/newsfirstlive-kannada/media/post_attachments/wp-content/uploads/2025/01/Princess-Beatrice-gives-birth-to-baby-girl.jpg)
ಬ್ರಿಟಿಷ್ ರಾಯಲ್ ಕುಟುಂಬಕ್ಕೀಗ ಮತ್ತೊಬ್ಬ ಸದಸ್ಯೆ ಸೇರ್ಪಡೆಯಾಗಿದ್ದಾರೆ. ರಾಜಕುಮಾರಿ ಬೀಟ್ರಿಸ್ ಹಾಗೂ ಅವರಪತಿ ಎಡೊರ್ಡೊ ಮಾಪೆಲ್ಲಿ ಮೊಜ್ಜಿ ತಮ್ಮ ಎರಡನೇ ಮಗುವನ್ನು ತುಂಬಾ ಹರುಷದಿಂದ ಬರಮಾಡಿಕೊಂಡಿದ್ದು. ವಿಷಯವನ್ನು ಈಗ ಬಹಿರಂಗಗೊಳಿಸಿದ್ದಾರೆ. ಮೂಲಗಳ ಪ್ರಕಾರ ಪುಟಾಣಿ ಎಲಿಜೆಬೆತ್ ರೋ್ ಮಾಪೆಲ್ಲಿ ಮೋಜ್ಜಿ ಜನವರಿ 22,2025ರಂದು ಮಧ್ಯಾಹ್ನ 12:57ಕ್ಕೆ ಲಂಡನ್​ನ ಚೆಲ್ಸಿಯಾ ಆ್ಯಂಡ್ ವೆಸ್ಟ್​ಮಿನಿಸ್ಟರ್ ಆಸ್ಪತ್ರೆಯಲ್ಲಿ ಜನಿಸಿದ್ದಾರೆ ಎಂದು ತಿಳಿದು ಬಂದಿದೆ.
ಬಕ್ಕಿಂಗ್ ಹ್ಯಾಮ್ ಪ್ಯಾಲೆಸ್​ ತಾಯಿ ಮತ್ತು ಮಗು ಇಬ್ಬರೂ ತುಂಬಾ ಆರೋಗ್ಯದಿಂದ ಇದ್ದಾರೆ ಎಂದು ತಿಳಿಸಿದೆ. ವಿದೇಶಿ ಮಾಧ್ಯಮಗಳು ವರದಿ ಪ್ರಕಾರ ರಾಜಕುಮಾರಿ ಬೀಟ್ರಿಸ್​​ ಇದಕ್ಕಿಂತ ಮೊದಲೇ ಮಗುವಿಗೆ ಜನ್ಮ ನೀಡುವ ನೀರಿಕ್ಷೆ ಇತ್ತು. ಆದ್ರೆ ಡಿಸೆಂಬರ್​ನಲ್ಲಿ ವೈದ್ಯರು ನೀಡಿದ ಸಲಹೆಯಂತೆ ಅವರಿಗೆ ದೀರ್ಘಪ್ರಯಾಣವನ್ನು ಮಾಡಬಾರದು ಎನ್ನಲಾಗಿತ್ತು. ಇದರಿಂದಾಗಿ ಅವರು ತಮ್ಮ ಹಾಲಿಡೇ ಪ್ಲ್ಯಾನ್​ನ್ನು ಬದಲಾಯಿಸಿದರು. ಹೀಗಾಗಿ ಎಲ್ಲರೂ ಕ್ರಿಸ್​ಮಸ್​ನ್ನು ಸಂದ್ರಂಗಗಾಮ್​ನಲ್ಲಿಯೇ ಆಚರಿಸಿದರು.
View this post on Instagram
ಅಥೇನಾಳ ಮೊದಲ ಫೋಟೋವನ್ನು ಈಗಾಗಲೇ ಬಹಿರಂಗಗೊಳಿಸಲಾಗಿದೆ. ಬ್ಲ್ಯಾಂಕೆಟ್​ನಲ್ಲಿ ಅವಳನ್ನು ಸುತ್ತಿ ಮುದ್ದು ಮುಖ ಅರ್ಧವಷ್ಟೇ ಕಾಣುವಂತೆ ಇರುವ ಫೋಟೋ ಈಗ ವೈರಲ್ ಆಗಿದೆ. ರಾಜಮನೆತನದ ಕುಟುಂಬ ಈ ವಿಷಯವನ್ನು ಆದಷ್ಟು ಖಾಸಗಿಯಾಗಿ ಇಡಲು ಇಷ್ಟಪಟ್ಟಿತ್ತು. ಆದ್ರೆ ಎಡೊರ್ಡೊ ತಮ್ಮ ಎಕ್ಸೈಟ್ಮೆಂಟ್​ನ್ನು ತಡೆಕೊಳ್ಳಲಾರದೆ ಮಗುವಿನ ಫೋಟೋವನ್ನು ಸೋಷಿಯಲ್ ಮೀಡಿಯಾದಲ್ಲಿ ಹರಿಬಿಟ್ಟಿದ್ದಾರೆ. ಅದು ಅಲ್ಲದೇ ಇವಳು ಪುಟ್ಟದಾಗಿ ಹಾಗೆ ಅಷ್ಟೇ ಪರ್ಫೆಕ್ಟ್ ಆಗಿ ಇದ್ದಾಳೆ. ನಾವು ಸಂಪೂರ್ಣವಾಗಿ ಇವಳೊಂದಿಗೆ ಬೆಸೆದುಕೊಂಡು ಬಿಟ್ಟಿದ್ದೇವೆ ಎಂದು ಹೇಳಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us