ಗ್ರಾಹಕರಿಗೆ ಬಿಗ್​ ಶಾಕ್​​.. ಯುಗಾದಿ ಹಬ್ಬಕ್ಕೆ ಬಸ್​ ಟಿಕೆಟ್​ ದರ ದಿಢೀರ್​ ಏರಿಕೆ; ಎಷ್ಟು ಗೊತ್ತಾ?

author-image
Veena Gangani
Updated On
ಇಂದು ಸಿಲಿಕಾನ್ ಸಿಟಿಗೆ ಸಾರಥಿಗಳ ಅಷ್ಟದಿಗ್ಬಂಧನ.. ಪ್ರತಿಭಟನಾಕಾರರಿಂದ ಮೆರವಣಿಗೆ, ಫ್ರೀಡಂಪಾರ್ಕ್​ನಲ್ಲಿ ಶಕ್ತಿ ಪ್ರದರ್ಶನ..!
Advertisment
  • ಸಾಲು ಸಾಲು ರಜೆ ಅಂತ ಮನೆ ಕಡೆ ಹೊಗಲು ಸಜ್ಜಾದವರಿಗೆ ಅಚ್ಚರಿ
  • ಬ್ಯಾಕ್ ಟು ಬ್ಯಾಕ್ ರಜೆ ಬಂದಿದ್ದಕ್ಕೆ ಟ್ರಿಪ್​ಗೂ ಮಾಡಿದ ಸಾರ್ವಜನಿಕರು
  • ಹಬ್ಬಗಳ ಬಂತು ಅಂದರೆ ಖಾಸಗಿ ಬಸ್ ಮಾಲೀಕರಿಗೆ ಭರ್ಜರಿ‌ ಲಾಟರಿ

ಬೆಂಗಳೂರು: ಸಾಲು ಸಾಲು ರಜೆ ಬಂತು ಅಂದರೆ ಖಾಸಗಿ ಬಸ್​​ಗಳಿಗೆ ಹಬ್ಬವೋ ಹಬ್ಬ. ಎರಡ್ಮೂರು ಪಟ್ಟು ದರ ಏರಿಕೆ ಮಾಡಿ, ಜನರಿಂದ ಸುಲಿಗೆಗೆ ಇಳಿದು ಬಿಡ್ತಾರೆ ಬಸ್​ ಮಾಲೀಕರು. ಈಗ ಮತ್ತದೇ ಚಾಳಿ ಕಂಟಿನ್ಯೂ ಆಗಿದೆ.‌ ಯುಗಾದಿ, ರಂಜಾನ್​ ಅಂತ ಸಾಲು ಸಾಲು ರಜೆಯ ಸಿಹಿ ಬೆಲ್ಲದ ನಡುವೆ, ರೇಟ್ ಹೈಕ್‌ ಕಹಿ ಜನರ ಪಾಲಾಗಿದೆ.

publive-image

ಹಬ್ಬಗಳ ಬಂತು ಅಂದರೆ ಖಾಸಗಿ ಬಸ್ ಮಾಲೀಕರಿಗೆ ಭರ್ಜರಿ‌ ಲಾಟರಿ. ಸಿಕ್ಕಿದ್ದೆ ಸಿರೂಂಡೆ ಅಂತ ಜನರಿಂದ ಸುಲಿಗೆಗೆ ಇಳಿದು ಬಿಡ್ತಾರೆ. ರಜೆ ಅಂತ ಮನೆ ಕಡೆ ಹೋರಟವರ ಬಳಿ ಹಗಲು ದರೋಡೆ ಶುರು ಮಾಡ್ತಾರೆ. ಹೀಗೆ ಅವಕಾಶ ಸಿಕ್ಕಗಾಲೆಲ್ಲ ದರ ಏರಿಸ್ತಿದ್ದ ಪ್ರವೈಟ್ ಬಸ್ ಮಾಲೀಕರು ಹೊಸ ಸಂತ್ಸರದ ಹೊಸ್ತಿಲಿನಲ್ಲಿಯೇ ಮತ್ತದೇ ಹಳೆ ಚಾಳಿ ಶುರು ಮಾಡಿದ್ದಾರೆ. ಅದೇ ರೇಟ್ ಹೈಕ್ ರಾಗಕ್ಕೆ ತಾಳ ಹಾಕಿದ್ದಾರೆ.

ಇದನ್ನೂ ಓದಿ:ಪಿಯುಸಿ ಆದ್ಮೇಲೆ ಮುಂದೇನು? ನಿಮ್ಮ ಪ್ರಶ್ನೆಗೆ ಎಡ್ಯುವರ್ಸ್ EXPOದಲ್ಲಿ ಸಿಗಲಿದೆ ಉತ್ತರ!

ಯುಗಾದಿ, ರಂಜಾನ್, ಸಂಡೆ ಹೀಗೆ​ ಸಾಲು ಸಾಲು ರಜೆಯಿದೆ ಅಂತ ಮನೆ ಕಡೆ ಹೊಗಲು ಸಜ್ಜಾದವರಿಗೆ ಖಾಸಗಿ ಬಸ್ ದರ ಏರಿಕೆ ಮಾಡಿ ಶಾಕ್ ಕೊಟ್ಟಿದೆ. ಏಪ್ರಿಲ್ 7ರಂದು ಭಾನುವಾರ. 9ರಂದು ಮಂಗಳವಾರ ಯುಗಾದಿ ರಜೆ ಬರುತ್ತೆ. ಹೀಗಾಗಿ ಸೋಮವಾರ ಒಂದು ರಜೆ ಹಾಕಿದ್ರೆ ಮೂರು ದಿನ ರಜೆ ಆಯ್ತು. ಅಲ್ಲದೆ ಯುಗಾದಿ ರಜೆ ಒಂದು ದಿನ‌ ಬಿಟ್ಟು ಗುರುವಾರ ರಂಜಾನ್ ರಜೆ ಬರುತ್ತೆ. ಅಲ್ಲದೆ 13 ರಂದು ಎರಡನೇ ಶನಿವಾರ ರಜೆ ಹಾಗೂ 14 ರಂದು ಮತ್ತೆ ಭಾನುವಾರ ರಜೆ‌ ಇದೆ.‌ ಅಂದ್ರೆ ಏಪ್ರಿಲ್ 7ರಿಂದ ಏಪ್ರಿಲ್​ 14ರವರೆಗೆ ಬರೊಬ್ಬರಿ 5 ದಿನದ ರಜೆಗಳು ಸಿಗ್ತಾವೆ. ಹೀಗಾಗಿ ಕೆಲವರಂತು ಇಂದಿನಿಂದಲೇ ವಾರಪೂರ್ತಿ ಆಫೀಸ್​​ಗೆ ರಜೆ ಹಾಕಲು ಪ್ಲಾನ್‌ ಮಾಡ್ಕೊಂಡು ಬೆಂಗಳೂರು ಬಿಟ್ಟು ಊರಿಗೆ ಹೊರಡ್ತಿದ್ದಾರೆ.‌ ಅಲ್ಲದೆ ವಿದ್ಯಾರ್ಥಿಗಳಿಗೆ ರಜೆ ಶುರುವಾದ ಕಾರಣ ಮಕ್ಕಳ ಜೊತೆ ಒಂದೊಳ್ಳೆ ಟ್ರಿಪ್​ ಪ್ಲಾನ್​ಗೂ ಬೆಂಗಳೂರಿಗರು ತಯಾರಿ ನಡೆಸ್ತಿದ್ದಾರೆ. ಆದ್ರೆ, ತಯಾರಿಯ ವೇಳೆ ಬಸ್ ಟಿಕೆಟ್ ಬುಕ್ ಮಾಡಲು ಮುಂದಾದ್ರೆ ದರ ಏರಿಕೆಯ ಶಾಕ್ ಎದುರಾಗಿದೆ. ಒಂದಲ್ಲ ಎರಡಲ್ಲ ಒನ್​ ಟು ಡಬಲ್​ ಅಲ್ಲ ತ್ರಿಬಲ್​​ ರೇಟ್ ಹೈಕ್ ಮಾಡಿದ್ದಾರೆ ಖಾಸಗಿ ಬಸ್ ಮಾಲೀಕರು.

publive-image

ಬೆಂಗಳೂರು-ಶಿವಮೊಗ್ಗ
ಸಾಮಾನ್ಯ ದಿನದ ದರ ₹450-₹600
ಇವತ್ತಿನ ಟಿಕೆಟ್ ದರ ₹950- ₹1250
===
ಬೆಂಗಳೂರು-ಮಂಗಳೂರು
ಸಾಮಾನ್ಯ ದಿನದ ದರ ₹500- ₹1000
ಇವತ್ತಿನ ಟಿಕೆಟ್ ದರ ₹1000- ₹1400
====
ಬೆಂಗಳೂರು - ಚಿಕ್ಕಮಗಳೂರು
ಸಾಮಾನ್ಯ ದಿನದ ದರ ₹550 ₹600
ಇವತ್ತಿನ ಟಿಕೆಟ್ ದರ ₹1100-₹1300
==========
ಬೆಂಗಳೂರು-ಧಾರವಾಡ
ಸಾಮಾನ್ಯ ದಿನದ ದರ ₹650 ₹800
ಇವತ್ತಿನ ಟಿಕೆಟ್ ದರ ₹1350-₹1750
=======
ಬೆಂಗಳೂರು - ಬೀದರ್
ಸಾಮಾನ್ಯ ದಿನದ ದರ ₹850 ₹1200
ಇವತ್ತಿನ ಟಿಕೆಟ್ ದರ ₹1600-₹1800

publive-image

ಹೀಗೆ ಮನಸ್ಸಿಗೆ ಬಂದಂತೆ ದರ ಏರಿಕೆ‌ ಮಾಡಿದ್ರು ಸಾರಿಗೆ ಇಲಾಖೆ ಮಾತ್ರ ಪದೇ ಪದೇ ನಿರ್ಲಕ್ಷ್ಯ ಮಾಡ್ತೀರೋದು ಜನರ ಆಕ್ರೋಶಕ್ಕೆ ಕಾರಣವಾಗಿದೆ. ಇನ್ನು ಈ ದರ ಏರಿಕೆಯ ಬಗ್ಗೆ ಖಾಸಗಿ ಬಸ್ ಮಾಲೀಕರ ಒಕ್ಕೂಟ ಸಮರ್ಥನೆಯನ್ನೂ ನೀಡಿದೆ. ಇನ್ನೊಂದೆಡೆ ಖಾಸಗಿ ಬಸ್​ಗಳ ಸುಲಿಗೆಗೆ ಬ್ರೇಕ್​ ಹಾಕಲು ನಾಲ್ಕು ನಿಗಮಗಳಿಂದ 2227 ಹೆಚ್ಚವರಿ ವಿಶೇಷ ಬಸ್​​ಗಳನ್ನ ರಸ್ತೆಗಳಿಸಲು ಸಾರಿಗೆ ಇಲಾಖೆ ಮುಂದಾಗಿದೆ. ಒಟ್ಟಿನಲ್ಲಿ ರಜೆ‌ ಬಂದಾಗ ಪದೇ ಪದೇ ರೇಟ್​ ಡಬಲ್ ಆಗ್ತಾಯಿದ್ದು, ಇನ್ನಾದ್ರೂ ಸಾರಿಗೆ ಇಲಾಖೆ ಈ ಹಗಲು ದರೋಡೆಗೆ ಬ್ರೇಕ್ ಹಾಕಬೇಕಿದೆ. ಇತ್ತ ಟಿಕೆಟ್ ದರ ದುಪ್ಪಟ್ಟಾದ್ರು ನಾವು ಊರಿಗೆ ಹೋಗೋದು ತಪ್ಪಿಸಲ್ಲ ಅಂತ ಜನ ಬೈದುಕೊಂಡೆ ಬಸ್​ ಹತ್ತುವ ಕಾರ್ಯವೂ ಚಾಲ್ತಿಯಲ್ಲಿದ್ದು, ಇದಕ್ಕೆ ಸಾಕ್ಷಿ ಖಾಸಗಿ ಬಸ್​ಗಳು ಬಹುತೇಕ ಭರ್ತಿಯಾಗಿರುವುದೇ ಆಗಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment