/newsfirstlive-kannada/media/post_attachments/wp-content/uploads/2025/04/Prithvi_Shaw.jpg)
ಕೇವಲ ಎರಡೇ 2 ದಿನಗಳ ಹಿಂದೆ ಚೆನ್ನೈ ಸೂಪರ್​ ಕಿಂಗ್ಸ್​ ತಂಡಕ್ಕೆ ಯುವ ಬ್ಯಾಟ್ಸ್​​ಮನ್​ ಪೃಥ್ವಿ ಶಾ ಅವರನ್ನು ಕರೆತನ್ನಿ ಎನ್ನುವ ಮಾತುಗಳು ಕೇಳಿ ಬಂದಿದ್ದವು. ಇದಕ್ಕೆ ಕ್ರಿಕೆಟ್​ ಲೋಕದಲ್ಲಿ ಒಳ್ಳೆಯ ಅಭಿಪ್ರಾಯ ಕೇಳಿ ಬಂದಿತ್ತು. ಆದರೆ ಇದರ ಬೆನ್ನಲ್ಲೇ ಯುವ ಬ್ಯಾಟರ್​ ತನ್ನ ಗೆಳತಿ ಜೊತೆ ಕಾಣಿಸಿಕೊಂಡು ಎಲ್ಲರಿಗೂ ಬಿಗ್ ಶಾಕ್ ನೀಡಿದ್ದಾರೆ.
ಪೃಥ್ವಿ ಶಾ ಟೀಮ್ ಇಂಡಿಯಾದ ಯುವ ಪ್ಲೇಯರ್ ಹಾಗೂ 2025ರ ಐಪಿಎಲ್​ ಟೂರ್ನಿಯಲ್ಲಿ ಸೋಲ್ಡ್​ ಔಟ್ ಆಗದ ಆಟಗಾರ. ಅಂದರೆ ಈ ಸಲದ ಐಪಿಎಲ್​ ಹರಾಜಿನಲ್ಲಿ ಪೃಥ್ವಿ ಶಾ ಅವರನ್ನು ಯಾವ ಫ್ರಾಂಚೈಸಿ ಕೂಡ ಖರೀದಿ ಮಾಡಲಿಲ್ಲ. ಇದಾದ ಮೇಲೆ ಹಾಗೂ ಇದಕ್ಕೂ ಮುಂಚೆ ಕ್ರಿಕೆಟ್​ನಲ್ಲಿ ಅವರಿಗೆ ಅವಕಾಶಗಳು ಕಡಿಮೆ ಆಗಿವೆ. ಸದ್ಯ ಕ್ರಿಕೆಟ್​ನಿಂದ ದೂರ ಇರುವ ಪೃಥ್ವಿ ಶಾ, ತನ್ನ ಗರ್ಲ್​​ಫ್ರೆಂಡ್​ ಜೊತೆ ಇದೀಗ ಪ್ರತ್ಯಕ್ಷ ಆಗಿದ್ದಾರೆ. ಕೇವಲ 2 ದಿನಗಳ ಹಿಂದಷ್ಟೇ ಇವರ ಹೆಸರು ಐಪಿಎಲ್​ನಲ್ಲಿ ಕೇಳಿ ಬಂದಿತ್ತು.
/newsfirstlive-kannada/media/post_attachments/wp-content/uploads/2025/04/Prithvi_Shaw_1.jpg)
ಯುವ ಆಟಗಾರ ಪೃಥ್ವಿ ಶಾ ತನ್ನ ಗರ್ಲ್​​ಫ್ರೆಂಡ್​ ನಿಧಿ ತಪಾಡಿಯಾ ಜೊತೆ ಫುಲ್​ ಜೋಶ್​ನಲ್ಲಿ ಕ್ಯಾಮೆರಾ ಕಣ್ಣಿಗೆ ಬಿದ್ದಿದ್ದಾರೆ. ಮುಂಬೈನಲ್ಲಿ ರಾತ್ರಿ ಸಮಯದಲ್ಲಿ ಪಾರ್ಟಿಯೊಂದರಲ್ಲಿ ಭರ್ಜರಿ ಸ್ಟೆಪ್ಸ್​ ಹಾಕಿ, ಮೋಜು-ಮಸ್ತಿಯನ್ನ ಮುಗಿಸಿಕೊಂಡು ಹೊರ ಬರುತ್ತಿದ್ದರು. ಈ ವೇಳೆ ಪೃಥ್ವಿ ಶಾ ಜೊತೆ ಅವರ ಹಳೆಯ ಗೆಳತಿ ನಿಧಿ ತಪಾಡಿಯಾ ಕೂಡ ಇದ್ದರು. ನಿಧಿಯನ್ನ ಸ್ವತಹ ಪೃಥ್ವಿ ಶಾನೇ ತನ್ನ ಕಾರಿನಲ್ಲಿ ಪಕ್ಕದ ಸೀಟ್​​ನಲ್ಲಿ ಕೂರಿಸಿಕೊಂಡು ಹೋಗಿದ್ದಾರೆ.
ಪಾರ್ಟಿ ಬಳಿಕ ಹೊರ ಬರುತ್ತಿದ್ದಂತೆ ಕ್ಯಾಮೆರಾ ಹಾಗೂ ಮೊಬೈಲ್​ ಮೂಲಕ ಫೋಟೋ ತೆಗೆಯಲು ಮುಂದಾದಾಗ ನಿಧಿ ತನ್ನ ಕಪ್ಪು ಬಣ್ಣದ ಬ್ಯಾಗ್​ನಿಂದ ಮುಖ ಮುಚ್ಚಿಕೊಂಡಿರುವುದು ಇದೆ. ಪಾರ್ಟಿಗೆ ಹೋಗಬೇಕಾದರೆ ಪೃಥ್ವಿ ಶಾ ತನ್ನ ಗರ್ಲ್​​ಫ್ರೆಂಡ್​ ನಿಧಿ ತಪಾಡಿಯಾ ಇಬ್ಬರೂ ಮ್ಯಾಚಿಂಗ್​ ಮ್ಯಾಚಿಂಗ್ ಡ್ರೆಸ್ ಧರಿಸಿರುವುದು ವಿಡಿಯೋ ಮೂಲಕ ಗೊತ್ತಾಗುತ್ತದೆ. ಪೃಥ್ವಿ ಶಾ ಪಾರ್ಟಿ, ಗರ್ಲ್ಡ್​ಫ್ರೆಂಡ್ಸ್​ ಎಂದು ಅತ್ಯುತ್ತಮ ಅವಕಾಶಗಳಿಂದ ವಂಚಿತರಾಗುತ್ತಿದ್ದಾರೆ ಎಂದು ಕ್ರಿಕೆಟ್​ ವಲಯ ಹೇಳುತ್ತಿದೆ. ಇನ್ನು ನಿಧಿ ಅವರು ಮಹಾರಾಷ್ಟ್ರ ಮೂಲದವರು ಆಗಿದ್ದು ಪಂಜಾಬಿ ಹಾಗೂ ಹಿಂದಿಯ ಆಲ್ಬಂ ಮ್ಯೂಸಿಕ್​ನಲ್ಲಿ ಖ್ಯಾತಿ ಗಳಿಸಿದ್ದಾರೆ.
ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್‌ಫಸ್ಟ್‌ಚಾನೆಲ್​​ನಲ್ಲಿ ‘ರನ್ ಭೂಮಿ’ ವೀಕ್ಷಿಸಿ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us