/newsfirstlive-kannada/media/post_attachments/wp-content/uploads/2025/06/PRITHVI_SHA.jpg)
ಈತನ ಅದೃಷ್ಟ ಚೆನ್ನಾಗಿದ್ದರೆ, ಇವತ್ತು ಟೀಮ್ ಇಂಡಿಯಾದ ಓಪನರ್ ಆಗಿ ವಿಶ್ವ ಕ್ರಿಕೆಟ್ ಅನ್ನೇ ಆಳುತ್ತಿದ್ದ. ಆದ್ರೆ, ಬ್ಯಾಡ್ಲಕ್ ಇದು ಸಾಧ್ಯವಾಗಲಿಲ್ಲ. ಭಾರತದ ಭವಿಷ್ಯ ಎಂದು ಕರೆಸಿಕೊಂಡವ ಇವತ್ತೂ, ದೇಶಿ ಕ್ರಿಕೆಟ್ನಲ್ಲೂ ಸ್ಥಾನ ಸಿಗದಂತಾಗಿದೆ. ಆದ್ರೀಗ ಇದೇ ಪೃಥ್ವಿ ಶಾ, ಪಶ್ಚಾತ್ತಾಪದ ಮಾತುಗಳನ್ನು ಆಡುತ್ತಿದ್ದಾರೆ.
ಪೃಥ್ವಿ ಶಾ ಒನ್ ಆಫ್ ದ ಬೆಸ್ಟ್ & ಟ್ಯಾಲೆಂಟೆಡ್ ಕ್ರಿಕೆಟರ್. ಟೀಮ್ ಇಂಡಿಯಾ ಪರ ಡೆಬ್ಯೂ ಪಂದ್ಯದಲ್ಲೇ ಶತಕ ಸಿಡಿಸಿ ಟೀಮ್ ಇಂಡಿಯಾದ ಭವಿಷ್ಯ ಎನಿಸಿಕೊಂಡ ಆಟಗಾರ. ಈತನ ಆಟ ನೋಡಿದ ದಿಗ್ಗಜರು, ಮರಿ ಸಚಿನ್, ಸೆಹ್ವಾಗ್ ಎಂದೇ ಗುಣಗಾನ ಮಾಡಿದ್ದುಂಟು. 18ರ ವಯಸ್ಸಿನಲ್ಲೇ ಇಂಟರ್ನ್ಯಾಷನಲ್ ಕ್ರಿಕೆಟ್‌ಗೆ ಗ್ರ್ಯಾಂಡ್ ಎಂಟ್ರಿ ನೀಡಿದ ಫೈರಿ ಓಪನರ್. ಆದ್ರೆ, ವಿಶ್ವ ಕ್ರಿಕೆಟ್ನಲ್ಲಿ ಸೆನ್ಸೇಷನ್ ಕ್ರಿಯೇಟ್ ಮಾಡಿದ್ದ ಈತನ ವೃತ್ತಿ ಜೀವನ ಸೂತ್ರವಿಲ್ಲದ ಗಾಳಿಪಟವಾಗಿದ್ದು ನಿಜಕ್ಕೂ ದೃರಾದೃಷ್ಟ.
ಮುಂಬೈಕರ್ ಪೃಥ್ವಿ ಶಾ ಪಶ್ಚಾತ್ತಾಪದ ಮಾತು..!
18ರ ವಯಸ್ಸಲ್ಲೇ ಟೀಮ್ ಇಂಡಿಯಾ ಸೇರಿದ್ದ ಪೃಥ್ವಿ ಶಾ, ವಿಶ್ವ ಕ್ರಿಕೆಟ್ ಲೋಕವನ್ನೇ ಆಡುವ ಭರವಸೆ ಹುಟ್ಟಿಹಾಕಿದ್ದರು. ಆದ್ರೆ, ಪೃಥ್ವಿ ಶಾರ ಫಿಟ್ನೆಸ್, ಶಿಸ್ತೇ ಆತನ ಕರಿಯರ್ಗೆ ಮುಳ್ಳಾಗಿ ಹೋಯಿತು. ಆರಂಭದಲ್ಲಿ ಟೀಮ್ ಇಂಡಿಯಾದಿಂದ ಹೊರ ಬಿದ್ದಿದ್ದ ಮುಂಬೈಕರ್, ಕಾಲ ಕ್ರಮೇಣ ಮುಂಬೈ ತಂಡದಿಂದಲೇ ಅಲ್ಲ. ಐಪಿಎಲ್ನಲ್ಲೂ ಅನ್ಸೋಲ್ಡ್ ಪ್ಲೇಯರ್ ಆಗಿಬಿಟ್ಟರು. ಇದಕ್ಕೆ ಕಾರಣವಾಗಿದ್ದು ಪೃಥ್ವಿ ಶಾರ ನಡೆ ಹಾಗೂ ಶಿಸ್ತು ಮಾತ್ರವಲ್ಲ. ಕೆಲವರ ಗೆಳೆತನವೂ ಆಗಿತ್ತು.
ನಾನು ಜೀವನದಲ್ಲಿ ಕೆಲ ಕೆಟ್ಟ ನಿರ್ಧಾರ ತೆಗೆದುಕೊಂಡಿದ್ದೇನೆ. ನಾನು ಕ್ರಿಕೆಟ್‌ಗೆ ಕಡಿಮೆ ಸಮಯ ಮೀಸಲಿಡುತ್ತಿದ್ದೆ. 2023ರವರೆಗೆ ಅರ್ಧದಷ್ಟು ದಿನ ಕ್ರಿಕೆಟ್ಗಾಗಿ ಮೀಸಲಿಡುತ್ತಿದ್ದೆ. ನಂತರ ನಾನು ಕೆಲವು ಕೆಟ್ಟ ವಿಷಯಗಳಿಗೆ ಪ್ರಾಮುಖ್ಯತೆ ನೀಡಲು ಪ್ರಾರಂಭಿಸಿದೆ. ನಾನು ಕೆಲವು ತಪ್ಪು ಜನರೊಂದಿಗೆ ಸ್ನೇಹ ಬೆಳೆಸಿದೆ. ನಾವು ಉನ್ನತ ಸ್ಥಾನದಲ್ಲಿದ್ದಾಗ ಅನೇಕ ಸ್ನೇಹಿತರು ನಮ್ಮನ್ನು ಸಂಪರ್ಕಿಸುತ್ತಾರೆ. ನನಗೂ ಅದೇ ಪರಿಸ್ಥಿತಿ ಎದುರಾಗಿತ್ತು. ಆದ್ರೆ ಅಂದು ನನಗೆ ಇದರ ಅರಿವಾಗಲಿಲ್ಲ. ಆ ನಂತರ ಕ್ರಿಕೆಟ್‌ಗೆ ಮೀಸಲಿಡುತ್ತಿದ್ದ ಸಮಯವನ್ನು 8 ಗಂಟೆಗಳಿಂದ 4 ಗಂಟೆಗೆ ಇಳಿಸಿದೆ.
ಪೃಥ್ವಿ ಶಾ, ಯುವ ಕ್ರಿಕೆಟರ್
ಫಿಟ್ನೆಸ್ ಜೊತೆ ಕರಿಯರ್ ಕಳೆದುಕೊಂಡ ಮುಂಬೈಕರ್!
ಪ್ರತಿ ಅಥ್ಲೆಟ್ಗೆ ಹಾಗೂ ಕ್ರಿಕೆಟರ್ಗೆ ಫಿಟ್ನೆಸ್ ಬಹುಮುಖ್ಯ. ಇದು ಪೃಥ್ವಿ ಶಾ ಮರೆತೆ ಬಿಟ್ಟಿದ್ರು. ಫೂಡಿಯಾಗಿದ್ದ ಪೃಥ್ವಿ ಶಾ, ಸರಿಯಾದ ಡಯಟ್ ಫಾಲೋ ಮಾಡಲೇ ಇಲ್ಲ. ಪರಿಣಾಮ ಫಿಟ್ನೆಸ್ ಕಳೆದುಕೊಂಡ ಪೃಥ್ವಿ, ಕರಿಯರ್ ಅನ್ನೇ ಕಳೆದುಕೊಳ್ಳಬೇಕಾಯ್ತು.
ನಾನು ಫೂಡಿ ಆಗಿದ್ದೆ. ಆಹಾರದ ವಿಷ್ಯದಲ್ಲಿ ಕಟ್ರೋಲ್ ಇರಲಿಲ್ಲ. ಟ್ರೈನಿಂಗ್ ಮಾಡ್ತಿದ್ದೆ. ಆಹಾರದ ವಿಚಾರದಲ್ಲಿ ಕಟ್ರೋಲ್ ಇರಲಿಲ್ಲ. ಪಾನಿಪೂರಿ, ವಡಪಾವ್ ತಿನ್ನುವುದರಲ್ಲಿ ಇಂಟ್ರೆಸ್ಟ್ ಇರಲಿಲ್ಲ. ಆದ್ರೆ, ಹೆಚ್ಚು ಹೆಚ್ಚು ಊಟ ಮಾಡ್ತಿದ್ದೆ.
ಪೃಥ್ವಿ ಶಾ, ಯುವ ಕ್ರಿಕೆಟರ್
ಐಪಿಎಲ್ ಹರಾಜು ನೋಡಲೇ ಇಲ್ವಂತೆ ಪೃಥ್ವಿ ಶಾ..!
2023ರ ಐಪಿಎಲ್ ಬಳಿಕ ಫಿಟ್ನೆಸ್ ವಿಚಾರವಾಗಿಯೇ ಪೃಥ್ವಿ ಶಾ ಹೆಚ್ಚು ಚರ್ಚೆಯಾಗುತ್ತಿದ್ದರು. ಈ ಬೆನ್ನಲ್ಲೇ ಸಾಲು ಸಾಲು ವಿವಾದಗಳಿಗೂ ಕಾರಣವಾಗಿದ್ದ ಪೃಥ್ವಿ ಶಾ, ಐಪಿಎಲ್ ಹರಾಜು ಸಹ ನೋಡಲಿಲ್ವಂತೆ. ಇದಕ್ಕೆ ಪೃಥ್ವಿ ಶಾ ಕಾರಣ ಏನು ನೀವೇ ನೋಡಿ.
ಐಪಿಎಲ್ನಲ್ಲಿ ಏನಾಗುತ್ತೆ ಎಂದು ಅರ್ಥವಾಗಿತ್ತು. ಮುಂಬೈ ತಂಡ ನನ್ನ ಡ್ರಾಪ್ ಮಾಡಿತ್ತು. ಇದಕ್ಕೆಲ್ಲ ನಾನು ಮೊದಲೇ ಸಿದ್ಧನಾಗಿದ್ದೆ. ಈಗ ಏನಾಗಿದೆಯೋ ಅದೆಲ್ಲವೂ ಈ ವಯಸ್ಸಿನಲ್ಲಿ ಆಗಿರುವುದು ಒಳ್ಳೆಯದೇ. ಯಾಕಂದ್ರೆ, ಏನಾಗ್ತಿದೆ ಎಂದು ಕಂಡುಕೊಳ್ಳಬಹುದು. ಕಮ್ಬ್ಯಾಕ್ ಹೇಗೆ ಎಂದು ಚಿಂತಿಸಬಹುದು. ಇದನ್ನೆಲ್ಲಾ ನಾನು ಪಾಸಿಟಿವ್ ಆಗಿಯೇ ತೆಗೆದುಕೊಳ್ಳುತ್ತೇನೆ. ಹರಾಜು ನೊಡಲಿಲ್ಲ. ಇದಕ್ಕೆಲ್ಲಾ ಮಾನಸಿಕವಾಗಿ ಸಿದ್ಧವಾಗಿದ್ದೆ.
ಪೃಥ್ವಿ ಶಾ, ಯುವ ಕ್ರಿಕೆಟರ್
ಐಪಿಎಲ್ನಲ್ಲಿ ಅನ್ಸೋಲ್ಡ್ ಆಗಿದ್ದ ಪೃಥ್ವಿ ಶಾಗೆ ಕರೆ ಮಾಡಿ ಮಾತನಾಡಿದ್ದು, ರಿಷಭ್ ಪಂತ್, ಸೂರ್ಯ ಕುಮಾರ್ ಯಾದವ್, ಶ್ರೇಯಸ್ ಅಯ್ಯರ್ ಎಂದು ನೆನಸಿಕೊಂಡ ಪೃಥ್ವಿ, ವೃತ್ತಿ ಜೀವನದ ಸಂಕಷ್ಟದಲ್ಲಿದ್ದಾಗ ಯಾರು ಕರೆ ಮಾಡಿಯೂ ಮಾತನಾಡಿಲ್ಲ ಎಂದಿದ್ದಾರೆ.
8 ತಿಂಗಳು ಬ್ಯಾನ್.. ಇದಕ್ಕೆ ಕಾರಣವಾಗಿದ್ದು ತಂದೆ..!
ಪೃಥ್ವಿ ಶಾರ ಕರಾಳ ಅಧ್ಯಾಯ, 8 ತಿಂಗಳ ಬ್ಯಾನ್. ಅಂದು ತಂದೆ ನೀಡಿದ್ದ ಸಲಹೆಯಿಂದ ಆ ಒಂದು ಸಿರಪ್ ಕುಡಿದಿದ್ರು. ಅದು ಪೃಥ್ವಿ ಕರಿಯರ್ಗೆ ಮುಳ್ಳು ಆಯಿತು.
ಇದನ್ನೂ ಓದಿ: ಹುಲಿಗಳ ಜೀವ ತೆಗೆದ್ರೆ ಎಷ್ಟು ವರ್ಷ ಜೈಲು ಶಿಕ್ಷೆ, ದಂಡ.. ನಿವೃತ್ತ ಅರಣ್ಯ ಅಧಿಕಾರಿ ಪೂವಯ್ಯ ಏನಂದ್ರು?
2019 ಮುಷ್ತಾಕ್ ಆಲಿ ನಡೀತಿತ್ತು. ಇಂದೋರ್ನಲ್ಲಿದ್ದೆ. ಆ ಸಮಯದಲ್ಲಿ ಫೀವರ್ ಬಂದಿತ್ತು. ಅದೇ ವೇಳೆ ನನ್ನ ಡೋಪ್ ಟೆಸ್ಟ್ ನಡೆದಿತ್ತು. ಕೆಮ್ಮಿನಿಂದಾಗಿ ನಾನು ಮಾತ್ರೆ ತೆಗೆದುಕೊಂಡಿದ್ದೆ. ತಂದೆ ಜೊತೆ ಮಾತನಾಡುತ್ತಿದ್ದೆ. ಈ ವಿಷಯವನ್ನು ನಮ್ಮ ತಂದೆಗೆ ಹೇಳಿದೆ. ಆಗ ಬೆನಾಡ್ರಿಲ್ ಕಾಫ್ ಸಿರಫ್ ತೆಗೆದುಕೊಳ್ಳುವಂತೆ ಸಲಹೆ ನೀಡಿದರು. ನಾನು ತೆಗದುಕೊಂಡಿದ್ದೆ. ಆದ್ರೆ, ಬೆನಾಡ್ರಿಲ್ ತೆಗೆದುಕೊಳ್ಳಬಾರದು ಎಂದು ಎಲ್ಲೂ ಬರೆದಿರಲಿಲ್ಲ.
ಡೋಪ್ನಲ್ಲಿ ಸಿರಾಫ್ನಲ್ಲಿ ಪತ್ತೆಯಾಗಿತ್ತು ಎಂಬುವುದು ಬಹಿರಂಗವಾಗಿತ್ತು. ಆದ್ರೆ, 8 ತಿಂಗಳ ಬ್ಯಾನ್ ಬಳಿಕ ಟೀಮ್ ಇಂಡಿಯಾಗೆ ಕಮ್ಬ್ಯಾಕ್ ಮಾಡಿದರು. ಆದ್ರೆ, ದಾರಿ ತಪ್ಪಿದ ಪೃಥ್ವಿ ಶಾಗೆ ಸಕ್ಸಸ್ ಮಾತ್ರ ಸಿಗಲೇ ಇಲ್ಲ. ವೃತ್ತಿ ಜೀವನದ ಅಂತ್ಯತ ಕಠಿಣ ದಿನಗಳನ್ನು ಎಣಿಸ್ತಿರುವ ಪೃಥ್ವಿ ಜ್ಞಾನೋದಯವಾಗಿದೆ. ಇನ್ನಾದರೂ ಕಠಿಣ ಶ್ರಮದೊಂದಿಗೆ ಯಶಸ್ಸಿನ ಉತ್ತುಂಗಕ್ಕೇರಲಿ ಅನ್ನೋದೆ ಎಲ್ಲರ ಆಶಯ.
ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.30ಕ್ಕೆ ನ್ಯೂಸ್ಫಸ್ಟ್ಚಾನೆಲ್ನಲ್ಲಿ ‘ರನ್ ಭೂಮಿ’ ವೀಕ್ಷಿಸಿ