/newsfirstlive-kannada/media/post_attachments/wp-content/uploads/2025/04/Itally-PM-prison-1.jpg)
ಮೊಟ್ಟ ಮೊದಲ ಬಾರಿಗೆ ಪ್ರಧಾನಿ ಜಾರ್ಜಿಯಾ ಮೆಲೋನಿ ಅವರ ಸರ್ಕಾರ ಇಟಲಿಯಲ್ಲಿ ಕಾರಾಗೃಹದಲ್ಲಿರುವ ಕೈದಿಗಳಿಗೂ ಖಾಸಗಿ ಕೋಣೆಯನ್ನು ತೆರೆದಿದೆ. ಇನ್ಮುಂದೆ ಈ ಬಂಧಿಖಾನೆಯಲ್ಲಿ ಕೈದಿಗಳ ಸಂಬಂಧಿಕರು, ಆಪ್ತರು ಯಾರೇ ಬಂದರೂ ಇದೇ ಕೋಣೆಯಲ್ಲಿ ಆತ್ಮೀಯವಾಗಿ ಚರ್ಚೆ ನಡೆಸಬಹುದು.
ಇಟಲಿ ಮಧ್ಯ ಉಂಬ್ರಿಯಾ ಪ್ರದೇಶದ ಸೆಂಟ್ರಲ್ ಜೈಲಿನಲ್ಲಿ ದೇಶದ ಇತಿಹಾಸದಲ್ಲೇ ಮೊದಲ ಬಾರಿಗೆ ಖಾಸಗಿ ಕೋಣೆಯಲ್ಲಿ ಸ್ಥಾಪಿಸಲಾಗಿದೆ. ಕೈದಿಗಳನ್ನು ಭೇಟಿ ಮಾಡಲು ಹೊರಗಿನಿಂದ ಅವರ ಆಪ್ತರು ಜೈಲಿಗೆ ಆಗಮಿಸಿದರೆ ಅವರಿಗೆ ಈ ಕೋಣೆಯೊಳಗೆ ಹೋಗಲು ಅನುಮತಿ ನೀಡಲಾಗುತ್ತದೆ.
ಇತ್ತೀಚೆಗೆ ಇಟಲಿ ಕೋರ್ಟ್ ಕೈದಿಗಳಿಗೂ ಆತ್ಮೀಯವಾದ ಸಭೆ ಮಾಡುವುದು ಸಾಂವಿಧಾನಕ ಹಕ್ಕು. ಹೀಗಾಗಿ ಕಾರಾಗೃಹದಲ್ಲಿ ಇದಕ್ಕೆ ಅವಕಾಶ ನೀಡಬೇಕು ಅನ್ನೋ ಐತಿಹಾಸಿಕ ತೀರ್ಪು ನೀಡಿತ್ತು. ನ್ಯಾಯಾಲಯದ ಆಜ್ಞೆಯ ಹಿನ್ನೆಲೆಯಲ್ಲಿ ಇಟಲಿ ಸರ್ಕಾರ ಇದೇ ಮೊದಲ ಬಾರಿಗೆ ಈ ಖಾಸಗಿ ಕೋಣೆಯ ಸೇವೆಯನ್ನು ಆರಂಭ ಮಾಡಿದೆ.
ಇದನ್ನೂ ಓದಿ: ಈ ಸ್ಕೂಟರ್ಗೆ ಚಾಲಕನೇ ಬೇಕಾಗಿಲ್ಲ.. ಮಾರುಕಟ್ಟೆಗೆ ಬಂದ ಹೊಸ ಗಾಡಿ ನೋಡಿ ಎಲ್ಲರೂ ಶಾಕ್! VIDEO
ಉಂಬ್ರಿಯಾ ಸೆಂಟ್ರಲ್ ಜೈಲಿನಲ್ಲಿ ಕೈದಿಯ ಪತ್ನಿಯರು ಅಥವಾ ಲೈಫ್ ಪಾರ್ಟನರ್‌ಗಳು ಬಂದ್ರೆ ತನ್ನ ಪತಿಯನ್ನು ಭೇಟಿ ಮಾಡಲು ಈ ವಿಶೇಷ ಸೌಲಭ್ಯವನ್ನು ನೀಡಲಾಗುತ್ತಿದೆ. ಪತಿ, ಪತ್ನಿಯರು ಖಾಸಗಿಯಾಗಿ ಭೇಟಿ ಆಗುವುದು ಅವರ ಹಕ್ಕು ಎಂದು ಕೋರ್ಟ್ ಆದೇಶ ನೀಡಿದ ಹಿನ್ನೆಲೆಯಲ್ಲಿ ಇಟಲಿ ಸರ್ಕಾರ ಈ ಕ್ರಮಕ್ಕೆ ಮುಂದಾಗಿದೆ.
ಉಂಬ್ರಿಯಾ ಜೈಲಿನಲ್ಲಿ ಈ ಪ್ರಯೋಗ ಮಾಡಲಾಗಿದ್ದು, ನಂತರದಲ್ಲಿ ಉಳಿದ ಸೆಂಟ್ರಲ್ ಜೈಲಿಗಳಿಗೂ ವಿಸ್ತರಣೆ ಮಾಡಲು ಜೈಲಾಧಿಕಾರಿಗಳು ಚಿಂತನೆ ನಡೆಸಿದ್ದಾರೆ. ಯುರೋಪಿನ ಫ್ರಾನ್ಸ್, ಜರ್ಮನಿ, ಸ್ಪೇನ್, ನೆದರ್ಲ್ಯಾಂಡ್ಸ್, ಸ್ವೀಡನ್ ಕಾರಾಗೃಹಗಳಲ್ಲಿ ಈ ರೀತಿಯ ಯೋಜನೆ ಈಗಾಗಲೇ ಜಾರಿಯಲ್ಲಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ