/newsfirstlive-kannada/media/post_attachments/wp-content/uploads/2024/10/Oviya.jpg)
ರಾಕಿಂಗ್ ಸ್ಟಾರ್ ಯಶ್ ನಟನೆಯ ಕಿರಾತಕ ಸಿನಿಮಾದ ನಟಿಯ ಖಾಸಗಿ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಸೋರಿಕೆಯಾಗಿದೆ. ಸದ್ಯ ಈ ವಿಡಿಯೋ ಭಾರೀ ವಿವಾದ ಸೃಷ್ಟಿಸಿದೆ. ಇನ್ಸ್ಟಾಗ್ರಾಂನಲ್ಲಿ ಈ ವಿಡಿಯೋ ಹರಿದಾಡುತ್ತಿದ್ದು, ಅನೇಕರು ಇದನ್ನು ಡೀಪ್ಫೇಕ್ ಎಂದು ಹೇಳುತ್ತಿದ್ದಾರೆ.
ಕಿರಾತಕ ಸಿನಿಮಾ ನಟಿ ಓವಿಯಾ ತಮಿಳಿನ ಬಿಗ್ ಬಾಸ್ ಸೀಸನ್ 1ರಲ್ಲೀ ಭಾಗವಹಿಸಿದ್ದರು. ಆದರೀಗ ನಟಿಯ ಖಾಸಗಿ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ. ಕೊಂಜಮ್ ಗುಡ್ ಬಾಯ್ ಎಂಬ ಇನ್ಸ್ಟಾ ಬಳಕೆದಾರ ಈ ವಿಡಿಯೋವನ್ನು ಹಂಚಿಕೊಂಡಿದ್ದಾನೆ. ಇದನ್ನು ಕಂಡು ನಟಿ ಓವಿಯಾ ಪ್ರತಿಕ್ರಿಯಿಸಿದ್ದಾರೆ.
ಇದನ್ನೂ ಓದಿ: ಕಿಚ್ಚ ಸುದೀಪ್ ಬಿಗ್ಬಾಸ್ಗೆ ವಿದಾಯ; ಅಭಿಮಾನಿಗಳಿಗೆ ಭಾರೀ ಬೇಸರ, ಹೇಳ್ತಿರೋದು ಏನು..?
#Oviya replies on instagram? #OviyaLeakedpic.twitter.com/6imndnvCX6
— S.Harsha Vardhan (@Harsha3633) October 12, 2024
ಕೊಂಜಮ್ ಗುಡ್ ಬಾಯ್ ಎಂಬ ಖಾತೆದಾರ ಇನ್ನು 17 ಸೆಕೆಂಡ್ನ ವಿಡಿಯೋ ಇದೆ ಎಂದು ಬರೆದುಕೊಂಡಿದ್ದಾನೆ. ಅದಕ್ಕೆ ನಟಿ ಓವಿಯಾ ‘ಎಂಜಾಯ್’ ಎಂದು ಕಾಮೆಂಟ್ ಮಾಡಿದ್ದಾರೆ.
ಮತ್ತೋರ್ವ ಇನ್ನು ಲೆಂಥ್ ಇರುವ ವಿಡಿಯೋ ಇದೆಯಾ ಎಂದು ಕಾಮೆಂಟ್ ಮಾಡಿದ್ದಾನೆ. ಅದಕ್ಕೆ ನಟಿ ‘ನೆಕ್ಸ್ಟ್ ಟೈಮ್ ಬ್ರೋ’ ಎಂದು ಕಾಮೆಂಟ್ ಮಾಡಿದ್ದಾರೆ.
ಇದನ್ನೂ ಓದಿ: ಗೃಹಲಕ್ಷ್ಮೀ ಹಣದಿಂದ ಗ್ರಂಥಾಲಯ ನಿರ್ಮಾಣ! ಆಧುನಿಕ ಸಾವಿತ್ರಿಬಾಯಿ ಫುಲೆಯಾದ ಬೆಳಗಾವಿ ಮಲ್ಲವ್ವ!
ಓವಿಯಾ ದಕ್ಷಿಣ ಭಾರತದ ನಟಿ. ಆಕೆಯ ನಿಜವಾದ ಹೆಸರು ಹೆಲೆನ್ ನೆಲ್ಸನ್. ಮಲಯಾಳಂ, ತಮಿಳು ಮತ್ತು ಕನ್ನಡ ಸಿನಿಮಾದಲ್ಲಿ ಕೆಲಸ ಮಾಡಿದ್ದಾರೆ. 2007ರಲ್ಲಿ ಮಲಯಾಳಂನಲ್ಲಿ ಮೂಡಿ ಬಂದ ಕಾಂಗರೂ ಸಿನಿಮಾದಲ್ಲಿ ಮೊದಲ ಬಾರಿಗೆ ನಟಿಸಿದರು. ಅದಾದ ಬಳಿಕ ಒಂದೊಂದೇ ಸಿನಿಮಾದಲ್ಲಿ ನಟಿಸುತ್ತಾ ಬಂದಿದ್ದಾರೆ. ರಿಯಾಲಿಟಿ ಶೋದಲ್ಲೀ ಭಾಗವಹಿಸಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ