ಪೃಥ್ವಿ ಭಟ್​ ಮದುವೆ ವಿವಾದ.. ಅಪ್ಪನ ಆರೋಪಕ್ಕೆ ಮಗಳಿಂದ ಉತ್ತರ.. ಏನಂದ್ರು ಗಾಯಕಿ..?

author-image
Ganesh
Updated On
ಪೃಥ್ವಿ ಭಟ್​ ಮದುವೆ ವಿವಾದ.. ಅಪ್ಪನ ಆರೋಪಕ್ಕೆ ಮಗಳಿಂದ ಉತ್ತರ.. ಏನಂದ್ರು ಗಾಯಕಿ..?
Advertisment
  • ಮನೆಯವ್ರನ್ನ ಬಿಟ್ಟು ಮದುವೆ ಆದ್ರಾ ಗಾಯಕಿ ಪೃಥ್ವಿ?
  • ‘ಮಗಳು ವಶೀಕರಣಕ್ಕೆ ಒಳಗಾದ ರೀತಿಯಲ್ಲಿ ಇದ್ದಳು’
  • ಮಗಳ ವಿರುದ್ಧ ಗಂಭೀರ ಆರೋಪ ಮಾಡಿದ ತಂದೆ

ಸರಿಗಮಪ ರಿಯಾಲಿಟಿ ಶೋನಲ್ಲಿ ಗಾಯಕಿಯಾಗಿ ಮಿಂಚಿರುವ, ಕನ್ನಡದ ಯುವ ಗಾಯಕಿ ಪೃಥ್ವಿ ಭಟ್ ಮನೆಯವರ ವಿರೋಧದ ನಡುವೆ ಪ್ರೇಮವಿವಾಹ ಆಗಿದ್ದಾರೆ ಎಂಬ ಆರೋಪ ಕೇಳಿಬಂದಿದೆ. ವಾಹಿನಿಯಲ್ಲೇ ಪ್ರೊಡಕ್ಷನ್ ವಿಭಾಗದಲ್ಲಿ ಕೆಲಸ ಮಾಡ್ತಿದ್ದ ಅಭಿಷೇಕ್ ಎನ್ನುವವರ ಜೊತೆ ಮಾರ್ಚ್ 27ರಂದು ವಿವಾಹವಾಗಿದ್ದಾರೆ. ಅದಾಗಿ ಇಪ್ಪತ್ತು ದಿನಗಳ ನಂತ್ರ ಪೃಥ್ವಿ ತಂದೆ ಆಕ್ರೋಶ ಹೊರಹಾಕಿದ್ದಾರೆ. ವಶೀಕರಣದ ಆರೋಪ ಮಾಡಿದ್ದಾರೆ.

ಮನೆಯವ್ರ ಬಿಟ್ಟು ಮದುವೆ

ಕನ್ನಡ ಕಿರುತೆರೆಯ ಜನಪ್ರಿಯ ರಿಯಾಲಿಟಿ ಶೋ ಸರಿಗಮಪ ಮೂಲಕ ಜನಪ್ರಿಯತೆ ಪಡೆದ ಪೃಥ್ವಿ ಭಟ್ ಬಾಳಲ್ಲಿ ಸ್ವರಾಭಿಷೇಕವಾಗಿದೆ. ಪೃಥ್ವಿ ಹೊಸ ಜೀವನಕ್ಕೆ ಅಭಿಷೇಕ್‌ ಆಗಮನ ಆಗಿದ್ದು, ಗಂಭೀರ ಆರೋಪ ಕೇಳಿಬಂದಿದೆ. ಪೃಥ್ವಿ ತಂದೆ ಶಿವಪ್ರಸಾದ್​​​ ಭಟ್​ರು, ವಿರೋಧದ ನಡುವೆಯೂ ಮನೆ ಬಿಟ್ಟು ಹೋಗಿ ಮದುವೆಯಾಗಿದ್ದಾಳೆ. ಆಕೆಯನ್ನ ವಶೀಕರಣ ಮಾಡಲಾಗಿದೆ ಅಂತ ಆರೋಪಿಸಿದ್ದಾರೆ. ಪ್ರಥ್ವಿ ಭಟ್‌ ತಂದೆ ಮಾತನಾಡಿದ್ದಾರೆ ಎನ್ನಲಾದ ಆಡಿಯೋ ಸಂಚಲನ ಸೃಷ್ಟಿಸಿದೆ. ಆಡಿಯೋದಲ್ಲಿ ಸಂಗೀತ ಶಿಕ್ಷಕ ನರಹರಿ ದೀಕ್ಷಿತ್‌ ವಿರುದ್ಧ ಕಿಟಿಕಾರಿದ್ದಾರೆ.

ಇದನ್ನೂ ಓದಿ: ಹಲ್ಲೆ ಕೇಸ್​ಗೆ ಬಿಗ್​ ಟ್ವಿಸ್ಟ್; ವಿಂಗ್ ಕಮಾಂಡರ್​ನ ಅಸಲಿ ಬಣ್ಣ ಬಯಲು, ಕೆರಳಿದ ಕನ್ನಡಿಗರು..!

publive-image

ಪೃಥ್ವಿ ಭಟ್​ ತಂದೆಯದ್ದು ಎನ್ನಲಾದ ಆಡಿಯೋ!

ನಾನು ಶಿವಪ್ರಸಾದ್‌, ಗಾಯಕಿ ಪ್ರಥ್ವಿ ಭಟ್‌ ಅಪ್ಪ. ನನ್ನ ಮಗಳು ಕಳೆದ ತಿಂಗಳು ಇಪ್ಪತ್ತೇಳನೇ ತಾರೀಖಿನಂದು ದೇವಸ್ಥಾನದಲ್ಲಿ ಯಾರನ್ನೋ ಮದುವೆಯಾಗಿ ನಮ್ಮನ್ನು ಬಿಟ್ಟು ಹೋಗಿದ್ದಾಳೆ. ನಮ್ಮ ಸಂಪರ್ಕದಲ್ಲಿ ಇಲ್ಲ ಈಗ ಅವಳು.

ಮುಖ್ಯವಾದ ವಿಷಯ ಅಂದರೆ ಅವಳನ್ನು ಧಾರೆ ಎರೆದು ಮದುವೆ ಮಾಡಿಕೊಟ್ಟಿದ್ದು, ನಮ್ಮ ಗಿರಿ ನಗರ ವಲಯದ ನಿವಾಸಿ. ಭಯಂಕರ ಸಂಗೀತ ಶಿಕ್ಷಕ. ಮಹಾ ದುಷ್ಟ. ನರಹರಿ ದೀಕ್ಷಿತ್‌ ಎಂಬವ.

ಈ ನರಹರಿ ದೀಕ್ಷಿತ್‌ ಬಂದು ಹೋದ ಮೇಲೆ ಅವಳ ವರ್ತನೆಯಲ್ಲಿ ತುಂಬಾ ಬದಲಾವಣೆ ಆಗಿದೆ ಮಾತ್ರ. ಒಂದು ರೀತಿ ವಶೀಕರಣ ಆದವರ ರೀತಿ ಇದ್ದಳು ಅವಳು. ಅದು ಸ್ವಲ್ಪ ನಾನು ಈ ವಿಷಯದಲ್ಲಿ ನಾನು ಸ್ವಲ್ಪ ಸೀರಿಯಸ್​ ಆಗಿ ಆಲೋಚನೆ ಮಾಡಬೇಕಿತ್ತು. ಅದು ನನ್ನ ಕಡೆಯಿಂದ ತಪ್ಪಾಗಿದೆ. ಶಿವಪ್ರಸಾದ್​​, ಪೃಥ್ವಿ ಭಟ್​​ ತಂದೆ

publive-image

ಪೃಥ್ವಿ ಭಟ್​ದ್ದು ಎನ್ನಲಾದ ಆಡಿಯೋ!

ಹಾಯ್​ ಅಪ್ಪಾ. ಸಾರಿ ನೀವು ಆಲ್​ರೆಡಿ ಎರಡು ದಿನದಿಂದ ಹವ್ಯಕ ಗ್ರುಪ್​ಲ್ಲಿ ಮತ್ತೆ ಬೇರೆ ಬೇರೆ ಗ್ರುಪ್​ಲ್ಲಿ ನರಹರಿ ದೀಕ್ಷಿತ್​ ಸರ್​ ಬಗ್ಗೆ ಮತ್ತೆ ನನ್ನ ಬಗ್ಗೆ ಆಡಿಯೋ ಮೆಸೇಜ್​ ಎಲ್ಲಾ ಕಳಿಸುತ್ತಿದ್ದಿ. ಈ ವಿಷಯದಲ್ಲಿ ನರಹರಿ ದೀಕ್ಷಿತ್​ರದ್ದು ಏನೂ ತಪ್ಪಿಲ್ಲ. ನಾನು ಮೊದಲು ಹೇಳ್ದಂಗೆ, ಈಗಲೂ ಹೇಳ್ತಿದ್ದೀನಿ, ದೀಕ್ಷಿತ್​ ಸರ್​ದು ಎಂಥದ್ದು ತಪ್ಪಿಲ್ಲ. ಮಾರ್ಚ್​ 7ಕ್ಕೆ ದೀಕ್ಷಿತ್​ ಸರ್​ ಮನೆಗೆ ಬಂದಿದ್ದು, ಈ ವಿಷಯ ಬಗ್ಗೆ ಮಾತ್ನಾಡಿದ್ರು. ಆಗ ನಾನು ಅವರ ಎದುರೇ ಮತ್ತೆ ನಿಮ್ಮಗಳ ಎದುರೇ ನನಗೆ ಅಭಿ ಇಷ್ಟ ಅಂತನೇ ಹೇಳಿದ್ದು. ಅವತ್ತು ನಿಮ್ಮ ಮೇಲಿನ ಭಯಕ್ಕೆ ನಾನು ಸುಮ್ಮನಾದೆ, ಆದರೆ ನನ್ನ ಮನಸಿನಲ್ಲಿ ಅಭಿ ಇದ್ದರು- ಪೃಥ್ವಿ ಭಟ್​​, ಯುವ ಗಾಯಕಿ

ಶಿವಪ್ರಸಾದ್​​​ರ ಆಡಿಯೋ ವೈರಲ್ ಆಗ್ತಿದ್ದಂತೆ ಪೃಥ್ವಿ ಭಟ್​ರದ್ದು ಎನ್ನಲಾದ ಆಡಿಯೋ ಹರಿದಾಡ್ತಿದೆ.. ತಂದೆಯ ಆರೋಪಕ್ಕೆ ಮಗಳು ಕೂಡ ಸ್ಪಷ್ಟೀಕರಣ ಕೊಟ್ಟಿದ್ದಾಳೆ. ಒಟ್ಟಾರೆ, ಗಾಯಕಿ ಪೃಥ್ವಿ ಭಟ್​​ ಮದುವೆ ಅಲ್ಲೋಲ ಕಲ್ಲೋಲ ಸೃಷ್ಟಿಸಿದೆ.

ಇದನ್ನೂ ಓದಿ: ಸರಿಗಮಪ ಸಿಂಗರ್ ಪೃಥ್ವಿ ಭಟ್‌ಗೆ ವಶೀಕರಣದ ಮದುವೆ? ಗಾಯಕಿ ತಂದೆ ಸ್ಫೋಟಕ ಆರೋಪ; ಹೇಳಿದ್ದೇನು?

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment