newsfirstkannada.com

ಪ್ರಿನ್ಸಿಪಾಲ್​ ಮೊಬೈಲ್​ ಎಗರಿಸಿದ ಖದೀಮರು; ಕೆಲವೇ ನಿಮಿಷದಲ್ಲಿ ಲಕ್ಷ, ಲಕ್ಷ ದೋಚಿ ಪರಾರಿ

Share :

Published January 12, 2024 at 2:59pm

    ಕಾಲೇಜ್​ಗೆ ತೆರಳುತ್ತಿದ್ದಾಗ ಪ್ರಿನ್ಸಿಪಾಲ್​​ರ ಮೊಬೈಲ್​ ಕದ್ದ ಖದೀಮರು

    ಮೊಬೈಲ್​ ಕಳ್ಳತನ ಮಾಡಿದ್ದಲ್ಲದೇ ಆ್ಯಪ್​ ಮೂಲಕ ಹಣ ವರ್ಗಾವಣೆ

    ಪ್ರಾಂಶುಪಾಲರಿಂದ ಕದ್ದ ಮೊಬೈಲ್​ ಎಷ್ಟು ಸಾವಿರ ರೂಪಾಯಿ ಗೊತ್ತಾ?

ಗದಗ: ಪ್ರಾಂಶುಪಾಲರ ಮೊಬೈಲ್ ಕಳ್ಳತನ ಮಾಡಿದ್ದಲ್ಲದೇ ದುಷ್ಕರ್ಮಿಗಳು ಅದೇ ಮೊಬೈಲ್​ನ ಆನ್​ಲೈನ್ ಆ್ಯಪ್ ಮೂಲಕ ₹1.40 ಲಕ್ಷ ದುಡ್ಡು ವರ್ಗಾವಣೆ ಮಾಡಿಕೊಂಡಿದ್ದಾರೆ. ಈ ಘಟನೆಯು ನರಗುಂದ ಪಟ್ಟಣದ ಬಸ್ ನಿಲ್ದಾಣದಲ್ಲಿ ನಡೆದಿದೆ.

ಪ್ರಾಂಶುಪಾಲರಾದ ಶ್ರೀಕಾಂತ ಕೃಷ್ಣಾಜಿ ಜೋಷಿ ಅವರು ಎಂದಿನಂತೆ ಕಾಲೇಜ್​​ಗೆ ತೆರಳುತ್ತಿದ್ದರು. ಈ ವೇಳೆ ನರಗುಂದ ಪಟ್ಟಣದ ಬಸ್ ನಿಲ್ದಾಣದಲ್ಲಿ ದುಷ್ಕರ್ಮಿಗಳು 20 ಸಾವಿರ ಮೌಲ್ಯದ ಮೊಬೈಲ್​ ಅನ್ನು ಪ್ರಾಂಶುಪಾಲರ ಜೇಬಿನಿಂದ ಕಳ್ಳತನ ಮಾಡಿದ್ದಾರೆ. ಬಳಿಕ ಮೊಬೈಲ್​​ನಲ್ಲಿದ್ದ ಎಸ್​​ಬಿಐ ಖಾತೆಯ ಯುಪಿಐ ಬಳಸಿಕೊಂಡು ಬರೋಬ್ಬರಿ 1 ಲಕ್ಷದ 40 ಸಾವಿರ ರೂಗಳನ್ನ ತಮ್ಮ ಅಕೌಂಟ್​ಗೆ ವರ್ಗಾವಣೆ ಮಾಡಿಕೊಂಡಿದ್ದಾರೆ.

ಮೊದಲು ₹75 ಸಾವಿರ, ₹50 ಸಾವಿರ ಹಾಗೂ ₹15 ಸಾವಿರ ಎಂಬಂತೆ ಒಟ್ಟು ಮೂರು ಹಂತದಲ್ಲಿ ಹಣ ವರ್ಗಾವಣೆ ಮಾಡಿಕೊಂಡಿದ್ದಾರೆ. ಪ್ರಾಂಶುಪಾಲರ ಎಸ್​ಬಿಐ ಖಾತೆಯಿಂದ ಈ ಹಣವನ್ನು ಖದೀಮರು ಅಕೌಂಟ್​ಗೆ ಹಾಕಿಕೊಂಡಿದ್ದಾರೆ. ಸದ್ಯ ಈ ಸಂಬಂಧ ಆರೋಪಿಗಳನ್ನ ಪತ್ತೆ ಹಚ್ಚಿ ಹಣ ವಾಪಸ್ ಕೊಡಿಸುವಂತೆ ನರಗುಂದ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಪ್ರಿನ್ಸಿಪಾಲ್​ ಮೊಬೈಲ್​ ಎಗರಿಸಿದ ಖದೀಮರು; ಕೆಲವೇ ನಿಮಿಷದಲ್ಲಿ ಲಕ್ಷ, ಲಕ್ಷ ದೋಚಿ ಪರಾರಿ

https://newsfirstlive.com/wp-content/uploads/2024/01/GDG_PRINCIPAL.jpg

Load More