ದೀಪಾವಳಿ; ಖಾಸಗಿ ಬಸ್​ಗಳ ಸುಲಿಗೆ ಆರೋಪ.. RTO ಅಧಿಕಾರಿಗಳಿಂದ ದಿಢೀರ್ ದಾಳಿ

author-image
Bheemappa
Updated On
ದೀಪಾವಳಿ; ಖಾಸಗಿ ಬಸ್​ಗಳ ಸುಲಿಗೆ ಆರೋಪ.. RTO ಅಧಿಕಾರಿಗಳಿಂದ ದಿಢೀರ್ ದಾಳಿ
Advertisment
  • ಬಸ್​ಗಳ ಮೇಲೆ ರೇಡ್ ಮಾಡಿ ಅಧಿಕಾರಿಗಳು ಪರಿಶೀಲನೆ
  • ಹೆಚ್ಚುವರಿ ಆಯುಕ್ತ ಮಲ್ಲಿಕಾರ್ಜುನ ನೇತೃತ್ವದ ತಂಡ ದಾಳಿ
  • ಟಿಕೆಟ್ ದರವನ್ನ ಏಕಾಏಕಿ ಹೆಚ್ಚು ಮಾಡುವಂತಿಲ್ಲ- RTO

ಬೆಂಗಳೂರು: ದೀಪಾವಳಿ ಹಬ್ಬಕ್ಕೆ ಬೆಂಗಳೂರಿನಿಂದ ತಮ್ಮ ತಮ್ಮ ಊರುಗಳಿಗೆ ಹೋಗುವ ಜನರಿಂದ ಖಾಸಗಿ ಬಸ್​ಗಳ ಸುಲಿಗೆ ಆರೋಪ ಹಿನ್ನೆಲೆ‌ ದಿಢೀರ್ ದಾಳಿ ನಡೆಸಲಾಗಿದೆ.

ದೀಪಾವಳಿ ಹಬ್ಬಕ್ಕಾಗಿ ಖಾಸಗಿ ಬಸ್​ಗಳು ಟಿಕೆಟ್ ದರವನ್ನು ಭಾರೀ ಮಟ್ಟದಲ್ಲಿ ಹೆಚ್ಚಿಸಿದ ಕಾರಣ ಆರ್​ಟಿಓ ಅಧಿಕಾರಿಗಳು ಹಾಗೂ ಹೆಚ್ಚುವರಿ ಆಯುಕ್ತರು ದಾಳಿ ನಡೆಸಿ ಪರೀಶಿಲನೆಗೆ ಮುಂದಾಗಿದ್ದಾರೆ. ಬೆಂಗಳೂರಿನ ಆನಂದ್ ರಾವ್ ವೃತ್ತದ ಬಳಿ ಸಾರಿಗೆ ಇಲಾಖೆಯ ಹೆಚ್ಚುವರಿ ಆಯುಕ್ತ ಮಲ್ಲಿಕಾರ್ಜುನ ನೇತೃತ್ವದಲ್ಲಿ ಬಸ್​ಗಳನ್ನ ಪರಿಶೀಲನೆ ಮಾಡಲಾಗಿದೆ.

ಇದನ್ನೂ ಓದಿ:INDW vs NZW; ಮೈದಾನದಲ್ಲಿ ಅತ್ಯದ್ಭುತ ಕ್ಯಾಚ್ ಹಿಡಿದ ರಾಧ.. ಕ್ರಿಕೆಟ್ ಲೋಕ ಫುಲ್ ಫಿದಾ!

publive-image

ಇನ್ನು ಪ್ರಯಾಣಿಕರಿಗೆ ಹೊರೆಯಾಗುವಂತೆ ಟಿಕೆಟ್ ದರವನ್ನ ಏಕಾಏಕಿ ಹೆಚ್ಚು ಮಾಡುವಂತಿಲ್ಲ ಎಂದು ಸಾರಿಗೆ ಇಲಾಖೆ ಹೇಳಿದೆ. ಎಚ್ಚರಿಕೆ ನಡುವೆಯೂ ಟಿಕೆಟ್ ದರ ಹೆಚ್ಚಿಸಿದ್ದ ಖಾಸಗಿ ಬಸ್​ಗಳಿಗೆ ನೋಟಿಸ್​ ನೀಡಲಾಗಿದೆ. ಚಾಲಕನ ಮಾಹಿತಿ, ಲೈಸನ್ಸ್, ಎಫ್​​​ಸಿ ಸೇರಿದಂತೆ ಹಲವು ಮಾಹಿತಿ ಪಡೆದುಕೊಂಡು ಚೆಕ್ ರಿಪೋರ್ಟ್ ಅನ್ನು ಅಧಿಕಾರಿಗಳು ನೀಡಿದ್ದಾರೆ. ಎಷ್ಟು ಜನ ಪ್ರಯಾಣಿಕರು ಹಾಗೂ ಟಿಕೆಟ್ ದರ ಎಷ್ಟು ಎಂಬುದೆಲ್ಲಾ ಮಾಹಿತಿಯನ್ನು ಅಧಿಕಾರಿಗಳು ಸಂಗ್ರಹಿಸಿಕೊಂಡಿದ್ದಾರೆ. ಕೆಲ ಪ್ರಯಾಣಿಕರಿಂದ ಟಿಕೆಟ್​ಗೆ ಎಷ್ಟು ಹಣ ನೀಡಿದ್ದೀರಿ ಎಂಬುವ ಮಾಹಿತಿಯನ್ನು ಪಡೆದುಕೊಂಡು ಫೋನ್​ನಲ್ಲಿ ಫೋಟೋ ಕೂಡ ತೆಗೆದುಕೊಂಡಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment