newsfirstkannada.com

‘ಈ ಬಾರಿ 400 ಸೀಟ್ ಗೆಲ್ಲೋದು ಪಕ್ಕಾ’- ಕಲಬುರಗಿಯಲ್ಲಿ ಕಾಂಗ್ರೆಸ್‌ ವಿರುದ್ಧ ಮೋದಿ ಘರ್ಜನೆ

Share :

Published March 16, 2024 at 3:00pm

Update March 16, 2024 at 3:07pm

  ಭಾರತ್ ಮಾತಾಕಿ ಜೈ ಎಂದು ಕನ್ನಡದಲ್ಲಿ ಭಾಷಣ ಆರಂಭಿಸಿದ ಮೋದಿ

  ಚುನಾವಣೆ ಘೋಷಣೆಗೂ ಮುಂಚೆ ಕರ್ನಾಟಕ ಹೇಳ್ತಿದೆ 400 ಸೀಟ್‌ ಗೆಲ್ಲುತ್ತೆ

  ಕಾಂಗ್ರೆಸ್ ಸರ್ಕಾರ ಲೂಟಿ ಹೊಡೆದಿದೆ ಎಂದು ವಾಗ್ದಾಳಿ ನಡೆಸಿದ ಮೋದಿ

ಕಲಬುರಗಿ: ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಕರ್ನಾಟಕದ ದಂಡಯಾತ್ರೆ ಆರಂಭಿಸಿದ್ದಾರೆ. ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರ ತವರು ಜಿಲ್ಲೆಗೆ ಆಗಮಿಸಿದ ನರೇಂದ್ರ ಮೋದಿ ಕಾಂಗ್ರೆಸ್ ವಿರುದ್ಧ ತೀವ್ರ ಟೀಕಾಪ್ರಹಾರ ನಡೆಸಿದ್ದಾರೆ.

ಕಲಬುರಗಿಯಲ್ಲಿ ನಡೆದ ಬೃಹತ್ ಸಮಾವೇಶದಲ್ಲಿ ಪ್ರಧಾನಿ ನರೇಂದ್ರ ಮೋದಿ ಭಾಷಣ ಮಾಡಿದರು. ಭಾರತ್ ಮಾತಾಕಿ ಜೈ ಎಂದು ಕನ್ನಡದಲ್ಲಿ ಭಾಷಣ ಪ್ರಾರಂಭಿಸಿದರು. ಜಗದ್ಗುರು ಬಸವೇಶ್ವರ ಅವರ ನಾಡು ಎಂದ ಪ್ರಧಾನಿ ಮೋದಿ ಅವರು ಲೋಕಸಭಾ ಚುನಾವಣೆ ಘೋಷಣೆ ಆಗಲು ಬಾಕಿ ಇದೆ. ಆಗಲೇ ಕರ್ನಾಟಕ ಹೇಳ್ತಿದೆ, ಅಬ್‌ ಕೀ ಬಾರ್ ಚಾರಸೋ ಪಾರ್ ಅಂತ. ರಾಜ್ಯದ ಜನ ತೀರ್ಮಾನ ಮಾಡಿದ್ದಾರೆ 400 ಸೀಟ್ ಗೆಲ್ಲಲು ಎಂದರು.

ಜನ ಬಿಜೆಪಿಗೆ ಬಹಳ ಭರವಸೆಯಿಂದ ನೋಡ್ತಿದ್ದಾರೆ. ವಿಕಸಿತ ಭಾರತ ನಿರ್ಮಾಣ ದೃಷ್ಟಿಯಿಂದ ಜನ ನೋಡ್ತಿದ್ದಾರೆ. ನಾನು ವಿಶ್ವಾಸದಿಂದ ಹೇಳ್ತಿದ್ದೇನೆ, ದೇಶ ತನ್ನ ಸಂಕಲ್ಪ ಪೂರ್ಣ ಮಾಡಲು ತೀರ್ಮಾನ ಮಾಡಿದೆ. ಕಾಂಗ್ರೆಸ್ ಪರಿವಾರವಾದದಿಂದ ಜನ ಬೇಸತ್ತು ಹೋಗಿದ್ದಾರೆ. ಕಾಂಗ್ರೆಸ್ ಸರ್ಕಾರ ಲೂಟಿ ಮಾಡಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಕಿಡಿಕಾರಿದ್ದಾರೆ.

ಕಲಬುರಗಿಯ ಎನ್.ವಿ ಕಾಲೇಜು ಮೈದಾನದಲ್ಲಿ ಬಿಜೆಪಿ ಪ್ರಚಾರ ಸಮಾವೇಶ ಆಯೋಜಿಸಲಾಗಿದೆ. ಪ್ರಧಾನಿ ಮೋದಿ ವೇದಿಕೆಗೆ ಆಗಮಿಸುತ್ತಿದ್ದಂತೆ ಮೋದಿ, ಮೋದಿ ಎಂದು ಜಯಘೋಷ ಹಾಕಿದ್ದಾರೆ. ಬಿಜೆಪಿ ಸಮಾವೇಶಕ್ಕೆ ಲಕ್ಷಾಂತರ ಜನ ಆಗಮಿಸಿದ್ದಾರೆ.

ಪ್ರಧಾನಿ ಮೋದಿ ಅವರಿಗೆ ಬಿಜೆಪಿ ಮಹಿಳಾ ಘಟಕ‌ದಿಂದ ಬಸವಣ್ಣನವರ ಫೋಟೋ ನೀಡಿ ಸನ್ಮಾನಿಸಲಾಗಿದೆ. ಬಿಜೆಪಿ ಬೃಹತ್ ಸಮಾವೇಶಕ್ಕೂ ಮುನ್ನ ಕಲಬುರಗಿಯಲ್ಲಿ ಮೋದಿ ಅವರು ಮಿನಿ ರೋಡ್ ಶೋ ನಡೆಸಿದರು. ಆರ್ಚಿಡ್ ಮಾಲ್‌ನಿಂದ ಎನ್‌ವಿ ಕಾಲೇಜ್ ಮೈದಾನದವರೆಗೆ ರೋಡ್ ಶೋ ನಡೆದಿದ್ದು, ಮೋದಿ ಮೋದಿ ಎಂದು ಕಾರ್ಯಕರ್ತರು ಘೋಷಣೆ ಕೂಗಿದರು. ಕಾರಿನಲ್ಲಿದ್ದ ಪ್ರಧಾನಿ ನರೇಂದ್ರ ಮೋದಿ ಅವರು ಜನರತ್ತ ಕೈ ಬೀಸಿ ಕರೆದರು.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

‘ಈ ಬಾರಿ 400 ಸೀಟ್ ಗೆಲ್ಲೋದು ಪಕ್ಕಾ’- ಕಲಬುರಗಿಯಲ್ಲಿ ಕಾಂಗ್ರೆಸ್‌ ವಿರುದ್ಧ ಮೋದಿ ಘರ್ಜನೆ

https://newsfirstlive.com/wp-content/uploads/2024/03/Modi-Kalburgi.jpg

Load More