Advertisment

ಮಹತ್ವದ ಟ್ರೋಫಿಯಿಂದ ಯಂಗ್ ಬ್ಯಾಟ್ಸ್​ಮನ್ ಪೃಥ್ವಿ ಶಾ ಔಟ್.. ಈ ತಲೆದಂಡ ಯಾಕೆ ಗೊತ್ತಾ?

author-image
Bheemappa
Updated On
ಮಹತ್ವದ ಟ್ರೋಫಿಯಿಂದ ಯಂಗ್ ಬ್ಯಾಟ್ಸ್​ಮನ್ ಪೃಥ್ವಿ ಶಾ ಔಟ್.. ಈ ತಲೆದಂಡ ಯಾಕೆ ಗೊತ್ತಾ?
Advertisment
  • ತಂಡದಿಂದ ಪೃಥ್ವಿ ಶಾನ ಕೈಬಿಡಲು ಕಾರಣ ಈಗ ಬಹಿರಂಗ
  • ಪಂದ್ಯದ ಬಳಿಕ ರಾತ್ರಿ ಯಂಗ್ ಪ್ಲೇಯರ್ ಎಲ್ಲಿಗೆ ಹೋಗ್ತಾರೆ?
  • ಕೊಟ್ಟ ಅವಕಾಶವನ್ನು ಬಳಸಿಕೊಳ್ಳದ ಯಂಗ್ ಬ್ಯಾಟ್ಸ್​ಮನ್

ಪೃಥ್ವಿ ಶಾ.. ಒಂದಿಲ್ಲೊಂದು ಸುದ್ದಿಯಿಂದ ಸದ್ದು ಮಾಡುತ್ತಿರುತ್ತಾರೆ. ಚರ್ಚೆಯ ಕೇಂದ್ರ ಬಿಂದು ಆಗಿರುತ್ತಾರೆ. ಇಂಥಹ ಪೃಥ್ವಿ ಶಾ, ಈಗ ಮತ್ತೆ ಟ್ರೆಂಡಿಂಗ್​ನಲ್ಲಿದ್ದಾರೆ. ಇದಕ್ಕೆ ಕಾರಣ ಮುಂಬೈ ಕ್ರಿಕೆಟ್​ ಅಸೋಸಿಯೇಷನ್ ವರ್ಸಸ್ ಪೃಥ್ವಿ ಶಾರ ಟಾಕ್ ವಾರ್​.

Advertisment

ಪೃಥ್ವಿ ಶಾ ಈತ ಎಲ್ಲವೂ ಅಂದುಕೊಂಡಂತೆ ನಡೆದಿದ್ರೆ, ಇವತ್ತು ಟಾಪ್ ಕ್ಲಾಸ್ ಆಟಗಾರನಾಗಿ ವಿಶ್ವ ಕ್ರಿಕೆಟ್​ ಅನ್ನೇ ಆಳುತ್ತಿದ್ದ. ಆದ್ರೆ, ಶಾರ್ಟ್​ ಟೈಮ್ ಸಕ್ಸಸ್​​ನ ಅಲೆ, ತಾನೆ ಮಾಡಿಕೊಂಡ ತಪ್ಪುಗಳಿಗೆ ಬೆಲೆ ಕಟ್ಟುತ್ತಿದ್ದಾನೆ. ಬ್ಯಾಟ್​ನಿಂದ ಉತ್ತರಿಸಬೇಕಿದ್ದ ಮುಂಬೈಕರ್, ಬೇರೆಯದ್ದೆ ರೀತಿ ಸುದ್ದಿಯಾಗ್ತಾರೆ. ವಾರಕ್ಕೊಮ್ಮೆ, ತಿಂಗಳಿಗೊಮ್ಮೆ ಒಂದಿಲ್ಲೊಂದು ರೀತಿ ಟ್ರೆಂಡಿಂಗ್​ನಲ್ಲಿ ಇರುತ್ತಾರೆ. ಇದಕ್ಕೆ ಕಾರಣ ಆತ ಮಾಡಿಕೊಂಡಿರುವ ಯಡವಟ್ಟುಗಳು.

publive-image

ವಿಜಯ್ ಹಜಾರೆಯಿಂದ ತಂಡದಿಂದ ಪೃಥ್ವಿ ಶಾ ಡ್ರಾಪ್​..!

ಈ ಇಡೀ ವರ್ಷ ಮುಂಬೈ ತಂಡದಿಂದ ಡ್ರಾಪ್, ಇಂಜುರಿ, ಆಫ್ ಫೀಲ್ಡ್​ ವಿವಾದಗಳು, ಐಪಿಎಲ್​​​ ಮೆಗಾ ಹರಾಜಿನಲ್ಲಿ ಅನ್​ಸೋಲ್ಡ್​ ಆಗಿ ಸುದ್ದಿಯಾಗಿದ್ದ ಪೃಥ್ವಿ ಶಾ, ಈಗ ಮತ್ತೆ ಮುಂಬೈ ತಂಡದಿಂದ ಕಿಕ್​ಔಟ್​ ಆಗಿ ಸುದ್ದಿಯಾಗಿದ್ದಾರೆ.

ರಣಜಿ ಟೂರ್ನಿ ವೇಳೆ ಶಿಸ್ತು ಉಲ್ಲಂಘನೆ ಕಾರಣಕ್ಕೆ ಕೆಲ ಪಂದ್ಯಗಳಿಂದ ಪೃಥ್ವಿಗೆ ಗೇಟ್​ ಪಾಸ್ ನೀಡಿದ್ದ ಮುಂಬೈ ಕ್ರಿಕೆಟ್ ಅಸೋಸಿಯೇಷನ್, ಸೈಯದ್ ಮುಷ್ತಾಕ್ ಅಲಿ ಟೂರ್ನಿಯಲ್ಲಿ ಅವಕಾಶ ನೀಡಿತ್ತು. ಆದ್ರೆ, ಹೇಳಿಕೊಳ್ಳುವಂತ ಪರ್ಫಾಮೆನ್ಸ್ ನೀಡದ ಶಾಗೆ, ವಿಜಯ್ ಹಜಾರೆ ಟ್ರೋಫಿಯಿಂದ ಕೈಬಿಟ್ಟಿದೆ. ಈ ಬೆನ್ನಲ್ಲೇ ಪೃಥ್ವಿ ಶಾ, ಮುಂಬೈ ಕ್ರಿಕೆಟ್ ಅಸೋಸಿಯೇಷನ್ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

Advertisment

ನಾನು ಇನ್ನೇನೆಲ್ಲ ನೋಡಬೇಕು!

ಹೇಳು ದೇವರೇ, ನಾನು ಇನ್ನೂ ಏನೇನು ನೋಡಬೇಕು. 65 ಇನ್ನಿಂಗ್ಸ್‌ಗಳು, 55.7ರ ಬ್ಯಾಟಿಂಗ್ ಸರಾಸರಿಯಲ್ಲಿ 3,399 ರನ್‌ ಗಳಿಸಿದ್ದೆ. 126 ಸ್ಟ್ರೈಕ್ ರೇಟ್‌ನೊಂದಿಗೆ ನಾನು ಸಾಕಷ್ಟು ಉತ್ತಮವಾಗಿಲ್ಲ. ಆದರೆ ನನ್ನ ನಂಬಿಕೆಯನ್ನು ಉಳಿಸಿಕೊಳ್ಳುತ್ತೇನೆ. ಜನರು ನನ್ನನ್ನು ನಂಬುತ್ತಾರೆ ಎಂದು ಆಶಿಸುತ್ತೇವೆ. ಏಕೆಂದರೆ ನಾನು ಖಚಿತವಾಗಿ ಹಿಂತಿರುಗುತ್ತೇನೆ. ಓಂ ಸಾಯಿ ರಾಮ್.

ಪೃಥ್ವಿ ಶಾ, ಕ್ರಿಕೆಟರ್

ಹೀಗೆ ಅಂಕಿಸಂಖ್ಯೆಗಳ ಪೋಸ್ಟ್​ ಮಾಡಿದ್ದ ಪೃಥ್ವಿ ಶಾ, ಸಿಂಪಥಿ ಗೇಮ್​ ಪ್ಲೇ ಮಾಡಿದ್ದಾರೆ. ಜನರು ನನ್ನ ನಂಬುತ್ತಾರೆ. ನಾನು ಕಮ್​ಬ್ಯಾಕ್ ಮಾಡುತ್ತೇನೆ. ಓಮ್ ಸಾಯಿ ರಾಮ್ ಎಂಬ ಹೈಡ್ರಾಮಾ ಕ್ರಿಯೇಟ್​ ಮಾಡಿರೋ ಪೃಥ್ವಿ ಶಾಗೆ ಮುಂಬೈ ಕ್ರಿಕೆಟ್ ಅಸೋಸಿಯೇಷನ್​ ಟಕ್ಕರ್ ನೀಡಿದೆ. ಪೃಥ್ವಿ ಶಾರನ್ನ ತಂಡದಿಂದ ಕೈಬಿಡಲು ಕಾರಣವೇನು ಎಂಬುದನ್ನ ಬಹಿರಂಗಪಡಿಸಿದ್ದಾರೆ.

ನೈಟ್ ಔಟ್ ಪಾರ್ಟಿ​.. ಬೆಳಗ್ಗೆ 6ಕ್ಕೆ ಹೋಟೆಲ್​ಗೆ ವಾಪಸ್..!

ರನ್​ ಗಳಿಸಲು ಪರದಾಡುತ್ತಿದ್ದ ಪೃಥ್ವಿ ಶಾ, ಮತ್ತೊಂದೆಡೆ ಶಿಸ್ತು, ಸಂಯಮವನ್ನೇ ಪಾಲಿಸ್ತಿರಲಿಲ್ಲ. ನೈಟ್​ ಔಟ್​ ಪಾರ್ಟಿ, ಯುವತಿಯರ ಜೊತೆ ಸುತ್ತಾಟ, ಬೆಳಗ್ಗೆ ಹೋಟೆಲ್​ಗೆ ವಾಪಸ್ ಆಗ್ತಿದ್ದ ಈ ಮುಂಬೈಕರ್, ಅಭ್ಯಾಸಕ್ಕೂ ಹಾಜರಾಗ್ತಿರಲಿಲ್ಲ. ಈ ಬಗ್ಗೆ ಸ್ವತಃ ತಂಡದ ಹಿರಿಯ ಆಟಗಾರರೇ ದೂರು ನೀಡಿದರು. ಇದೇ ವಿಚಾರವನ್ನೇ ಈಗ ಮುಂಬೈ ಕ್ರಿಕೆಟ್ ಅಸೋಸಿಯೇಷನ್ ಬಹಿರಂಗ ಪಡಿಸಿದೆ.

Advertisment

ರಾತ್ರಿ ನೈಟ್​ಔಟ್​.. 6ಕ್ಕೆ ವಾಪಸ್..!

ಪೃಥ್ವಿ ನೈಟ್​ ಔಟ್​ ಹೋಗುತ್ತಿದ್ದರು ಮತ್ತು ಬೆಳಗ್ಗೆ 6 ಗಂಟೆಗೆ ಹೋಟೆಲ್‌ಗೆ ವಾಪಸ್​ ಆಗುತ್ತಿದ್ದರು. ಅಭ್ಯಾಸ ಪಂದ್ಯಗಳಲ್ಲೂ ಭಾಗಿಯಾಗುತ್ತಿರಲಿಲ್ಲ. ಇಂತಹ ವರ್ತನೆಯಿಂದ ತಂಡದಲ್ಲಿ ಸ್ಥಾನ ಪಡೆಯಬೇಕು ಎಂದು ಬಯಸುವುದು ಎಷ್ಟು ಸರಿ?. ಈ ರೀತಿಯ ಪೋಸ್ಟ್​ಗಳು ನಮ್ಮ ಮೇಲೆ ಪ್ರಭಾವ ಬೀರುತ್ತೆ ಎಂದು ಭಾವಿಸುವುದು ತಪ್ಪು. ಫಿಟ್ನೆಸ್ ಬಗ್ಗೆ ಅವರೇ ಎಚ್ಚರ ವಹಿಸುತ್ತಿಲ್ಲ. ಎಂಸಿಎ ಅಕಾಡೆಮಿಯಲ್ಲಿ ನೀಡಲಾಗಿದ್ದ ಫಿಟ್‌ನೆಸ್ ಟೆಸ್ಟ್​ನಲ್ಲೂ ಪೃಥ್ವಿ ಭಾಗಿಯಾಗಿಲ್ಲ.

ಮುಂಬೈ ಕ್ರಿಕೆಟ್ ಅಸೋಸಿಯೇಷನ್

ಪೃಥ್ವಿಗೆ ಪೃಥ್ವಿ ಶಾನೇ ವಿಲನ್​.. ಬೇಱರು ಅಲ್ಲ.!

ಪೃಥ್ವಿ ಶಾರ ನಡೆ ಬಗ್ಗೆ ಅಸಮಾಧಾನಗೊಂಡಿರುವ ಮುಂಬೈ ಕ್ರಿಕೆಟ್​ ಅಸೋಸಿಯೇಷನ್​, ಬಾಲ್ ಥ್ರೋ ಮಾಡೋ ಫಿಟ್ನೆಸ್ ಕೂಡ ಇಲ್ಲ ಎಂದಿದೆ. ಪೃಥ್ವಿಗೆ ಪೃಥ್ವಿನೇ ವಿಲನ್ ಎಂದಿರುವ ಮುಂಬೈ ಕ್ರಿಕೆಟ್ ಅಸೋಸಿಯೇಷನ್, ನಾವ್ 10 ಮಂದಿಯೊಂದಿಗೆ ಫೀಲ್ಡಿಂಗ್ ಮಾಡಬೇಕಾಯಿತು ಎಂದು ಪೃಥ್ವಿಯ ಫಿಟ್ನೆಸ್ ಬಗ್ಗೆ ಪ್ರಶ್ನಿಸಿದ್ದಾರೆ.

ಇದನ್ನೂ ಓದಿ: ಆಸ್ಟ್ರೇಲಿಯಾದಲ್ಲೂ RCB ಫ್ಯಾನ್ಸ್​.. ವಿರಾಟ್​ ಕೊಹ್ಲಿ ಜೊತೆ ಜೆರ್ಸಿ ಧರಿಸಿ ಯುವತಿ ಕ್ಯೂಟ್ ಫೋಟೋ

Advertisment

publive-image

ಪೃಥ್ವಿಗೆ ಪೃಥ್ವಿ ಶಾನೇ ವಿಲನ್

ಪೃಥ್ವಿ ಶಾಗೆ ಹೊರಗಿನ ಶತ್ರುಗಳು ಇಲ್ಲ. ತಮ್ಮ ಪಾಲಿಗೆ ತಾವೇ ಶತ್ರುವಾಗಿದ್ದಾರೆ. ನಿಜ ಹೇಳಬೇಕೆಂದರೆ ಇತ್ತೀಚೆಗೆ ಮುಕ್ತಾಯಗೊಂಡ ಸೈಯದ್​ ಮುಷ್ತಾಕ್​ ಅಲಿ ಟ್ರೋಫಿ ವೇಳೆ 10 ಜನರೊಂದಿಗೆ ಪಂದ್ಯ ಆಡಬೇಕಾಯಿತು. ಅಲ್ಲದೇ ಪೃಥ್ವಿ ಶಾ ಫೀಲ್ಡಿಂಗ್​ ಮಾಡುತ್ತಿದ್ದ ಕಡೆ ಚೆಂಡು ಹೋಗದಂತೆ ಕಷ್ಟಪಡಬೇಕಾಯಿತು. ಏಕೆಂದರೆ ಶಾ ಬಳಿ ಚೆಂಡು​ ಹೋದರೆ, ಅದನ್ನ ತಡೆದು ಥ್ರೋ ಮಾಡುವಂತ ಫಿಟ್ನೆಸ್​ ಅವನ ಬಳಿ ಇರಲಿಲ್ಲ. ಇಂತಹ ಫಿಟ್ನೆಸ್​ನೊಂದಿಗೆ ಶಾ ಎಷ್ಟು ಪಂದ್ಯ ಆಡಬಲ್ಲರು?. ಬ್ಯಾಟಿಂಗ್​ ಆಡುವಾಗಲೂ ಇಂತಹ ಹಲವಾರು ಘಟನೆಗಳು ಸಂಭವಿಸಿವೆ. ರನ್​ ಕಸಿಯಲು ಪರದಾಡುತ್ತಿದ್ದರು. ಆತನ ಫಿಟ್ನೆಸ್​, ಶಿಸ್ತು ಮತ್ತು ನಡವಳಿಕೆ ಕೂಡ ಉತ್ತಮವಾಗಿರಲಿಲ್ಲ.

ಮುಂಬೈ ಕ್ರಿಕೆಟ್ ಅಸೋಸಿಯೇಷನ್

ಮುಂಬೈ ಕ್ರಿಕೆಟ್‌ ಅಸೋಸಿಯೇಷನ್‌ ಹೇಳಿಕೆ ಬೆನ್ನಲ್ಲೆ ಪೃಥ್ವಿ ಶಾ, ಇನ್‌ಸ್ಟಾಗ್ರಾಮ್‌ ಸ್ಟೋರಿಯಲ್ಲಿ ತಿರುಗೇಟು ನೀಡಿದ್ದಾರೆ. ವಿಷಯ ತಿಳಿಯದೆ ಮಾತಾಡದಂತೆ ಟಾಂಗ್ ನೀಡಿದ್ದಾರೆ. ಟೀಕೆಗಳಿಗೆ ಬ್ಯಾಟ್​​ನಿಂದ ಉತ್ತರಿಸಬೇಕಿರುವುದು ಶ್ರೇಷ್ಠ ಕ್ರಿಕೆಟಿಗರ ಶೈಲಿ. ಆದ್ರೆ, ಪೃಥ್ವಿ ಶಾ ಮಾತ್ರ ಇದ್ಯಾವುದು ಮಾಡದೇ, ಇತರರ ಮೇಲೆ ಗೂಬೆ ಕೂರಿಸುತ್ತಾ ಸಾಗುವುದು ನಿಜಕ್ಕೂ ಆಟಗಾರನ ಲಕ್ಷಣವಲ್ಲ. ಹೀಗಾಗಿ ಇನ್ನಾದ್ರೂ ಎಚ್ಚೆತ್ತುಕೊಳ್ಳುವುದು ಉತ್ತಮ. ಇಲ್ಲ ಕರಿಯರ್​​​​​​​​​​ಗೆ ಇದೇ ಮುಳ್ಳಾಗೋದ್ರಲ್ಲಿ ಡೌಟೇ ಇಲ್ಲ.

ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್‌ಫಸ್ಟ್‌ಚಾನೆಲ್​​ನಲ್ಲಿ ‘ರನ್ ಭೂಮಿ’ ವೀಕ್ಷಿಸಿ

Advertisment
Advertisment
Advertisment
Advertisment