ಖಾಸಗಿ ಶಾಲೆಗಳ ಪುನಾರಂಭಕ್ಕೂ ಕೊರೊನಾ ಕಂಟಕ.. ಪೋಷಕರಿಗೆ ಖಡಕ್ ಸೂಚನೆ

author-image
Veena Gangani
Updated On
ಮೇ 29ರಿಂದ ಶಾಲೆಗಳು ಪುನರ್ ಆರಂಭ ಆಗೋದು ಡೌಟ್.. ಪೋಷಕರು ಓದಲೇಬೇಕಾದ ಸ್ಟೋರಿ!
Advertisment
  • ಮೇ 28ರಿಂದ ಶಾಲೆಗಳ ಆರಂಭ.. ಕೊರೊನಾ ಆತಂಕ
  • ಮಕ್ಕಳು, ಸಿಬ್ಬಂದಿ ಕಡ್ಡಾಯ ಮಾಸ್ಕ್ ಧರಿಸುವಂತೆ ಸೂಚನೆ
  • ಪೋಷಕರಿಗೆ ಶಾಲೆಗಳಿಗಳಿಂದ ಕೊರೊನಾ ಬಗ್ಗೆ ‌ಮಾಹಿತಿ

ದಿನೇ ದಿನೇ ಕರ್ನಾಟಕದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಿದೆ. ಅದರಲ್ಲೂ ಬೆಂಗಳೂರಿನಲ್ಲೇ 32 ಕೇಸ್​ಗಳು ದಾಖಲಾಗಿವೆ. ಅಲ್ಲದೇ ರಾಜ್ಯದಲ್ಲಿ ಕೊರೊನಾ ವೈರಸ್​ಗೆ ಮೊದಲ ಬಲಿ ಬೆನ್ನಲ್ಲೇ ಸರ್ಕಾರ ಹೈ ಅಲರ್ಟ್ ಘೋಷಣೆ ಮಾಡಿದೆ.

ಇದನ್ನೂ ಓದಿ:ಎಂಟು ದಿನ ಮುಂಚೆಯೇ ಮುಂಗಾರು ಎಂಟ್ರಿ.. ಕರ್ನಾಟಕಕ್ಕೆ ಮುಂಗಾರಿನ ಅಭಿಷೇಕ ಯಾವಾಗ..?

ಕೊರೊನಾ ಸಂಖ್ಯೆಗಳು ಹೆಚ್ಚಾಗುತ್ತಿರೋ ಸಂದರ್ಭದಲ್ಲಿ ಇದರ ಶಾಲೆಗಳು ಪುನಾರಂಭ ಆಗುತ್ತಿರುವುದು ಆತಂಕಕ್ಕೆ ಕಾರಣವಾಗಿದೆ. ಮೇ 28ರಿಂದ ಖಾಸಗಿ ಶಾಲೆಗಳು ಪುನಾರಂಭ ಆಗುತ್ತಿವೆ.

publive-image

ಹೀಗಾಗಿ ಖಾಸಗಿ ಶಾಲೆಗಳು ಪೋಷಕರಿಗೆ ಕೊರೊನಾ ಬಗ್ಗೆ ‌ಮಾಹಿತಿ ನೀಡುತ್ತಿದ್ದಾರೆ. ಮಕ್ಕಳಿಗೆ ‌ಮಾಸ್ಕ್ ಧರಿಸಿ ಶಾಲೆಗೆ ಕಳುಹಿಸುವಂತೆ ಪೋಷಕರಿಗೆ ಸೂಚನೆ ನೀಡಲಾಗುತ್ತಿದೆ. ಈಗಾಗಲೇ ಖಾಸಗಿ ಶಾಲೆಗಳು ಕಡ್ಡಾಯವಾಗಿ ‌ಮಾಸ್ಕ್ ಧರಿಸುವಂತೆ ಮಕ್ಕಳಿಗೆ ಸೂಚನೆ‌ ನೀಡಲಾಗಿದೆ. ಅಷ್ಟೇ ಅಲ್ಲದೇ ಶಾಲೆಗೆ ಬರುವ ಮಕ್ಕಳು ಸಿಬ್ಬಂದಿಗಳು ಕಡ್ಡಾಯವಾಗಿ ಮಾಸ್ಕ್ ಧರಿಸುವಂತೆ ಸೂಚನೆ ಕೊಟ್ಟಿದೆ.

publive-image

ಇದೇ 28ರಿಂದ ಶಾಲೆಗಳು ಪುನಾರಂಭಗೊಳ್ಳುತ್ತಿವೆ. ನಾವು ಈಗಾಗಲೇ ಶಾಲೆಗಳಿಗೆ ಕೋವಿಡ್ ಮಾರ್ಗಸೂಚಿಗಳನ್ನು ಪಾಲಿಸಲು ಸೂಚನೆ ಕೊಟ್ಟಿದ್ದೇವೆ. ಕೋವಿಡ್ ಬಗ್ಗೆ ನಾವೇ ಮುಂಜಾಗ್ರತಾ ಕ್ರಮಗಳನ್ನು ತೆಗೆದುಕೊಂಡಿದ್ದೇವೆ ಎಂದು ಕೃಪಾ ಸಂಘಟನೆ ಅಧ್ಯಕ್ಷ ಲೋಕೇಶ್ ತಾಳಿಕಟ್ಟೆ ಮಾಹಿತಿ ನೀಡಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment