ಸರ್ಕಾರದ ಆದೇಶ ಖಾಸಗಿ ಶಾಲೆಗಳಿಗೆ ಸಂಕಷ್ಟ ಆಗಲಿದೆಯಾ?
ಗೊಂದಲದ ಗೂಡಾದ ಶಾಲೆಗಳ ಮಾನ್ಯತೆ ನವೀಕರಣ ವಿಚಾರ
ಕೋರ್ಟ್ ಮೊರೆ ಹೋಗಲು ಖಾಸಗಿ ಶಾಲೆಗಳ ಒಕ್ಕೂಟ ನಿರ್ಧಾರ
ಬೆಂಗಳೂರು: ಗೊಂದಲದ ಗೂಡಾಗಿರುವ ಶಾಲೆಗಳ ಮಾನ್ಯತೆ ನವೀಕರಣ ವಿಚಾರಕ್ಕೆ ಸಂಬಂಧ ಪಟ್ಟಂತೆ ಶಾಲಾ ಶಿಕ್ಷಣ ಇಲಾಖೆ ವಿರುದ್ಧ ಕೋರ್ಟ್ ಮೊರೆ ಹೋಗಲು ಕೃಪಾ ಖಾಸಗಿ ಶಾಲೆಗಳ ಒಕ್ಕೂಟ ನಿರ್ಧಾರ ಮಾಡಿದೆ.
ಈಗಾಗಲೇ 10 ವರ್ಷಗಳ ಅವಧಿಯವರೆಗೆ ಖಾಸಗಿ ಶಾಲೆಗಳಿಗೆ ಮಾನ್ಯತೆ ನವೀಕರಣ ಎಂದು ಶಾಲಾ ಶಿಕ್ಷಣ ಇಲಾಖೆ ಆದೇಶ ನೀಡಿದೆ. ನಿಯಮಗಳಿಗೆ ತಿದ್ದುಪಡಿ ತಂದು ಸರ್ಕಾರ ಸುತ್ತೋಲೆ ಹೊರಡಿಸಿದೆ. 10 ವರ್ಷದ ಅವಧಿಯವರೆಗೆ ಶಾಲೆಗಳಿಗೆ ಮಾನ್ಯತೆ ಆದೇಶವನ್ನು ಖಾಸಗಿ ಶಾಲೆ ಒಕ್ಕೂಟ ಸ್ವಾಗತಿಸಿದೆ. ಆದರೆ 2018ರ ಹಿಂದಿನ ಶಾಲೆಗಳಿಗೆ ಈ ಆದೇಶ ಅನ್ವಯ ಸಂಕಷ್ಟ ತರಲಿದೆ ಎಂದು ಕೃಪಾ ಸಂಘಟನೆ ಅಧ್ಯಕ್ಷ ಲೋಕೇಶ್ ತಾಳಿಕಟ್ಟೆ ತಿಳಿಸಿದ್ದಾರೆ.
ಇದನ್ನೂ ಓದಿ: SSLC ಪಾಸ್ ಆದ ಅಭ್ಯರ್ಥಿಗಳಿಗೆ ಅದೃಷ್ಟ.. ಕಾನ್ಸ್ಟೆಬಲ್ ಹುದ್ದೆಗಳಿಗೆ ಅರ್ಜಿ ಆಹ್ವಾನ, ಮಹಿಳೆಯರಿಗೂ ಅವಕಾಶ
ಸುಮಾರು 20 ಸಾವಿರ ಶಾಲೆಗಳಿಗೆ ಸಂಕಷ್ಟ ತರಲಿದ್ದು ಈ ಹಿಂದೆ ಶಾಲೆ ಪ್ರಾರಂಭಿಸಲು ಯಾವುದೇ ಷರತ್ತು ಇರಲಿಲ್ಲ. ಆದ್ರೆ ಇದೀಗ ಹೊಸ ತಿದ್ದುಪಡಿಯಲ್ಲಿ ಕೆಲ ಬದಲಾವಣೆ ಮಾಡಲಾಗಿದೆ. ಇದಕ್ಕೆ ಕೃಪಾ ಖಾಸಗಿ ಶಾಲೆಗಳ ಒಕ್ಕೂಟದ ವಿರೋಧವಿದೆ. ಶಾಲೆಗಳ ಆಟದ ಮೈದಾನ, ಕೊಠಡಿ ವಿಸ್ತೀರ್ಣ, ಫೈರ್ ಸೇಫ್ಟಿ, ಕಟ್ಟಡದ ಸೇಫ್ಟಿ ಹಾಗೂ ಶಾಲಾ ಉದ್ದೇಶಕ್ಕೆ ಭೂ ಪರಿವರ್ತನೆ ಈಗ ಪಡೆಯಲು ಸಾಧ್ಯವಿಲ್ಲ. ಹೀಗಾಗಿ ನಾವು ಇದರ ವಿರುದ್ಧ ಕೋರ್ಟ್ ಮೊರೆ ಹೋಗುತ್ತಿದ್ದೇವೆ ಎಂದು ಹೇಳಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ