RSS ಬ್ಯಾನ್ ಬಗ್ಗೆ ಪ್ರಿಯಾಂಕ್ ಖರ್ಗೆ ಹೇಳಿಕೆ.. ಖಾಲಿ ಡಬ್ಬದ ಸದ್ದಿಗೆ ಹೆದರಲಾದೀತೇ? ಎಂದ ಬಿಜೆಪಿ

author-image
Ganesh
Updated On
RSS ಬ್ಯಾನ್ ಬಗ್ಗೆ ಪ್ರಿಯಾಂಕ್ ಖರ್ಗೆ ಹೇಳಿಕೆ.. ಖಾಲಿ ಡಬ್ಬದ ಸದ್ದಿಗೆ ಹೆದರಲಾದೀತೇ? ಎಂದ ಬಿಜೆಪಿ
Advertisment
  • ‘ಕೇಂದ್ರದಲ್ಲಿ ನಮ್ಮ ಸರ್ಕಾರ ಬಂದ್ರೆ ಆರ್‌ಎಸ್‌ಎಸ್ ಬ್ಯಾನ್’
  • ಸಂಘ ಪರಿವಾರದ ವಿರುದ್ಧ ಸಚಿವ ಪ್ರಿಯಾಂಕ್ ಖರ್ಗೆ ಕಿಡಿ!
  • ದಂಡು ದಾಳಿಗೆ ಹೆದರಿಲ್ಲ ಎನ್ನುತ್ತಾ ವಿಜಯೇಂದ್ರ ಸಿಡಿಮಿಡಿ

ಆರ್‌ಎಸ್‌ಎಸ್‌ ನಾಯಕ ದತ್ತಾತ್ರೇಯ ಹೊಸಬಾಳೆ ಹೊತ್ತಿಸಿದ ಕಿಡಿ ರಾಜ್ಯದಲ್ಲಿ ಧಗಧಗಿಸಿದೆ. ಜಾತ್ಯಾತೀತ ಮತ್ತು ಸಮಾಜವಾದಿ ಪದ ತೆಗೆಯಬೇಕು ಎಂಬ ಮಾತಿನ ವಿರುದ್ಧ ಸಚಿವ ಪ್ರಿಯಾಂಕ್ ಖರ್ಗೆ ಗುಡುಗಿದ್ದಾರೆ. ಆರ್‌ಎಸ್‌ಎಸ್‌ ಬ್ಯಾನ್ ಮಾಡಬೇಕು ಅಂತ ಉರಿಯೋ ಬೆಂಕಿಗೆ ತುಪ್ಪ ಸುರಿದಿದ್ದಾರೆ. ಇದರ ವಿರುದ್ಧ ಕೇಸರಿ ಪಡೆ ನಿಗಿನಿಗಿ ಕೆಂಡ ಉಗುಳಿದೆ.

‘ಕೇಂದ್ರದಲ್ಲಿ ನಮ್ಮ ಸರ್ಕಾರ ಬಂದ್ರೆ RSS ಬ್ಯಾನ್’

ಕೇಂದ್ರದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ್ರೆ ಆರ್‌ಎಸ್‌ಎಸ್‌ನ ಬ್ಯಾನ್ ಮಾಡಬಹುದು ಅಂತ ಸಚಿವ ಪ್ರಿಯಾಂಕ್ ಖರ್ಗೆ ಹೇಳಿದ್ದಾರೆ. RSS ಅವರನ್ನ 2 ಬಾರಿ ಬ್ಯಾನ್ ಮಾಡಿದ್ವಿ, ನಾವು ಬ್ಯಾನ್ ತೆಗೆದಿದ್ದೇ ತಪ್ಪಾಯ್ತು ಅಂತ ಕಿಡಿಕಾರಿದ್ದಾರೆ.

ಇದನ್ನೂ ಓದಿ: ಟೀಂ ಇಂಡಿಯಾದಲ್ಲಿ ಇದೆ ಪ್ರಬಲ ಅಸ್ತ್ರ -2ನೇ ಟೆಸ್ಟ್​​ಗೆ ಕಣಕ್ಕಿಳಿಸಿದ್ರೆ ಗೆಲುವು ನಮ್ಮದೇ..!

publive-image

ಪ್ರಿಯಾಂಕ್ ಖರ್ಗೆ ಹೇಳಿದ್ದೇನು..?

ಜ್ಯಾತ್ಯಾತೀತ ಇರಬಹುದು, ಸಮಾನತೆ ಇರಬಹುದು, ಸಮನಾವಾದ ಅವಕಾಶಗಳು ಇರಬಹುದು. ಅವರಿಗೆ (ಆರ್​ಎಸ್​ಎಸ್​) ಅಲರ್ಜಿ ಇದೆ. ಅದು ಇವಾಗಿಂದ ಅಲ್ಲ. ಆ ಸಂಸ್ಥೆ ಹುಟ್ಟಿದಾಗಿನಿಂದಲೂ ಅಲರ್ಜಿ ಇದೆ. ಸಮಾನತೆ ಬಗ್ಗೆ ಅಲರ್ಜಿ ಇದೆ. ಆರ್ಥಿಕ ಸಮಾನತೆ ಬಗ್ಗೆ ಅಲರ್ಜಿ ಇದೆ. ಅದೆಲ್ಲ ಹೊಸದಲ್ಲ. ಮತ್ತೊಮ್ಮೆ ಪುನರುಚ್ಚರಿಸುತ್ತಿದ್ದಾರೆ. ನಾವು ಆರ್​ಎಸ್​​ಎಸ್​ ತತ್ವ ಸಿದ್ಧಾಂತವನ್ನು ಮುಂಚೆಯಿಂದಲೂ ವಿರೋಧ ಮಾಡಿಕೊಂಡು ಬಂದಿದ್ದೇವೆ. ಮುಂದೇನೂ ವಿರೋಧ ಮಾಡುತ್ತೇವೆ. ಈಗಾಗಲೇ ನಾವು ಹೇಳಿದ್ದೇನೆ. ಈ ಹಿಂದೆ ನಾವು ಆರ್​​ಎಸ್​​ಎಸ್​ನ ಬ್ಯಾನ್ ಮಾಡಲಾಗಿತ್ತು. ಆ ಬ್ಯಾನ್​ ತೆರವುಗೊಳಿಸಿದ್ದೇ ನಮ್ಮಿಂದ ತಪ್ಪಾಗಿದೆ. ಬ್ಯಾನ್ ಮಾಡಿದಾಗಲೆಲ್ಲ ಅವರೇ ಕೈಕಾಲು ಹಿಡಿದುಕೊಂಡು ಬಂದಿದ್ದರು. ಆಗ ದೇಶದ್ರೋಹ ಚಟುವಟಿಕೆ ಮಾಡಲ್ಲ ಅಂತಾ ಬಂದಿದ್ದರು. ಅದಕ್ಕೆಲ್ಲ ದಾಖಲೆಗಳು ಇವೆ. ಮುಂದೆ ನೋಡೋಣ. ಮುಂದೆ ಸೆಂಟ್ರಲ್ ಗೌರ್ನಮೆಂಟ್ ಬಂದಾಗ ನೋಡೋಣ ಎಂದಿದ್ದಾರೆ.

ಇದನ್ನೂ ಓದಿ: ಕನ್ನಡ ಸಂಘಟನೆಗಳ ಬಹುಕಾಲದ ಬೇಡಿಕೆ ಈಡೇರಿದೆ.. ಗಡಿ ಉಸ್ತುವಾರಿ ಸಚಿವರಾಗಿ HK ಪಾಟೀಲ್‌ ನೇಮಕ

ಪ್ರಿಯಾಂಕ್ ಖರ್ಗೆ ಸಂಘ ಬ್ಯಾನ್ ಮಾತಿಗೆ ಕೇಸರಿ ನಿಗಿನಿಗಿ

ಸಚಿವ ಪ್ರಿಯಾಂಕ್ ಖರ್ಗೆ ಸಂಘ ಪರಿವಾರ ಬ್ಯಾನ್ ಮಾಡಬೇಕು ಎಂಬ ಮಾತಿಗೆ ಕೇಸರಿ ಪಡೆ ನಿಗಿ ನಿಗಿ ಕೆಂಡವಾಗಿದೆ. ಕಾಂಗ್ರೆಸ್ ಸಚಿವರ ಮಾತಿನ ವಿರುದ್ಧ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಎಕ್ಸ್ ಮೂಲಕ ಗುಡುಗಿದ್ದಾರೆ. ದಂಡಿಗೆದರಲಿಲ್ಲ ದಾಳಿಗೆದರಲಿಲ್ಲ ಖಾಲಿ ಡಬ್ಬದ ಸದ್ದಿಗೆ ಹೆದರಲಾದೀತೇ? ಎನ್ನುತ್ತಾ ಪ್ರಿಯಾಂಕ್ ಖರ್ಗೆಗೆ ಛೇಡಿಸಿದ್ದಾರೆ.

ಖಾಲಿ ಡಬ್ಬದ ಸದ್ದಿಗೆ ಹೆದರಲಾದೀತೇ?

ಶತಮಾನ ಪೂರೈಸಿರುವ ಲಕ್ಷಾಂತರ ಸ್ವಯಂಸೇವಕರನ್ನು ಹೊಂದಿರುವ ರಾಷ್ಟ್ರದ ಹಾಗೂ ವಿಶ್ವದ ಏಕೈಕ ಮಹಾನ್ ದೇಶಭಕ್ತರ ಸಂಘಟನೆ ರಾಷ್ಟ್ರೀಯ ಸ್ವಯಂಸೇವಕ ಸಂಘ. ಈ ಪ್ರಖರ ಸತ್ಯವನ್ನು ಸಚಿವ ಪ್ರಿಯಾಂಕ್ ಖರ್ಗೆ ತಮ್ಮ ಹತಾಶೆಯ ಮನಸ್ಸಿನ ಬಾಗಿಲ ಕಿಂಡಿಯಿಂದ ಇಣುಕಿ ನೋಡಲಿ. ಆರ್‌ಎಸ್‌ಎಸ್‌ ಸಂಘಟನೆ ಮಹಾನ್ ವೃಕ್ಷ, ಈ ವೃಕ್ಷವನ್ನು ಬೇರು ಸಮೇತ ಕಿತ್ತೊಗೆಯುತ್ತೇವೆಂದು ಶತಮಾನಗಳಿಂದಲೂ ವಿಕೃತ ಮನಸ್ಸಿನ ರಾಜಕೀಯ ಶಕ್ತಿಗಳು ವ್ಯರ್ಥ ಪ್ರಲಾಪ ಮಾಡುತ್ತಲೇ ಇವೆ. ಕಾಂಗ್ರೆಸ್ ಮತ್ತೆ ಅಧಿಕಾರಕ್ಕೆ ಬರುವ ಮಾತಿರಲಿ, ಭವಿಷ್ಯದಲ್ಲಿ ಕಾಂಗ್ರೆಸ್ ಅಸ್ತಿತ್ವ ಉಳಿಯುತ್ತದೆಯೇ ಎಂಬ ಬಗ್ಗೆ ಪ್ರಿಯಾಂಕ್ ಖರ್ಗೆ ತಲೆಕೆಡಿಸಿಕೊಳ್ಳಲಿ. ದಂಡಿಗೆದರಲಿಲ್ಲ ದಾಳಿಗೆದರಲಿಲ್ಲ ಖಾಲಿ ಡಬ್ಬದ ಸದ್ದಿಗೆ ಹೆದರಲಾದೀತೇ? ಎಂಬ ಮಾತನ್ನು ಸಚಿವ ಪ್ರಿಯಾಂಕ್ ಖರ್ಗೆಗೆ ನೆನಪಿಸುವೆ-ಬಿ.ವೈ. ವಿಜಯೇಂದ್ರ, ಬಿಜೆಪಿ ರಾಜ್ಯಾಧ್ಯಕ್ಷ

ಸಂವಿಧಾನದಿಂದ ಶುರುವಾದ ವಾಗ್ಯುದ್ಧ ಸಂಘಪರಿವಾರಕ್ಕೆ ಬಂದು ನಿಂತಿದೆ. ಈ ವಾಕ್ಸಮರದಲ್ಲಿ ಸಂಘ ಪರಿವಾರ ಕೂಡಾ ಟಾಪಿಕ್ ಆಗಿರೋದು ಮತ್ತಷ್ಟು ಕಾವು ಹೆಚ್ಚಿಸಿದೆ. ಈ ಮಾತಿನ ಸಮರ ಮತ್ಯಾವ ಹಂತಕ್ಕೆ ಹೋಗುತ್ತೋ ರಾಜ್ಯದ ಜನತೆ ನೋಡುತ್ತಾ ಹೋಗೋದಷ್ಟೇ ಕೆಲಸ.

ಇದನ್ನೂ ಓದಿ: ‘5 ವರ್ಷ ನಮ್ಮ ಸರ್ಕಾರ ಬಂಡೆ ಥರ ಗಟ್ಟಿಯಾಗಿರುತ್ತೆ’.. DK ಕೈ ಎತ್ತಿ ನಾವು ಗಟ್ಟಿ ಎಂದ ಸಿಎಂ

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment