments/wp-content/uploads/2025/03/Modi-StudioGhibli.jpg)
ಈಗ ಎಲ್ಲಿ ನೋಡಿದ್ರೂ ಘಿಬ್ಲಿ. ಘಿಬ್ಲಿ ಅನ್ನೋ ಈ ಫೋಟೋ ಫ್ರೇಮ್ ಸದ್ಯ ಹೊಸ ಟ್ರೆಂಡ್ ಸೃಷ್ಟಿಸಿದೆ. ಪ್ರಧಾನಿ ಮೋದಿ ಅವರಿಂದ ಹಿಡಿದು ಭಾರತದ ಗಣ್ಯಾತಿಗಣ್ಯರು ಈ ಘಿಬ್ಲಿ ಮೊರೆ ಹೋಗಿದ್ದು, ತಮ್ಮ ಫೋಟೋಗಳ ಚಿತ್ತಾರ ಕಂಡು ಬೆರಗಾಗಿದ್ದಾರೆ.
ವೈರಲ್ ಘಿಬ್ಲಿ ಟ್ರೆಂಡ್‌ನಲ್ಲಿ ಅನೇಕರು ತಮ್ಮ ಫೋಟೋಗಳನ್ನು ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡು ಖುಷಿಪಟ್ಟಿದ್ದಾರೆ. ಈ ಘಿಬ್ಲಿ ಕೂಡ ಸುಂದರವಾದ ಫೋಟೋಗಳ ಮೂಲಕ ಬಹಳಷ್ಟು ಜನರ ಮನಸೂರೆಗೊಳ್ಳುವಂತೆ ಮಾಡಿದೆ.
ಏನಿದು ಘಿಬ್ಲಿ?
ಘಿಬ್ಲಿ ಅನ್ನೋದು ಜಪಾನ್ ದೇಶದ ಅನಿಮೇಷನ್ ಸ್ಟುಡಿಯೋ. ಇತ್ತೀಚೆಗೆ ಇದು ತನ್ನ ಕ್ರಿಯಾಶೀಲ ಫೋಟೋಗಳಿಂದ ಪ್ರೇಕ್ಷಕರನ್ನು ತನ್ನತ್ತ ಆಕರ್ಷಿಸುತ್ತಿದೆ. ಜಗತ್ತಿನಾದ್ಯಂತ ಗಣ್ಯಾತಿಗಣ್ಯರು ಈ ಘಿಬ್ಲಿಯಿಂದ ಸುಂದರ ಫೋಟೋಗಳನ್ನ ಕ್ರಿಯೇಟ್ ಮಾಡಿ ಹಂಚಿಕೊಳ್ಳುತ್ತಿದ್ದಾರೆ.
ಇದನ್ನೂ ಓದಿ: ಥೈಲ್ಯಾಂಡ್ ಕಟ್ಟಡದ ಮೇಲೆ ಏಕಾಂತಕ್ಕೆ ಭಂಗ; ಕಪಲ್ ರೊಮ್ಯಾನ್ಸ್ ಮಾಡುತ್ತಿದ್ದ ವಿಡಿಯೋ ವೈರಲ್!
ಘಿಬ್ಲಿ ಫೋಟೋಗಳನ್ನು OpenAI GPT-4o ಜಗತ್ತಿನಾದ್ಯಂತ ಪರಿಚಯ ಮಾಡಿದೆ. ಇದು ಎಷ್ಟರ ಮಟ್ಟಿಗೆ ಅಂದ್ರೆ ಇದನ್ನ ನೋಡಿದ ಪ್ರತಿಯೊಬ್ಬರು ತಾವು ಒಂದು ನಮ್ಮ ಫೋಟೋವನ್ನು ಘಿಬ್ಲಿಗೆ ಹಾಕಿ ನೋಡೋಣ ಅನ್ನುವಷ್ಟು ಅಂದವಾಗಿ ರೆಡಿ ಮಾಡಿಕೊಡುತ್ತಿದೆ.
ಘಿಬ್ಲಿಗೆ ಯಾವುದೇ ಫೋಟೋವನ್ನು ಸೂಕ್ತ ಮಾಹಿತಿಯೊಂದಿಗೆ ನೀವು ಕೊಟ್ಟರೆ ಅದು AI ಮುಖಾಂತರ ಸುಂದರ ಫೋಟೋವನ್ನು ಪರಿವರ್ತಿಸಿ ಕೊಡುತ್ತದೆ. ಸೋಷಿಯಲ್ ಮೀಡಿಯಾದಲ್ಲಿ ಇದಕ್ಕೆ ಸಂಬಂಧಪಟ್ಟ ಹಲವಾರು ಫೋಟೋಗಳು ವೈರಲ್ ಆಗಿದೆ.
ನೀವು ಘಿಬ್ಲಿ ಫೋಟೋ ಪಡೆಯೋದು ಹೇಗೆ?
OpenAI ಘಿಬ್ಲಿ ಶೈಲಿಯ ಈ ಫೋಟೋಗಳನ್ನು ಥಟ್ ಅಂತ ಕ್ರಿಯೇಟ್ ಮಾಡಿಕೊಡುತ್ತಿದೆ. ChatGPT ಬಳಕೆದಾರರು ಸದ್ಯ ಉಚಿತವಾಗಿ ಇದನ್ನು ಬಳಸಬಹುದಾಗಿದೆ.
* ನೀವು ಬಳಸುವ ChatGPT ಇತ್ತೀಚಿನ ಆವೃತ್ತಿ ಆಗಿರಬೇಕು
* ಮೊದಲು ನಿಮ್ಮ ಫೋಟೋ ಆಯ್ಕೆ ಮಾಡಬೇಕು
* ‘in Ghibli style’ ಎಂದು ಟೈಪ್ ಮಾಡಬೇಕು
* ಫೋಟೋದ ಬಟ್ಟೆ, ಹಿಂಬದಿ ಮತ್ತು ಇತರೆ ವಿವರಗಳನ್ನು ನಿರ್ದಿಷ್ಟಪಡಿಸಬಹುದು.
• ಫೋಟೋ ಮನವಿ ಸಲ್ಲಿಸಿದ ಕೂಡಲೇ AI ನಿಮ್ಮ ಫೋಟೋವನ್ನು ಚಿತ್ರಿಸಿ ಕೊಡುತ್ತದೆ.
AI-sa kuch trend ho raha hai, maine suna. Toh socha, what if Ghibli made cricket? pic.twitter.com/NdKptwOliM
— Sachin Tendulkar (@sachin_rt)
AI-sa kuch trend ho raha hai, maine suna. Toh socha, what if Ghibli made cricket? pic.twitter.com/NdKptwOliM
— Sachin Tendulkar (@sachin_rt) March 27, 2025
">March 27, 2025
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ