newsfirstkannada.com

ಕಿಯೋನಿಕ್ಸ್‌ ಅಕ್ರಮ; 400 ಕೋಟಿಗೂ ಹೆಚ್ಚು ಅವ್ಯವಹಾರ; ಸರ್ಕಾರದಿಂದ ಮಹತ್ವದ ನಿರ್ಧಾರ

Share :

Published February 4, 2024 at 10:22pm

    ಯಾವ್ಯಾವ ಅಧಿಕಾರಿಗಳು, ಜನಪ್ರತಿನಿಧಿಗಳು ಲಾಕ್ ಆಗ್ತಾರೆ?

    ಕಿಯೋನಿಕ್ಸ್ ಅಕ್ರಮಗಳ ತನಿಖೆಗೆ ಸಮಿತಿ ರಚಿಸಿದ ಸರ್ಕಾರ

    ಹಣಕಾಸು ನಿರ್ವಹಣೆಯಲ್ಲಿ ಲೋಪದೋಷ ಬಗ್ಗೆ ಆಕ್ಷೇಪ

ಕಿಯೋನಿಕ್ಸ್ ಕರ್ನಾಟಕ ರಾಜ್ಯ ವಿದ್ಮುನ್ಮಾನ ಅಭಿವೃದ್ಧಿ ನಿಗಮ. ಕಳೆದ ವರ್ಷದಲ್ಲಿ ನಿಗಮದಲ್ಲಿ ಭಾರೀ ಹಗರಣ ನಡೆದಿದೆ ಎಂಬ ಆರೋಪ ಕೇಳಿಬಂದಿತ್ತು. ಖುದ್ದು ಕಿಯೋನಿಕ್ಸ್​ ವೆಂಡರ್ ವೆಲ್​ಫೇರ್ ಅಸೋಷಿಯೇಶನ್​ ಸುದ್ದಿಗೋಷ್ಠಿ ನಡೆಸಿತ್ತು. ಸದ್ಯ ಈ ಕೇಸ್ ಸಂಬಂಧ ರಾಜ್ಯ ಸರ್ಕಾರ ಮಹತ್ವದ ತೀರ್ಮಾನ ತೆಗೆದುಕೊಂಡಿದೆ.

ಕಿಯೋನಿಕ್ಸ್ ಅಕ್ರಮಗಳ ತನಿಖೆಗೆ ಸಮಿತಿ ರಚಿಸಿದ ರಾಜ್ಯ ಸರ್ಕಾರ

ಕಿಯೋನಿಕ್ಸ್​ನಲ್ಲಿ 2018 ರಿಂದ 2023 ರವರೆಗಿನ ಬಿಜೆಪಿ ಸರ್ಕಾರದ ಅವಧಿಯಲ್ಲಿ ಹಣಕಾಸು ಅವ್ಯಹಾರ ನಡೆದ ಆರೋಪ ಕೇಳಿಬಂದಿದೆ. ಈ ಹಿನ್ನೆಲೆ ನಿವೃತ್ತ IAS ಅಧಿಕಾರಿ ಎಸ್​ಡಿ ಮೀನಾ ನೇತೃತ್ವದಲ್ಲಿ ತನಿಖಾ ಸಮಿತಿ ರಚಿಸಿ ಸರ್ಕಾರ ಆದೇಶಿಸಿದೆ. ಕಿಯೋನಿಕ್ಸ್ ಹಣಕಾಸು ನಿರ್ವಹಣೆಯಲ್ಲಿ ಲೋಪದೋಷ ಬಗ್ಗೆ ಆಕ್ಷೇಪ ಕೇಳಿಬಂದ ಹಿನ್ನೆಲೆಯಲ್ಲಿ ತನಿಖಾ ಸಮಿತಿ ರಚಿಸಲಾಗಿದೆ.

ಕಿಯೋನಿಕ್ಸ್​ನಲ್ಲಿ 400 ಕೋಟಿಗೂ ಅಧಿಕ ಅವ್ಯವಹಾರ ಆಗಿದೆ ಎಂದ ಖರ್ಗೆ

ಇನ್ನು, ಈ ಬಗ್ಗೆ ನಗರದಲ್ಲಿ ಮಾತನಾಡಿದ ಐಟಿ-ಬಿಟಿ ಸಚಿವ ಪ್ರಿಯಾಂಕ ಖರ್ಗೆ, ಕೆಲವರು ಬಂದು ಕಿಯೋನಿಕ್ಸ್​ನಲ್ಲಿ ಹಣ ಪಾವತಿ ಆಗ್ತಿಲ್ಲ ಅಂತ ಹೇಳಿದ್ರು. ನಾಲ್ಕೂವರೆ ವರ್ಷಗಳ ಆಡಿಟ್ ಮಾಡಿಸಿದಾಗ 400 ಕೋಟಿಗೂ ಅಧಿಕ ಅವ್ಯವಹಾರ ಆಗಿದೆ ಎಂಬ ವರದಿ ಬಂದಿದೆ. ಹೀಗಾಗಿ ತನಿಖೆಗೆ ಆದೇಶ ಮಾಡಲಾಗಿದೆ. 6 ತಿಂಗಳೊಳಗೆ ವರದಿ ನೀಡಲು ಸೂಚಿಸಿದ್ದೇವೆ ಎಂದಿದ್ದಾರೆ.
ಒಟ್ಟಾರೆ ಬಿಜೆಪಿ ಸರ್ಕಾರದ ಅವಧಿಯಲ್ಲಿ ನಡೆದಿದೆ ಎನ್ನಲಾದ ಹಗರಣಗಳ ಬಗ್ಗೆ ತನಿಖೆ ನಡೆಸಲು ಕಾಂಗ್ರೆಸ್ ಸರ್ಕಾರ ಮುಂದಾಗಿದೆ. ಇದರಲ್ಲಿ ಯಾವ್ಯಾವ ಅಧಿಕಾರಿಗಳು, ಜನಪ್ರತಿನಿಧಿಗಳು ಲಾಕ್ ಆಗ್ತಾರೋ ಕಾದು ನೋಡಬೇಕಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಕಿಯೋನಿಕ್ಸ್‌ ಅಕ್ರಮ; 400 ಕೋಟಿಗೂ ಹೆಚ್ಚು ಅವ್ಯವಹಾರ; ಸರ್ಕಾರದಿಂದ ಮಹತ್ವದ ನಿರ್ಧಾರ

https://newsfirstlive.com/wp-content/uploads/2023/12/PRIYANK.jpg

Load More