newsfirstkannada.com

The Goat Life ಸಿನಿಮಾಗಾಗಿ 16 ವರ್ಷಗಳನ್ನು ಮೀಸಲಿಟ್ಟಿದ್ದೇನೆ; ನಟ ಪೃಥ್ವಿರಾಜ್ ಸುಕುಮಾರನ್

Share :

Published March 25, 2024 at 6:05am

Update March 25, 2024 at 10:29am

    ‘ಆಡುಜೀವಿತಂ’ ಸಿನಿಮಾದ ಬಗ್ಗೆ ಮನಬಿಚ್ಚಿ ಮಾತನಾಡಿದ ಮಾಲಿವುಡ್​ ನಟ

    ಕನ್ನಡ ಬರುತ್ತಾ ಎಂಬ ಪ್ರಶ್ನೆಗೆ ಉತ್ತರಿಸಿದ ನಟ ಪೃಥ್ವಿರಾಜ ಹೇಳಿದ್ದೇನು?

    ನೈಜ ಘಟನೆಯಾದರಿತ ಸಿನಿಮಾ ಮಾಡಿ ರಿಲೀಸ್​ ಮಾಡಲು ಮುಂದಾದ ನಟ

ಬೆಂಗಳೂರು: ನಟ ಪೃಥ್ವಿರಾಜ್​ ಸುಕುಮಾರನ್​ The Goat Life ಎಂಬ ಮಲೆಯಾಳಂ ಸಿನಿಮಾದ ಮೂಲಕ ತೆರೆ ಮೇಲೆ ಬರಲು ಸಜ್ಜಾಗಿದ್ದಾರೆ. ಇದೇ ಮಾರ್ಚ್​ 28ರಂದು ‘ಆಡುಜೀವಿತಂ’ ಮೂಲಕ ಪ್ರೇಕ್ಷಕರೆದುರು ಬರಲು ತುದಿಗಾಲಲ್ಲಿದ್ದಾರೆ. ಸಿನಿಮಾ ಬಿಡುಗಡೆಗೂ ಮುನ್ನ ನ್ಯೂಸ್‌ ಫಸ್ಟ್ ಪ್ರೈಮ್‌ ಜೊತೆ ಮಾಲಿವುಡ್​ ನಟ ಮಾತನಾಡಿದ್ದು, The Goat Life (ಆಡುಜೀವಿತಂ) ಸಿನಿಮಾದ ಕುತೂಹಲಕಾರಿ ಅಂಶದ ಬಗ್ಗೆ ಮನಬಿಚ್ಚಿ ಮಾತನಾಡಿದ್ದಾರೆ.

ಹಿರಿಯ ಪತ್ರಕರ್ತೆ ಅರ್ಚನಾ ರವಿಕುಮಾರ್ ಅವರು ಪೃಥ್ವಿರಾಜ್​ ಸುಕುಮಾರನ್​ ಸಂದರ್ಶನ ಮಾಡಿದ್ದಾರೆ. ಸಂದರ್ಶನ ಸಮಯದಲ್ಲಿ ‘ಆಡುಜೀವಿತಂ’ ಸಿನಿಮಾಗಾಗಿ 16 ವರ್ಷಗಳನ್ನು ಮೀಸಲಿಟ್ಟಿದ್ದೇನೆ ಎಂದು ಹೇಳಿದ್ದಾರೆ. ಇದು ಕಾದಂಬರಿ ಮಾತ್ರವಲ್ಲ, ನೈಜ್ಯ ಘಟನೆಯಾದರಿತ ಸಿನಿಮಾ. ನಜೀಬ್​ ಮೊಹಮ್ಮದ್​ ಅವರು ಈ ನಿಜ ಘಟನೆ ಕರ್ತೃ ಎಂದು ಹೇಳಿದ್ದಾರೆ.

ಕನ್ನಡ ಭಾಷೆ ಬಗ್ಗೆ ಏನಂದ್ರು?

ನನಗೆ ಎಲ್ಲಾ ಭಾಷೆಗಳ ಮೇಲೆ ಒಲವು ಜಾಸ್ತಿ. ನಾನು ಕನ್ನಡದಲ್ಲೇ ಡಬ್​ ಮಾಡಲೇಬೇಕು ಅಂದುಕೊಂಡಿದ್ದೆ. ಎಷ್ಟೇ ಕಷ್ಟವಾದರೂ ಅದನ್ನು ಲೆಕ್ಕಿಸದೇ ಸಲಾರ್​ ಸಿನಿಮಾಗೆ ಕನ್ನಡದಲ್ಲೇ ಡಬ್ ಮಾಡಿದ್ದೇನೆ ಮಾಲಿವುಡ್‌ ಖ್ಯಾತ ನಟ ಪೃಥ್ವಿರಾಜ ಸುಕುಮಾರನ್ ಹೇಳಿದ್ದಾರೆ.

ಇದನ್ನು ಓದಿ: ಖ್ಯಾತ ಗಾಯಕಿ ಉಷಾ ಉತ್ತುಪ್ ಬಳಿ ಇರೋ ಸೀರೆ ಕಲೆಕ್ಷನ್ ಎಷ್ಟು ಗೊತ್ತಾ; ಈ ಬಗ್ಗೆ ಹೇಳಿದ್ದೇನು?

ಪೃಥ್ವಿರಾಜ್ ಸುಕುಮಾರನ್ ಅವರು ಪ್ರಶಾಂತ್ ನೀಲ್ ನಿರ್ದೇಶನದ ಪ್ರಭಾಸ್ ಅವರ ‘ಸಲಾರ್’ ಸಿನಿಮಾದಲ್ಲಿ ಕಾಣಿಸಿಕೊಂಡಿದ್ದರು. ತೆಲುಗು, ತಮಿಳು, ಹಿಂದಿ ಸಿನಿಮಾಗಳಲ್ಲಿ ನಟಿಸಿ ಸೈ ಎನಿಸಕೊಂಡಿದ್ದ ನಟ ಸಲಾರ್​ ಚಿತ್ರಕ್ಕೆ ಹೇಗೆ ಕನ್ನಡವನ್ನು ಕಲಿತು ಡಬ್​ ಮಾಡಿದ್ದೇನೆ ಎಂಬುವುದರ ಬಗ್ಗೆ ಮಾಹಿತಿ ಹಂಚಿಕೊಂಡಿದ್ದಾರೆ.

ಈ ಬಗ್ಗೆ ಹಿರಿಯ ಪತ್ರಕರ್ತೆ ಅರ್ಚನಾ ರವಿಕುಮಾರ್ ನಡೆಸಿದ ನ್ಯೂಸ್​​​ಫಸ್ಟ್​ ಪ್ರೈಮ್​​​ ಸಂದರ್ಶನದಲ್ಲಿ ನಟ ಪೃಥ್ವಿರಾಜ ಸುಕುಮಾರನ್ ಮಾತಾಡಿದ್ದಾರೆ. ಕನ್ನಡ ಬರುತ್ತಾ ಎಂಬ ಪ್ರಶ್ನೆಗೆ ಉತ್ತರಿಸಿದ ನಟ ಪೃಥ್ವಿರಾಜ ಸುಕುಮಾರನ್ ಅವರು, ​ನಾನು ಮರುಸೃಷ್ಟಿ ಮಾಡುತ್ತೇನೆ. ನನ್ನ ಜೊತೆ ಒಬ್ಬರು ಡೈಲಾಗ್ ಕೋಚ್​ ಇರುತ್ತಾರೆ. ಪದಗಳನ್ನು ನಾನು ಸರಿಯಾಗಿ ಕೇಳಿಸಿಕೊಳ್ಳುತ್ತೇನೆ. ನನಗೆ ಎಲ್ಲಾ ಭಾಷೆಗಳ ಮೇಲೆ ಒಲವು ಜಾಸ್ತಿ. ಹಾಗಾಗಿ ನಾನು ಅನೇಕ ಭಾಷೆಗಳ ಪದಗಳನ್ನು ಸ್ಪಷ್ಟವಾಗಿ ಉಚ್ಛರಿಸಲು ಸಮರ್ಥನಾಗಿದ್ದೇನೆ. ಆದರಿಂದ ಸಾಧ್ಯವಾದಷ್ಟೂ ಎಲ್ಲ ಭಾಷೆಗಳಲ್ಲೂ ಮಾತಾಡಲು ಪ್ರಯತ್ನ ಮಾಡುತ್ತೇನೆ. ಹೀಗೆ ನಾನು ಪ್ರಶಾಂತ್​ ನೀಲ್​ ಅವರಿಗೆ ಹೇಳಿದ್ದೆ, ಸಾಮಾನ್ಯವಾಗಿ ನಟರು ಬಹುಪಾಲು ಡಬ್​ ಮಾಡಿದಾಗ ಅವರು ತಮ್ಮ ಮಾತೃಭಾಷೆಯಲ್ಲೇ ಮಾತಾಡುತ್ತಾರೆ. ನಾನು ನೋಡಿದ ಪ್ರಕಾರ ತೆಲುಗು, ತಮಿಳು ಹಾಗೂ ಹಿಂದಿಯಲ್ಲಿ ಡಬ್​ ಮಾಡುತ್ತಾರೆ. ಆದರೆ ಕೆಲ ನಟರು ಕನ್ನಡದಲ್ಲಿ ಡಬ್​ ಮಾಡಿದ್ದು ಕಡಿಮೆ. ಹಾಗಾಗಿ ನಾನು ಕನ್ನಡದಲ್ಲೇ ಡಬ್​ ಮಾಡಲೇಬೇಕು ಅಂದುಕೊಂಡೆ. ಎಷ್ಟೇ ಕಷ್ಟವಾದರೂ ಅದನ್ನು ಲೆಕ್ಕಿಸದೇ ಸಲಾರ್​ ಸಿನಿಮಾದಲ್ಲಿ ಕನ್ನಡದಲ್ಲೇ ಡಬ್​ ಮಾಡಿದ್ದೇನೆ ಎಂದಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

The Goat Life ಸಿನಿಮಾಗಾಗಿ 16 ವರ್ಷಗಳನ್ನು ಮೀಸಲಿಟ್ಟಿದ್ದೇನೆ; ನಟ ಪೃಥ್ವಿರಾಜ್ ಸುಕುಮಾರನ್

https://newsfirstlive.com/wp-content/uploads/2024/03/sukumar.jpg

Load More