/newsfirstlive-kannada/media/post_attachments/wp-content/uploads/2023/06/Rishi-Sunak-Pen.jpg)
ಬ್ರಿಟನ್ನಲ್ಲಿ ನಡೆದ ಚುನಾವಣೆ ಕುರಿತ ಎಕ್ಸಿಟ್ ಪೋಲ್ ಫಲಿತಾಂಶದಲ್ಲಿ ಕನ್ಸರ್ವೇಟಿವ್ ಪಕ್ಷವು (Conservative Party) ಹೀನಾಯ ಸೋಲನ್ನು ಎದುರಿಸುತ್ತಿದೆ ಎಂದು ಹೇಳಿದೆ. ಈ ಮಧ್ಯೆ ಪ್ರಧಾನಿ ರಿಷಿ ಸುನಕ್ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ ಎಂಬ ವರದಿಗಳು ಬಂದಿವೆ. ಎಕ್ಸಿಟ್ ಪೋಲ್ ಫಲಿತಾಂಶಗಳು ಸತ್ಯವಾದರೆ ಬ್ರಿಟನ್ನಲ್ಲಿ ಈ ಬಾರಿ ಲೇಬರ್ ಪಾರ್ಟಿ (Labour Party) ಅಧಿಕಾರಕ್ಕೆ ಬರಲಿದೆ.
ಆ ಮೂಲಕ ಇಂಗ್ಲೆಂಡ್ನ ನೂತನ ಪ್ರಧಾನಿಯಾಗಿ ಕೀರ್ ಸ್ಟಾರ್ಮರ್ (Keir Starmer) ಅಧಿಕಾರ ಸ್ವೀಕಾರ ಮಾಡಲಿದ್ದಾರೆ. ವಾಸ್ತವವಾಗಿ, ಯುಕೆಯ ಇಂಗ್ಲೆಂಡ್, ವೇಲ್ಸ್, ಸ್ಕಾಟ್ಲೆಂಡ್ ಮತ್ತು ನಾರ್ತ್ ಐರ್ಲೆಂಡ್ಗೆ ಸಾರ್ವತ್ರಿಕ ಚುನಾವಣೆಗಳು ನಡೆಯುತ್ತವೆ. ಬ್ರಿಟನ್‌ನಾದ್ಯಂತ ಒಟ್ಟು 650 ಕ್ಷೇತ್ರಗಳಿವೆ. ಇವುಗಳಲ್ಲಿ 533 ಸ್ಥಾನಗಳು ಇಂಗ್ಲೆಂಡ್‌ನಲ್ಲಿವೆ, 40 ಸ್ಥಾನಗಳು ವೇಲ್ಸ್‌ನಲ್ಲಿವೆ, 59 ಸೀಟುಗಳು ಸ್ಕಾಟ್ಲೆಂಡ್‌ನಲ್ಲಿ ಮತ್ತು 18 ಸೀಟುಗಳು ಉತ್ತರ ಐರ್ಲೆಂಡ್‌ನಲ್ಲಿವೆ.
ಇದನ್ನೂ ಓದಿ:ಹಾಸನದಲ್ಲಿ ಮತ್ತೊಂದು ಬಾಲಕಿ ಸಾವು.. ಒಂದೇ ವಾರದಲ್ಲಿ ಶಂಕಿತ ಡೆಂಘೀಗೆ ನಾಲ್ವರು ಬಾಲಕಿಯರು ಬಲಿ
ಜೂನ್ 4ರಂದು ಬೆಳಗ್ಗೆ 7 ರಿಂದ ರಾತ್ರಿ 10ರವರೆಗೆ ಮತದಾನ ನಡೆದಿದ್ದು, ಬಳಿಕ ಮತ ಎಣಿಕೆ ನಡೆಯುತ್ತಿದ್ದು, ಫಲಿತಾಂಶವೂ ಬರಲಾರಂಭಿಸಿದೆ. ಈ ಮಧ್ಯೆ ಸುನಕ್ ಪ್ರಧಾನಿ ಸ್ಥಾನಕ್ಕೆ ರಾಜೀನಾಮೆ ನೀಡಬಹುದು ಎಂಬ ಸುದ್ದಿ ಇದೆ.
ಸಮೀಕ್ಷೆಗಳು ಏನ್ ಹೇಳಿವೆ..?
ಯುಕೆಯಲ್ಲಿ ಬಹುಮತಕ್ಕೆ 326 ಸ್ಥಾನಗಳು ಬೇಕಾಗುತ್ತವೆ. ಕೀರ್ ಸ್ಟಾರ್ಮರ್ ನೇತೃತ್ವದ ಲೇಬರ್ ಪಕ್ಷವು 410 ಸ್ಥಾನಗಳನ್ನು ಗೆಲ್ಲಬಹುದು. ಆದರೆ ರಿಷಿ ಸುನಕ್ ನೇತೃತ್ವದ ಪಕ್ಷವು ಕೇವಲ 131 ಸ್ಥಾನಗಳನ್ನು ಪಡೆಯುವ ನಿರೀಕ್ಷೆಯಿದೆ. 650 ಸಂಸದರ ಬ್ರಿಟನ್‌ನ ಹೌಸ್‌ನಲ್ಲಿ ಸರ್ಕಾರ ರಚಿಸಲು 326 ಸ್ಥಾನಗಳ ಅಗತ್ಯವಿದೆ. ಸೋಲಿನ ಸುಳಿವು ಸಿಕ್ಕ ತಕ್ಷಣ ರಿಷಿ ಸುನಕ್ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡುವುದಾಗಿ ಘೋಷಿಸಿದ್ದಾರೆ ಎನ್ನಲಾಗಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ