newsfirstkannada.com

‘3 ವರ್ಷದಲ್ಲಿ ಕೇವಲ 21 ಮಂದಿಗೆ ಸರ್ಕಾರಿ ನೌಕರಿ ಕೊಟ್ಟ ಬಿಜೆಪಿ ಗವರ್ನ್​ಮೆಂಟ್​​’- ಪ್ರಿಯಾಂಕಾ ಗಾಂಧಿ ಕಿಡಿ

Share :

12-06-2023

    'ಬಿಜೆಪಿಗೆ ಕರ್ನಾಟಕ ಜನರಿಂದ ತಕ್ಕ ಪಾಠ'

    'ಮಧ್ಯಪ್ರದೇಶದಲ್ಲೂ ಅದೇ ರಿಪೀಟ್​ ಆಗಲಿ'

    ಬಿಜೆಪಿ ವಿರುದ್ಧ ಪ್ರಿಯಾಂಕಾ ಗಾಂಧಿ ವಾದ್ರಾ ಕಿಡಿ

ಜಬಲ್ಪುರ್: ಇತ್ತೀಚೆಗೆ ನಡೆದ ಕರ್ನಾಟಕ ರಾಜ್ಯ ವಿಧಾನಸಭಾ ಚುನಾವಣೆಯಲ್ಲಿ ಇಡೀ ರಾಜ್ಯಾದ್ಯಂತ ಎಐಸಿಸಿ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ಅಬ್ಬರದ ಪ್ರಚಾರ ಮಾಡಿದ್ರು. ಈ ಮೂಲಕ ರಾಜ್ಯದಲ್ಲಿ ಕಾಂಗ್ರೆಸ್​​ ಸರ್ಕಾರವನ್ನು ಅಧಿಕಾರಕ್ಕೆ ತರಲು ಶ್ರಮ ಹಾಕಿದ್ರು. ಈ ಬೆನ್ನಲ್ಲೇ ವರ್ಷಾಂತ್ಯಕ್ಕೆ ನಡೆಯಲಿರೋ ಮಧ್ಯಪ್ರದೇಶ ವಿಧಾನಸಭಾ ಚುನಾವಣೆ ಗೆಲ್ಲಿಸಲು ಪ್ರಿಯಾಂಕಾ ಗಾಂಧಿಯವರು ಮುಂದಾಗಿದ್ದಾರೆ. ಇದರ ಭಾಗವಾಗಿ ಇಂದು ಜಬಲ್ಪುರದಲ್ಲಿ ಪ್ರಚಾರ ಶುರು ಮಾಡಿದ್ದಾರೆ.

ಪ್ರಚಾರಕ್ಕೆ ಚಾಲನೆ ನೀಡಿ ಮಾತಾಡಿದ ಪ್ರಿಯಾಂಕಾ ಗಾಂಧಿ, ಮಧ್ಯಪ್ರದೇಶ ಸಿಎಂ ಶಿವರಾಜ್ ಸಿಂಗ್ ಚೌಹಾಣ್ ಸರ್ಕಾರ ಭ್ರಷ್ಟಾಚಾರದಲ್ಲಿ ಮುಳುಗಿದೆ. ಚುನಾವಣೆಗೆ ಮುನ್ನ ಲಕ್ಷ ಲಕ್ಷ ಉದ್ಯೋಗ ಸೃಷ್ಟಿ ಮಾಡುತ್ತೇವೆ ಎಂದಿದ್ದ ಬಿಜೆಪಿ ಸರ್ಕಾರ ತನ್ನ ಮಾತಿನ ಮೇಲೆ ನಿಂತಿಲ್ಲ. ರಾಜ್ಯದ ಜನತೆಗೆ ಉದ್ಯೋಗ ನೀಡುವಲ್ಲಿ ವಿಫಲವಾಗಿದೆ. ಇದುವರೆಗೂ ಬಿಜೆಪಿ 220 ತಿಂಗಳ ಆಡಳಿತದಲ್ಲಿ 225 “ಹಗರಣಗಳು” ಮಾಡಿದೆ ಎಂದು ಆರೋಪಿಸಿದ್ದಾರೆ.

ಕೇವಲ 21 ಮಂದಿಗೆ ಸರ್ಕಾರಿ ನೌಕರಿ

ಕಳೆದ ಮೂರು ವರ್ಷಗಳಲ್ಲಿ ಬಿಜೆಪಿ ಕೇವಲ 21 ಮಂದಿಗೆ ಸರ್ಕಾರಿ ನೌಕರಿ ನೀಡಿದೆ ಎಂದು ತಿಳಿದು ಬಂತು. ಈ ವಿಚಾರ ನನ್ನ ಗಮನಕ್ಕೆ ಬಂದಾಗ ಅನುಮಾನಗೊಂಡು 3 ಬಾರಿ ಪರಿಶೀಲಿಸಿದೆ. ಇದು ಸತ್ಯ ಎಂದು ಗೊತ್ತಾದ ಮೇಲೆ ನನಗೆ ಬೇಜಾರಾಯ್ತು ಎಂದರು.

ಕರ್ನಾಟಕ, ಹಿಮಾಚಲ ಪ್ರದೇಶದ ಜನ ಈ ಡಬಲ್​​ ಇಂಜಿನ್​​ ಸರ್ಕಾರಕ್ಕೆ ತಕ್ಕ ಪಾಠ ಕಲಿಸಿದ್ದಾರೆ. ಮಧ್ಯಪ್ರದೇಶದಲ್ಲೂ ಇದೇ ಫಲಿತಾಂಶ ಮುಂದುವರಿಯಲಿದೆ ಎಂದರು.

ವಿಶೇಷ ಸೂಚನೆ: ಕ್ರಿಕೆಟ್​ನ ವಿಶೇಷ ಸುದ್ದಿಗಳಿಗಾಗಿ ವೀಕ್ಷಿಸಿ ‘ರನ್ ಭೂಮಿ’ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ ಫಸ್ಟ್ ಚಾನೆಲ್

‘3 ವರ್ಷದಲ್ಲಿ ಕೇವಲ 21 ಮಂದಿಗೆ ಸರ್ಕಾರಿ ನೌಕರಿ ಕೊಟ್ಟ ಬಿಜೆಪಿ ಗವರ್ನ್​ಮೆಂಟ್​​’- ಪ್ರಿಯಾಂಕಾ ಗಾಂಧಿ ಕಿಡಿ

https://newsfirstlive.com/wp-content/uploads/2023/06/Priyanaka-Gandhi.jpg

Load More