ಜನಿವಾರ ಪ್ರಕರಣದಲ್ಲಿ ನಾಲ್ವರ ತಲೆದಂಡ.. ಆದರೆ, ವಿದ್ಯಾರ್ಥಿ ಭವಿಷ್ಯ ಏನು..?

author-image
Ganesh
Updated On
ಎಷ್ಟೇ ಬೇಡಿಕೊಂಡರೂ ಪರೀಕ್ಷೆ ಬರೆಯಲು ಬಿಡಲಿಲ್ಲ -ಮಗನ ಭವಿಷ್ಯ ನೆನೆದು ತಾಯಿ ಕಂಗಾಲು
Advertisment
  • ಶಿವಮೊಗ್ಗದಲ್ಲಿ ಜನಿವಾರ ತೆಗೆಸಿದ್ದ ಸಿಬ್ಬಂದಿ ತಲೆದಂಡ!
  • ಬೀದರ್‌ನ ಸಾಯಿ ಸ್ಫೂರ್ತಿ ಕಾಲೇಜು ಸಿಬ್ಬಂದಿ ವಜಾ!
  • ಬ್ರಾಹ್ಮಣ ಸಮುದಾಯದ ಧಾರ್ಮಿಕ ಭಾವನೆಗೆ ದಕ್ಕೆ

ಸಿಇಟಿ ಎಕ್ಸಾಂ ವಿಚಾರದಲ್ಲಿ ಜನಿವಾರದ ಜೊತೆ ಜಗಳಕ್ಕೆ ಬಿದ್ದಂತೆ ಆಡಿದ ಸಿಬ್ಬಂದಿ, ಒಬ್ಬ ವಿದ್ಯಾರ್ಥಿಯ ವರ್ಷದ ಭವಿಷ್ಯಕ್ಕೆ ಕೊಳ್ಳಿ ಇಟ್ಟಿದ್ದಾರೆ. ರಾಜ್ಯಾದ್ಯಂತ ತೀವ್ರ ಟೀಕೆ ಆಗ್ತಿದ್ದಂತೆ ಪ್ರಿನ್ಸಿಪಾಲ್​ ಸೇರಿ ಸಿಬ್ಬಂದಿಗಳ ತಲೆದಂಡವಾಗಿದೆ.

ಶಿವಮೊಗ್ಗದಲ್ಲಿ ಜನಿವಾರ ತೆಗೆಸಿದ್ದ ಸಿಬ್ಬಂದಿ ತಲೆದಂಡ

ಒಬ್ಬರಿಗೆ ಧಾರ್ಮಿಕ ಅಚಲ ನಂಬಿಕೆ.. ಜೊತೆಗೆ ಭವಿಷ್ಯದ ಬದುಕಿನ ಚಿಂತೆ.. ಈ ಎರಡನ್ನ ಬದುವಿಗೆ ತಳ್ಳಿದ್ದು ಸಿಬ್ಬಂದಿಯ ಯಡವಟ್ಟು.. ಈ ಯಡವಟ್ಟು ವರ್ಷಪೂರ್ತಿ ಹಗಲಿರುಳು ಓದಿದ ವಿದ್ಯಾರ್ಥಿ ಕನಸುಗಳು ನುಚ್ಚುನೂರಾಗಿಸಿದೆ.. ಧಾರ್ಮಿಕ ಭಾವನೆಗಳ ಜೊತೆ ಆಟ ಆಡಿದ ಶಿವಮೊಗ್ಗ ಮತ್ತು ಬೀದರ್​​​ ಕಾಲೇಜಿನ ಸಿಬ್ಬಂದಿಯ ತಲೆದಂಡ ಆಗಿದೆ.

ಇದನ್ನೂ ಓದಿ: IPL ಪಾಯಿಂಟ್​ ಟೇಬಲ್​ನಲ್ಲಿ ಭಾರೀ ಬದಲಾವಣೆ.. ಗುಜರಾತ್​ಗೆ ಗೆಲುವು, ಕುಸಿದ ಡೆಲ್ಲಿ

ಪ್ರಿನ್ಸಿಪಾಲ್​​​ ತಲೆದಂಡ

  • ಬೀದರ್‌ನ ಸಾಯಿ ಸ್ಫೂರ್ತಿ ಕಾಲೇಜು ಪ್ರಿನ್ಸಿಪಾಲ್, SDA ಸಿಬ್ಬಂದಿ ವಜಾ
  •  ಪ್ರಿನ್ಸಿಪಾಲ್ ಚಂದ್ರಶೇಖರ ಬಿರಾದಾರ, SDA ಸಂತೋಷ್ ಪವಾರ್ ಡಿಸ್ಮಿಸ್​
  •  ಇಬ್ಬರನ್ನು ಕೆಲಸದಿಂದ ವಜಾಗೊಳಿಸಿದ ಸಾಯಿದೀಪ್ ಎಜುಕೇಶನ್ ಟ್ರಸ್ಟ್
  •  ಜಿಲ್ಲಾಧಿಕಾರಿ ಮತ್ತು ಪಿಯು ಬೋರ್ಡ್‌ ಸೂಚನೆ ಬೆನ್ನಲ್ಲೇ ಟ್ರಸ್ಟ್​​ನಿಂದ ಕ್ರಮ
  •  ವಿದ್ಯಾರ್ಥಿಗೆ ಆದ ಅನ್ಯಾಯದ ಬಗ್ಗೆ ನ್ಯೂಸ್‌ಫಸ್ಟ್‌ ನಿರಂತರ ವರದಿಗೆ ಫಲ

ಇತ್ತ ಶಿವಮೊಗ್ಗದಲ್ಲೂ ಇಬ್ಬರು ಸಿಬ್ಬಂದಿ ಅಮಾನತಾಗಿದ್ದಾರೆ.. ಶಿವಮೊಗ್ಗದ ಆದಿಚುಂಚನಗಿರಿ ಕಾಲೇಜಿನಲ್ಲಿ ನಡೆದಿದ್ದ ಘಟನೆ ಸಂಬಂಧ ಜಿಲ್ಲಾಧಿಕಾರಿ ಗುರುದತ್ತ ಹೆಗಡೆ ಕ್ರಮ ಕೈಗೊಂಡಿದ್ದಾರೆ. ಬೀದರ್​ನಲ್ಲಿ ವಿದ್ಯಾರ್ಥಿಗಾದ ಅನ್ಯಾಯ ಖಂಡಿಸಿ ಗದಗ ಬ್ರಾಹ್ಮಣ ಸಂಘ ಖಂಡಿಸಿದೆ.. ಪ್ರತಿಭಟನೆ ಮಾಡಿ ರಾಜ್ಯ ಸರ್ಕಾರದ ವಿರುದ್ಧ ಆಕ್ರೋಶ ಹೊರ ಹಾಕಿದೆ.. ಯಾರ ಪ್ರೇರಣೆಯಿಂದ ಸಿಬ್ಬಂದಿ ಜನಿವಾರ ತೆಗೆದಿದ್ದಾರೆ ಅನ್ನೋದರ ತನಿಖೆ ಆಗಬೇಕು ಅಂತ ಒತ್ತಾಯಿಸಿದ್ದಾರೆ. ಒಟ್ಟಾರೆ, ಬ್ರಾಹ್ಮಣ ಸಮುದಾಯದ ಧಾರ್ಮಿಕ ಭಾವನೆಗೆ ದಕ್ಕೆಯಾಗಿದೆ. ಜನಿವಾರ ತೆಗೆಸಿದ ಸಿಬ್ಬಂದಿಯ ತಲೆದಂಡ ಆಗಿದೆ. ಆದ್ರೆ, ವಿದ್ಯಾರ್ಥಿಗಳ ಭವಿಷ್ಯ ಹೇಗೆ ಅನ್ನೋ ಪ್ರಶ್ನೆಗಳು ಎದ್ದಿವೆ.

ಇದನ್ನೂ ಓದಿ: ಬೆಂಗಳೂರಲ್ಲಿ ತಪ್ಪಿದ ಭಾರೀ ಅನಾಹುತ.. ನಿಂತಿದ್ದ ಇಂಡಿಗೋ ವಿಮಾನಕ್ಕೆ ಗುದ್ದಿದ ಟೆಂಪೋ ಟ್ರಾವೆಲರ್..!

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment